Friday, October 2, 2015

My friend Manjesh


When my Central College mate Mr G R Manjesh, posted to Delhi Karnataka Bhavan as liason officer, raised many eyebrows. After all he was from the Commercial Taxes Department, where officers are averse to go on deputation, that too out of Karnataka. But Mr Manjesh had no such hesitation. He had heard his friends, who had lived and worked in Delhi, talk about the excitement of the national capital and how the ministries controlled the fate of various States. He also had heard that a dedicated and focused official can get lot of things done. His being an extrovert whose motto was meet many new people every day also motivated him to take the Delhi assignment as a challenge. Mr Manjesh was also deeply interested in cultural activities like theatre, cinema,literature and folklore. Delhi has many national cultural centres like Sahitya Akademi, Lalit Kala Akademi, Sangeeta Natak Akademi, Indira Gandhi National Centre for Arts, Directorate of Film Festivals, apart from dozens of theatres and art galleries.
According to Mr K S Sachidananda Murthy, Resident Editor, The Week, Mr Manjesh handled the critical work of liaison with central ministries, including the Prime Minister’s Office and also the general administration of the Karnataka Bhavans, which meant reservations for VVIPs. As the main Bhavan had limited number of suites, and whenever there was a huge rush of VVIPs eligible for these suites, there would be ego clashes. He would handle such incidents deftly, and personally liaise with the VVIPs to ensure that they had the impression they were getting the best deal. There would be extra small gestures of protocol and courtesy which would keep the VVIP contented.
One of the most difficult jobs in Government of India is chasing files as they go up and down the heirarchy, which may mean seven or more desks on each way. Mr Manjesh, who was new to Delhi and did not know many bureaucrats, did not stand on pride. He reached out to senior officials of Karnataka working for ministers as well as ministries and took their guidance. Several Kannadigas who were on the personal staff of central ministers were contacted. One such official was Mr Bykere Nagesh, who had worked with the Prime Minister and several senior Union Ministers. Now Mr Nagesh is the Additional Special Representative of the Government of Karnataka in New Delhi and produced an annual book on the quantum of grants sanctioned and released for Karnataka under all central schemes, which is now being emulated by other State government representatives.
Mr Manjesh liaised with the both the Central government and with the state government. He was in constant touch with the offices of Chief Minister, Chief Secretary and Finance Department to ensure that the information sought by the Central government reached promptly. He was also constantly in touch with the Raj Bhavan and the Law Department as many legislation approved by the Legislature would come to Delhi for assent from the President, based on recommendation of Union Law and Home Ministries.
Even as he did his official work diligently, Mr Manjesh did not allow his interest in culture take a back seat. He was keen on Delhiites being exposed the rich aspects of Karnataka culture.
He ensured that the Department of Information tied up with the Delhi Karnataka Sangha for regular screening of Kannada films. He also persuaded the Department of Kannada and Culture send out teams of artistes and writers to Delhi. He was the perfect host for these cultural ambassadors of Karnataka.
Mr Manjesh was a hard working and compassionate representative of Karnataka during his years in Delhi. Several systems of co-ordination and liaison he introduced are still in vogue in Karnataka Bhavan.
That is why I edited a felicitation volume in his honour. It was released by Honourable Judge of Supreme Court Justice Gopala Gowda. Its title is Haasu Hokku.

Language and medium of Instruction

Language policy in Karnataka is in mess now. Recent Judgement of the Supreme Court made it more complicated. Karnataka has a history of more than three thousand years. Its main language Kannada has a literary history of one thousand five hundred years. It is one of the ancient languages of the world. It has classical literature dating back to 943 AD. First Kannada classical epic was reportedly written in that year. Several kingdoms ruled from Karnataka. Whole of southern India was once ruled by Kings of Karnataka. Kannada was the official language of several dynasties who ruled Karnataka and several south Indian states.
When East India Company took over the reigns of Indian States over two hundred years from 1757 AD and had full control over by 1857 AD, a sort of revolution started in all states including Karnataka. It had several dimensions. Social awareness created among the people due to new education system brought by Britisher. Education was opened to the natives. Majority of  the population was denied the education during the rule of local kings who were guided by court priests. The society was heirarchial. There was upper and lower classes in the social structure. Thousands of castes were emerged and most of them used for service purpose.
This scenario changed after the British rule. Education opened to all section of the society. People, belonged to lower sections, participated in the development of art and culture. It was a social, literary and economical revolution. It further enhanced after the Independence. Primacy to the regional languages prevailed after the re organisation of States based on languages. Karnataka emerged as one of the progressive States in the Union of India. Kannada was the official language in the States' administration. Efforts were under way to make it in all section of the administration, including judiciary and education.
But, with introduction of economic liberalisation, global industrial houses opened their outfits in India, particularly in Bangalore. It coincided with the Information Technology boom. Created thousands of job opportunities for the English knowing youths. This development had its impact on the education system of the Karnataka State. People madly rushed towards English medium Schools. Opening English Medium Schools became a profitable business. Politicians with the help of Officers opened thousands of English Medium Schools attracting students from higher and middle income groups. When people knew, communication skill in English fetch jobs, the rush to English Medium Schools increased and Government Schools which were teaching in Kannada suffered students loss.  State Government language policy was questioned in the court of law and resulted in the present situation.
Now, Karnataka Government Can not force any private school to teach in kannada medium. This situation may lead to the increase of English medium schools. Kannada will become unimportant and may be irrelevant in the course of time.
English language is very important now. We need English for communication. But getting knowledge in the early ages of learning, one has to get it through mother tongue. If we force English medium in children, whose childhood is surrounded by Kannada atmosphere, they may lag behind in learning. It is the major crisis as far as kannada literary world is concerned.

early days-2

I knew from my childhood that nobody cares if you are in the recieving end. I was fifth son to my parents. I could not say my parents neglected me during my preschool days. They both had to carry the family of eight children. I had two elder sisters too. When I joined School, my two elder brothers were married. Their wives and children were also living with us. It was a single family. My father, headed a joint family before my birth. My village had just six houses. All were from a single family line. The whole village belonged to a single family...

No one from the village was employed in Government set up. They were mainly depended on agriculture. Horticulture was another activity. Our family owned a hactare areca garden. It also fetches some income....


My early days..

My native place is about 400 km from Bangalore. I had my early schooling near my place. It was about three kilometers distance. I had to walk through paddy fields and small streams across before reaching the school. I joined for Class 1. My elder sister, who was at class 4 used to accompany me. So I had to walk almost six kilometer everyday during my primary education days. I was six year old and my parents thought I should not have any problem walking. I had to go alone when my sister could not accompany for any reason. My father, a farmer, was very strict about my education. Bunking the class was severe crime according to my father. He used to punish very hard if I bunk the class without reason.

My primary education of early four years went on smoothly. It was not an issue for my father to send me to the primary school, even though it was almost three kilometers away from the home. When I passed the class 4 and eligible to join class 5, my father started worrying. I had to walk at least 10 kilometers to reach the nearby Middle School if I decide to pursue further study. There was transport facility nearby.  Two private buses were passing near our village to take me to the nearest village where Middle School was functioning. Even then also I had to walk another two kilometers to reach the bus stand. That would have reduced my daily walking distance to four kilometers daily instead of six kilometers.

It was at that time my maternal uncle whom we were calling as Mava,visited our home. He stayed with us for the night also. That was the practice during those days (1960). He knew my problem of  and offered to take me to his home which is just three kilometers away from Middle School. Father agreed to send me only if Mava accepts some rice in return. My family, an agriculturist outfit, used to produce paddy. Mava agreed and I happily joined Middle School for class 5. I had to learn English from class 5. Teachers were strict. First English alphabets were introduced. We had to learn both upper and lower cases. Small words were introduced gradually. Few rhymes to memorize. I fail to understand why I should memorize a poem which indicate the fall of London Bridge.

Such questions always disturbed me all through my education. When I used to see movies during my college days I used to relate its contents to my surroundings.  Once, I was at college, happened to see a film Samskara. It was based on a novel by U R Ananthamurthy. It got national award. But I failed to understand the theme. It depicts a brahmin who defies the customs his community, rises the religious question after his death. Narayanappa was his name. Novel says he defied the Brahmin customs. So, when he died, no brahmin comes forward to conduct his last rites. I, belonging to a caste which does not have such customs, failed to understand why that Praneshacharya trying to find out from religious texts for a solution. In my village, once a dalit died and no one from his family to conduct his last rites. My cousins in the village took the responsibility and made arrangements for the respectable last rites. There was no discussion either from village elders. All they said was, any one, whether he is dalit or anybody should be accorded an hounarable farewell. My elders were not that learned like Praneshacharya. But found the solution easily. 

I found fictions are very misleading during my college days...
ಲಕ್ಷ್ಮಣ ಕೊಡಸೆ ಕೃತಿಗೆ ಬರಗೂರು ಪ್ರವೇಶ

1. ಪತ್ರಕರ್ತ- ಲೇಖಕನ ಮಾತಿಗೆ ಮೊದಲು 


ಪತ್ರಿಕಾರಂಗವನ್ನು ಪ್ರವೇಶಿಸಿದ ಅನೇಕ ಲೇಖಕರು ಪೂರ್ಣ ಪತ್ರಕರ್ತರಾಗಿ ಪರಿವರ್ತನೆ ಹೊಂದುವುದು ಅಥವಾ ಪತ್ರಿಕಾ ಲೇಖಕರಾಗಿ ರೂಪಾಂತರಗೊಳ್ಳುವುದು ಒಂದು ಅನಿವಾರ್ಯ ಪ್ರಕ್ರಿಯೆಯೆಂಬಂತೆ ಭಾವಿಸಲಾಗಿದೆ. ಇದು ಬಹುಪಾಲು ನಿಜವಾಗುತ್ತಿರುವುದು ಇಂತಹ ಭಾವನೆಗೆ ಸಮರ್ಥನೆಯಾಗಿ ಒದಗಿ ಬರುತ್ತಿದೆ. ಈ ಮಧ್ಯೆ ಅಪವಾದಗಳೂ ಇವೆಯೆಂಬುದನ್ನು ನಾವು ಮರೆಯಬಾರದು. ಆದರೆ ಪತ್ರಕರ್ತರಾಗಿದ್ದೂ ಮೂಲ ಲೇಖಕನ/ ಲೇಖಕಿಯ ಸತ್ವ ಮತ್ತು ಸಂವೇದನೆಗಳನ್ನು ಉಳಿಸಿಕೊಳ್ಳುವುದು ಒಂದು ಒಳಹೋರಾಟವೇ ಸರಿ. ಯಾವುದೋ ಅಧಿಕಾರಿಯಾಗಿರುವವರು, ಕಂಪೆನಿ ಕೆಲಸಗಾರರಾಗಿರುವವರು ಅಥವಾ ಅಂತಹ ಮಾದರಿಯ ಉದ್ಯೋಗ ಹಾಗೂ ವೃತ್ತಿಗಳಲ್ಲಿ  ತೊಡಗಿರುವವರು ತಮ್ಮ ದೈನಂದಿನ ಕ್ರಿಯೆಯಲ್ಲಿ `ಬರವಣಿಗೆ'ಯಲ್ಲಿ ನಿರತರಾಗುವುದಿಲ್ಲ. ಹೀಗಾಗಿ `ಬರವಣಿಗೆ'ಯು ಅವರಿಗೆ ಒಂದು `ಬಿಡುಗಡೆ'ಯಾಗಬಹುದು. ವೃತ್ತಿಯನ್ನು ಮೀರಿದ ಪ್ರವೃತ್ತಿಯಾಗಬಹುದು. ಹೊಸ ಸುಖವನ್ನು ಕೊಡುವ ಸಾಧನವಾಗಬಹುದು. ವಿಶೇಷ ಹೊಣೆಗಾರಿಕೆಯೂ ಆಗಬಹುದು. ಪತ್ರಕರ್ತರ ಪರಿಸ್ಥಿತಿ ಬೇರೆ. ವರದಿಗಾರರಿಗೆ ತಮ್ಮ ಇಷ್ಟಾನಿಷ್ಟಗಳನ್ನು ಬದಿಗೊತ್ತಿ ಯಾರ್ಯಾರದೊ ಭಾಷಣಗಳನ್ನು ವರದಿ ಮಾಡಬೇಕು; ಉಪಸಂಪಾದಕರು ಪುಟಗಳನ್ನು ಸಂಯೋಜಿಸಬೇಕು. ಸಂಪಾದಕರು ಉಸ್ತುವಾರಿಯ ಉರಿಯ ಉಯ್ಯಾಲೆಯಲ್ಲಿರಬೇಕು. ಇವರೆಲ್ಲರೂ ಕೆಲವೊಮ್ಮೆ ವಿಶೇಷ ವರದಿ, ವಿಶ್ಲೇಷಣೆ, ಲೇಖನಗಳನ್ನು ಬರೆಯುತ್ತಿರಬೇಕು. ಅಂದರೆ ವೃತ್ತಿಯಲ್ಲೂ ಬರವಣಿಗೆಯ ಕಾಯಕ; ಈ ಕಾಯಕವೇ `ಕೈಲಾಸ'ವಾದರೆ ಭೂಮಿ ಬದುಕಿನ ಸಂವೇದನೆಗಳ ಅಭಿವ್ಯಕ್ತಿ ಮಣ್ಣುಪಾಲಾಗುತ್ತದೆ. ಮಣ್ಣನ್ನು ಮರೆಯದ ಮನಸ್ಸು ಎಚ್ಚರವಾಗ್ದಿದರೆ, ಕತೆ - ಕವಿತೆಗಳ ಕಣ್ಣು ತೆರೆಯುತ್ತದೆ. ವರದಿ, ವಿಶೇಷ ವರದಿ, ಸುದ್ದಿ ವಿಶ್ಲೇಷಣೆಗಳಾಚೆಗಿನ ಹಾದಿ ಕಾಣುತ್ತದೆ. ಇಷ್ಟೆಲ್ಲ ಆಗಬೇಕಾದರೆ ಒಂದು ಒಳಹೋರಾಟ ನಡೆಯುತ್ತದೆ. ಈ ಹೋರಾಟ ಪ್ರಜ್ಞಾಪೂರ್ವಕವಾಗಿರಬಹುದು. ಅಥವಾ ಅಪ್ರಜ್ಞಾಪೂರ್ವಕವಾಗಿರಬಹುದು.
ಹಾಗಾದರೆ ಪತ್ರಿಕಾ ಬರವಣಿಗೆಯ ಕಿಮ್ಮತ್ತು ಕಡಿಮೆಯೆ? ನಾನು ಹಾಗೆಂದು ಭಾವಿಸಿಲ್ಲ. ಪತ್ರಿಕಾ ಬರವಣಿಗೆಯು ತನ್ನದೇ ಆದ ಜವಾಬ್ದಾರಿಯೊಂದನ್ನು ನಿರ್ವಹಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಜನರ ನಾಡಿ ಮಿಡಿತವನ್ನು ಅರಿಯುವ ಅವಕಾಶಗಳನ್ನು ಕಲ್ಪಿಸುತ್ತದೆ. ಪತ್ರಿಕಾ ಬರವಣಿಗೆಗೆ ಸಿಗಬೇಕಾದಷ್ಟು ಮಾನ್ಯತೆ ಸಿಗದೆ ಇದ್ದಾಗ ಕೆಲವರು ಅರೋಚಿಗಳೂ ಅಹಂಕಾರಿಗಳೂ ಆಗುವುದುಂಟು. ಜೊತೆಗೆ ಸಿನಿಕತನವನ್ನೇ ವಿಶಿಷ್ಟ ನೋಟವೆಂದು ಬಿಂಬಿಸುವುದುಂಟು. ಪತ್ರಕರ್ತರ ಮುಂದೆ ಭಯ ಮತ್ತು ವಿನಯಗಳನ್ನು ಅಭಿನಯಿಸುವುದನ್ನು ಬಿಟ್ಟು ಅವರ ಬರವಣಿಗೆಗೆ ಸಲ್ಲಬೇಕಾದ `ಸಾಂಸ್ಕೃತಿಕ ನ್ಯಾಯ'ವನ್ನು ಸಲ್ಲಿಸಿದರೆ ಅದು ನಿಜವಾದ ಗೌರವವಾಗುತ್ತದೆ. ನಿಜ; ಇದು ಬೇರೆಯದೇ ಚಚರ್ೆ. ಆದರೆ ಸಾಂಸ್ಕೃತಿಕ ನ್ಯಾಯದ ಬಗ್ಗೆ ಚಿಂತಿಸುವ ಪತ್ರಕರ್ತರಿಗೆ ಒಳತುಡಿತಗಳಿರುತ್ತವೆಯಾದ್ದದರಿಂದ ಇಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಿದ್ದೇನೆ. ಹೆಚ್ಚು ಜನರೊಂದಿಗೆ ಸಂವಾದಿಸಲು ಸಾಧ್ಯವಾಗುವ ಪತ್ರಿಕಾ ಬರವಣಿಗೆಯನ್ನು ನಾನು ಗೌರವಿಸುತ್ತೇನೆ.
ಪತ್ರಿಕಾ ಬರವಣಿಗೆಯ ಮಾದರಿಗಳಲ್ಲಿ ಮುಳುಗಿ ಮಣ್ಣಾಗದೆ, ಆ ಮಣ್ಣಲ್ಲೇ ಹೊಸ ಆಕಾರಗಳನ್ನು ಅರಳಿಸಲು ಸಾಧ್ಯವಾದ ಲೇಖಕರು ಪತ್ರಿಕೆಯ ನೆಲದಲ್ಲೂ ಮೂಲ ಸಂವೇದನೆಯ ಹಂಬಲಗಳಿಗೆ ಜಾಗ ಮಾಡಿಕೊಳ್ಳುತ್ತಾರೆ. ಇಂಥವರ ಸಾಲಿನಲ್ಲಿ ಗೆಳೆಯರಾದ ಲಕ್ಷ್ಮಣ ಕೊಡಸೆಯವರೂ ಒಬ್ಬರು. ಬಹಳ ಹಿಂದೆಯೇ ಭರವಸೆಯ ಕತೆಗಾರರಾಗಿ ಬೆಳೆಯುತ್ತಿದ್ದ ಕತೆಗಾರ ಕೊಡಸೆಯವರು ಪತ್ರಿಕಾ ಕೆಲಸಗಳಲ್ಲಿ ಕಳೆದು ಹೋಗುತ್ತಿದ್ದಾರೆಂದು ಅನ್ನಿಸುತ್ತಿರುವಾಗಲೇ ವಿವಿಧ ಅಭಿವ್ಯಕ್ತಿ ವಿನ್ಯಾಸಗಳ ಮೂಲಕ ಹೊರಬಂದು ಸಮತೋಲನ ಸಾಧಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಸಾಹಿತ್ಯ ಕೃಷಿಯ ಆಂತರಿಕ ತುಡಿತ ಮತ್ತು ಪತ್ರಿಕಾ ಬರವಣಿಗೆಯ ಪ್ರಾಮಾಣಿಕ ಅನಿವಾರ್ಯತೆಗಳ ನಡುವೆ ಸಾಧಿಸಿದ ಸಮತೋಲನದ ರೂಪವಾಗಿ `ಬಲ್ಲಿದರೊಡನೆ' ಎಂಬ ಅವರ ಈ ಕೃತಿ ಮೂಡಿ ಬಂದಿದೆ.
ಲಕ್ಷ್ಮಣ ಕೊಡಸೆ ಅವರಿಗೆ ಪತ್ರಿಕಾ ಬರವಣಿಗೆಯ ವ್ಯಾಪ್ತಿ ಮತ್ತು ಮಿತಿಗಳ ಬಗ್ಗೆ ಸ್ಪಷ್ಟ ತಿಳುವಳಿಕೆಯಿದೆ. ಅದನ್ನವರು ಮೊದಲ ಲೇಖನದಲ್ಲೇ ಅನಾವರಣಗೊಳಿಸಿದ್ದಾರೆ. ಪತ್ರಿಕಾ ಭಾಷೆ, ಬರವಣಿಗೆಯ, ಇತ್ಯಾದಿಗಳನ್ನು ಕುರಿತು ಅವರು ಸಾದರ ಪಡಿಸಿರುವ ಅಭಿಪ್ರಾಯಗಳು ಮನನೀಯವಾಗಿವೆ. ಕೆಲವನ್ನು ಇಲ್ಲಿ ಉಲ್ಲೇಖಿಸುತ್ತೇನೆ:
`ಪತ್ರಿಕಾ ಭಾಷೆ ಏನೇ ಇದ್ದರೂ ಅದರಲ್ಲಿ ಸಂವಹನದ ಗುಣವೇ ಬಹುಮುಖ್ಯವಾದದ್ದು. ಸಾಹಿತ್ಯದ ಭಾಷೆಗೆ ನಿದರ್ಿಷ್ಟ ಓದುಗ ವರ್ಗದ ನಿರೀಕ್ಷೆ ಇರುತ್ತದೆ. ಪತ್ರಿಕಾ ಭಾಷೆಗೆ ಅಕ್ಷರ ಬಲ್ಲ ಎಲ್ಲ ವರ್ಗವೂ ಸೇರುತ್ತದೆ.. ಯಾವುದೇ ವರ್ಗದ ಓದುಗನಿಗೂ ಗ್ರಹಿಸಲು ಸುಲಭವಾಗುವಂತೆ ಭಾಷೆಯನ್ನು ಬಳಸುವುದು ಪತ್ರಕರ್ತನ ಸವಾಲು'.
`ಸಮೂಹ ಮಾಧ್ಯಮಗಳಿಗೆ ಭಾಷೆಯೇ ಪ್ರಮುಖ ವಾಹಕ. ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವುದರಲ್ಲಿ ಅವುಗಳ ಯಶಸ್ಸು ಅಡಗಿದೆ. ಸ್ಥಳೀಯ ಬಳಕೆಗೆ ಅನುಗುಣವಾದ ಭಾಷೆ ಸೃಷ್ಟಿಸುವ ಆಪ್ತಧಾಟಿ ಬೇಕು'.
`ಬಹುಸಾಮಾನ್ಯ ಸಂಗತಿಯಲ್ಲಿಯೂ ವಿಶೇಷತೆಯನ್ನು ಕಾಣುವ ವರದಿಗಾರ ವಿಶೇಷ ಸಂದರ್ಭಗಳಲ್ಲಿ ಮಹತ್ವದ ಸಂವಹನಾ ಸಾಮಥ್ರ್ಯವನ್ನೇ ಪ್ರದಶರ್ಿಸಬಲ್ಲ. ಇತಿಹಾಸ ಪ್ರಸಿದ್ಧ ಸಂಗತಿಗಳನ್ನು ಕಣ್ಣಾರೆ ಕಂಡು ಸಮಯದ ಮಿತಿಯಲ್ಲಿ ವರದಿ ಮಾಡುವ ವ್ಯಕ್ತಿ ಹೃದಯಕ್ಕೆ ತಟ್ಟುವಂಥ ವರದಿ ಬರೆದನೆಂದರೆ ಅದು ಸಾರ್ಥಕ ಸಾಧನೆ'.
`ಪತ್ರಿಕಾ ಬರವಣಿಗೆ ಅವಸರದ ಸೃಷ್ಟಿ. ಅದಕ್ಕೆ ಸಾಹಿತ್ಯಕ ಚೌಕಟ್ಟು ಅಷ್ಟಾಗಿ ಇರುವುದಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸನ್ನಿವೇಶಗಳನ್ನು ಕಟ್ಟಿಕೊಡುವ ಚಿತ್ರಕ ಶಕ್ತಿ ಪತ್ರಿಕಾ ಬರಹಗಳಲ್ಲಿ ಇರುತ್ತದೆ. ಅದಕ್ಕೆ ವಿಶೇಷ ಸಂದರ್ಭಗಳಿರುತ್ತವೆ'.
`ಪತ್ರಿಕಾ ವಿಮಶರ್ೆಗೆ ಸ್ಥಳದ ಮಿತಿ ಇದೆ. ಅದೇ ಕಾರಣಕ್ಕೆ ಪತ್ರಿಕಾ ವಿಮಶರ್ೆ ಯಾವುದೇ ಸಾಹಿತ್ಯ ಕೃತಿಯ ಎಲ್ಲ ಆಯಾಮಗಳನ್ನೂ ಓದುಗರ ಎದುರು ತೆರೆದು ಇಡುವುದು ಕಷ್ಟ. ಹಾಗೆ ಮಾಡುವುದು ಸಾಧ್ಯವಿಲ್ಲ. ಅದಕ್ಕೆಂದೇ ವಿದ್ವಾಂಸರ ವಲಯಗಳಲ್ಲಿ ಸೂಕ್ತ ವೇದಿಕೆಗಳಿವೆ; ಸಾಹಿತ್ಯಕ ಪತ್ರಿಕೆಗಳಿವೆ. ನಿಯತಕಾಲಿಕೆಗಳಿವೆ'.
- ಹೀಗೆ ಅಭಿಪ್ರಾಯಗಳನ್ನು ಸಮರ್ಥವಾಗಿ ಮಂಡಿಸುವ ಲಕ್ಷ್ಮಣ ಕೊಡಸೆಯವರಿಗೆ ಅನುಭವದ ಆಸರೆಯಿದೆ; ಅರಿವಿನ ಅಂತರಂಗವಿದೆ. ಇವರ ಎಲ್ಲ ಮಾತುಗಳೂ ಪತ್ರಿಕಾ ಬರಹಗಳ ಸಂವಹನಾ ಸಾಧ್ಯತೆ ಮತ್ತು ಸ್ಥಳಮಿತಿಯ ಸುತ್ತ ರೂಪುಗೊಂಡಿವೆ. ಇಲ್ಲಿಯೇ ಇನ್ನೊಂದು ಮಾತನ್ನು ಹೇಳಬೇಕು: ನಮ್ಮ ಪತ್ರಿಕೆಗಳು ಎಲ್ಲ ವರ್ಗದ ಜನರನ್ನು ತಲುಪುವ ಭಾಷಾ ಬಳಕೆಗೆ ಆದ್ಯತೆ ನೀಡುವ ಅನಿವಾರ್ಯತೆಯಲ್ಲಿ ಭಾಷೆಗೊಂದು ಸಾಮಾನ್ಯ ವಿನ್ಯಾಸವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಕೆಲವೊಮ್ಮೆ ಹೊಸ ಪದಸಂಪದವನ್ನೂ ಹುಟ್ಟುಹಾಕುತ್ತವೆ. ಹೀಗಾಗಿ, ಈಗಾಗಲೇ ಜನರಲ್ಲಿ ಇವೆಯೆಂದು ಭಾವಿಸಲಾದ ಭಾಷಾ ಪ್ರಯೋಗಗಳ ಜೊತೆಗೆ ಹೊಸ ಪ್ರಯೋಗಗಳೂ ರೂಪು ತಾಳುತ್ತಾ ಬಂದಿವೆ. ಇಂತಹ ಹೊಸ ಪ್ರಯೋಗಗಳು ಮತ್ತು ಬರವಣಿಗೆಯ ವಿವಿಧ ಮಾದರಿಗಳು ಪತ್ರಿಕಾ ಬರಹವು ಜಡವಾಗದಂತೆ ಮಾಡಿವೆ. ಇಷ್ಟಕ್ಕೂ ಜನರಿಗೆ ಅರ್ಥವಾಗುವ ಭಾಷಾ ಸಂಪತ್ತನ್ನು ಇದಿಷ್ಟೇ ಎಂದು ನಿಖರಗೊಳಿಸುವುದು ಸಾಧ್ಯವೆ ಎಂಬ ಪ್ರಶ್ನೆಯೂ ಇದೆ. ಆದರೆ, ಪತ್ರಿಕಾ ಬರಹಗಾರರಿಗೆ ತಾನು ತಲುಪಬೇಕು ಎಂಬ ತಹತಹವು ಆಂತರಿಕ ಒತ್ತಾಸೆಯಾಗಿ ಕೆಲಸ ಮಾಡಿದರೆ ಸಂವಹನೆಯ ಸಾಧ್ಯತೆಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಹೀಗಾಗಿ ಪತ್ರಿಕಾ ಭಾಷೆಯು ಚಲಾವಣೆಯಲ್ಲಿರುವ ರೂಪಗಳನ್ನು ಒಳಗೊಳ್ಳುತ್ತಲೇ ಆಗಾಗ್ಗೆ ಹೊಸ ರೂಪಗಳನ್ನು ಚಲಾವಣೆಗೆ ತರುವುದರಿಂದ ಜೀವಂತವಾಗಿರುತ್ತದೆ; ಲಕ್ಷ್ಮಣ ಕೊಡಸೆಯವರಿಗೆ ಇದೆಲ್ಲ ಗೊತ್ತಿರುವ ವಿಚಾರವೇ ಆಗಿದೆ. ಅವರು ಮುಖ್ಯವಾಗಿ ಪತ್ರಿಕಾ ಬರಹದ ಸ್ವರೂಪವನ್ನು ಅಥರ್ೈಸುವ ಆಶಯವನ್ನು ಹೊಂದಿದ್ದು, ಅದನ್ನು ಸಾರ್ಥಕವಾಗಿ ಮಾಡಿದ್ದಾರ.ೆ ಅಷ್ಟೇ ಅಲ್ಲ, ಈ ಲೇಖನವು ಈ ಪುಸ್ತಕದ ಉಳಿದ ಲೇಖನಗಳ ಬಗ್ಗೆ ಲೇಖಕರೇ ಮಾಡಿಕೊಂಡ ಸ್ವವಿಮಶರ್ೆಯಂತೆಯೂ ಇದೆ.
ಲಕ್ಷ್ಮಣ ಕೊಡಸೆಯವರ ಈ ಕೃತಿಯ ಬಹುಪಾಲು ಲೇಖನಗಳು ಸಾಮಾಜಿಕ - ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ನೋಡಿದ ನೋಟಗಳಾಗಿವೆ. ಪತ್ರಕರ್ತರಾಗಿ ಸಂಪಕರ್ಿಸಬೇಕಾಗಿ ಬಂದವರನ್ನೂ ಒಳಗೊಂಡಂತೆ ಸಹಜ ಆಸಕ್ತಿಯಿಂದ ಭೇಟಿ ಮಾಡಿದ ಕುವೆಂಪು ಅವರಂಥವರನ್ನು ಕುರಿತ ನೋಟಗಳು ಇಲ್ಲಿ ದಾಖಲಾಗಿವೆ. ಕೆಲವರ ಬಗ್ಗೆ ಟಿಪ್ಪಣಿ ರೂಪದ ಬರಹಗಳಿದ್ದು, ಆಯಾ ಬರಹದ ಕೊನೆಯಲ್ಲಿ ಅವರ ಅಥವಾ ಅವರಿಗೆ ಸಂಬಂಧಿಸಿದ ಕೃತಿಯ ಪರಿಚಯ ವಿಶ್ಲೇಷಣೆಯನ್ನೂ ಕೊಡಲಾಗಿದೆ. ಕೆಲವು ಬರಹಗಳಲ್ಲಿ ಸಂದರ್ಶನಗಳನ್ನು ದಾಖಲಿಸಲಾಗಿದೆ. ಎಲ್ಲ ಲೇಖನಗಳಲ್ಲೂ ಕೊಡಸೆಯವರಲ್ಲಿನ ಲೇಖಕ ಮತ್ತು ಪತ್ರಕರ್ತ ಒಟ್ಟಾಗಿ ತೊಡಗಿಸಿಕೊಂಡ ಬಗೆಯನ್ನು ಕಾಣಬಹುದಾಗಿದೆ. ಅನೇಕ ಬರಹಗಳು ಪತ್ರಿಕೆಗಾಗಿ ರಚಿತವಾದ್ದರಿಂದ ಪ್ರಧಾನವಾಗಿ `ಪತ್ರಕರ್ತ' ಕೊಡಸೆಯವರು ಕಾಣಿಸಿಕೊಂಡರೂ `ಲೇಖಕ' ಕೊಡಸೆಯವರ ಒಳಗಣ್ಣು ತೆರೆದು ಕೊಂಡಿರುವುದು ಸ್ಪಷ್ಟವಾಗಿದೆ. ಇಡೀ ಪುಸ್ತಕದ್ಲಲಿ ಮೈ ಮತ್ತು ಮನಸ್ಸುಗಳ ಹೊಂದಾಣಿಕೆಯ ತಾಕಲಾಟವನ್ನು ಗುರುತಿಸಬಹುದಾಗಿದೆ. ಕೆಲವು ಲೇಖನಗಳಲ್ಲಿ `ಲೇಖಕ' ಮೈಯ್ಯಾದರೆ `ಪತ್ರಕರ್ತ' ಮನಸ್ಸಾಗುತ್ತಾನೆ. ಇನ್ನು ಕೆಲವು ಲೇಖನಗಳಲ್ಲಿ ಇದು ಅದಲು ಬದಲಾಗಿ `ಪತ್ರಕರ್ತ' ಮೈಯಾಗುತ್ತಾನೆ. `ಲೇಖಕ' ಮನಸ್ಸಾಗುತ್ತಾನೆ. ಈ ಹೊಂದಾಣಿಕೆಯ ಸ್ವರೂಪಕ್ಕೂ ಬರಹಗಳ ರೂಪಕ್ಕೂ ಸಂಬಂಧ ಕಲ್ಪಿತವಾಗುತ್ತದೆ.
ತಮ್ಮ ಕೃತಿಗೆ 'ಬಲ್ಲಿದವರೊಡನೆ' ಎಂದು ಹೆಸರಿಡುವುದರ ಮೂಲಕ ಬರಹಗಳಲ್ಲಿ ಮೂಡಿಬಂದ ಎಲ್ಲ ವ್ಯಕ್ತಿಗಳ ಬಗ್ಗೆಯೂ ತಮಗಿರುವ ಗೌರವವನ್ನು ಲೇಖಕರು ಪ್ರಕಟಿಸಿದ್ದಾರೆ. ಕೆಲವು ಬರಹಗಳಲ್ಲಿ ವಿಮಶರ್ಾತ್ಮಕ ಅಥವಾ ಟೀಕಾತ್ಮಕ ಮಾತುಗಳಿರಬಹುದು. ಇದರರ್ಥ ಲೇಖಕರಿಗೆ ಅವರ ಬಗ್ಗೆ ಗೌರವವಿಲ್ಲವೆಂದಲ್ಲ ಇಲ್ಲಿನ ಬರಹಗಳಲ್ಲಿ ಮೂಡಿ ಬಂದವರೆಲ್ಲ ಬಲ್ಲಿದರೇ ಆಗಿದ್ದಾರೆ. ಇವರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬಲ್ಲಿದರು - ಇದು ಲಕ್ಷ್ಮಣ ಕೊಡಸೆಯವರ ನೋಟ. ಇನ್ನೊಂದು ವಿಶೇಷವೆಂದರೆ ಈ ಕೃತಿಯಲ್ಲಿರುವ ಬರಹಗಳ ಶೀಷರ್ಿಕೆಗಳು ಆಯಾ ವ್ಯಕ್ತಿಯ ವ್ಯಕ್ತಿತ್ವದ ಮುಖ್ಯ ಅಂಶವೊಂದನ್ನು ಸೂಚಿಸುತ್ತದೆ. ಗಮನಿಸಿ: `ಕುವೆಂಪು: ಏಕಲವ್ಯರ ಸೃಷ್ಟಿಯಲ್ಲಿ' `ದೇಜಗೌ: ಎಲ್ಲಾ ಕನ್ನಡದ ಹೆಸರಲ್ಲಿ', `ಆರ್.ಸಿ. ಹಿರೇಮಠ: ನವ್ಯಕ್ಕೆ ಹಿಡಿಸದ ದಕ್ಷತೆ', `ಯು. ಆರ್. ಅನಂತಮೂತರ್ಿ: ಇ-ಮೇಲ್ ಪದ ಸಂಪದ', `ಟಿ. ವಿ. ವೆಂಕಟಾಚಲಶಾಸ್ತ್ರಿ: ಪ್ರಖರ ಪಾಂಡಿತ್ಯ', ಬಿ. ವಿ. ವೈಕುಂಠರಾಜು: `ಬಹುಮುಖೀ ಬರವಣಿಗೆ', `ಲಂಕೇಶ್: ಬಹುಮುಖ ಪ್ರತಿಭೆ', `ಎಂ. ಡಿ. ನಂಜುಂಡಸ್ವಾಮಿ: ದಣಿವರಿಯದ ಹೋರಾಟಗಾರ', `ಪೂರ್ಣಚಂದ್ರ ತೇಜಸ್ವಿ: ಹಿರಿಯಣ್ಣನ ಗದರಿಕೆ', `ಕೆ. ವಿ. ಸುಬ್ಬಣ್ಣ: ದೇಸಿಯ ಜಾಗತಿಕ ಚಿಂತಕ' - ಹೀಗೆ ಉದಾಹರಿಸಬಹುದು.
ಇಡೀ ಪುಸ್ತಕದಲ್ಲಿ ಕುವೆಂಪು, ಕೆ.ವಿ. ಸುಬ್ಬಣ್ಣ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಆರ್.ಸಿ. ಹಿರೇಮಠ, ಯು.ಆರ್. ಅನಂತಮೂತರ್ಿ- ಇವರನ್ನು ಕುರಿತ ಬರಹಗಳು ತುಂಬಾ ಗಮನಾರ್ಹವಾಗಿವೆ. ಈ ಉಳಿದ ಲೇಖನಗಳು ತಾವಾಗಿಯೇ ಹೇರಿಕೊಂಡ ಪುಟಮಿತಿಯಲ್ಲಿ ತಕ್ಕುದಾದ ಚಿತ್ರವನ್ನು ಕಟ್ಟಿಕೊಡುತ್ತವೆ. ಆದರೆ ಪುಟ ಮಿತಿಯನ್ನು ಮೀರಿದ ಬರಹಗಳು ಭೌತಿಕವಾಗಿಯಷ್ಟೇ ಅಲ್ಲ, ಅಂತಃಸತ್ವದಿಂದಲೂ ಮುಖ್ಯವಾಗಿರುವುದು ಕಂಡು ಬರುತ್ತದೆ. ಈ ಮಾದರಿಯ ಬರಹಗಳಲ್ಲಿ `ಲೇಖಕ' ಮನಸ್ಸು ಕೇಂದ್ರದಲ್ಲಿರುವುದು ಗಮನಿಸಬೇಕಾದ ಅಂಶವಾಗಿದೆ. ಕುವೆಂಪು ಅವರನ್ನು ಕುರಿತು ಬರೆದಿರುವ ಲೇಖನ ಎಷ್ಟು ಸಹಜವಾಗಿದೆಯೆಂದರೆ ಕೊಡಸೆಯವರ ಜಾಗದಲ್ಲಿ ನಾನೇ ಇದ್ದೇನೆಂದು ಅನಿಸತೊಡಗಿತು. ಹಳ್ಳಿಗಾಡಿನ ಹುಡುಗನೊಬ್ಬನ ಕನಸಿನ ಕಣ್ಣು ಅರಳುತ್ತಲೇ ಸ್ವಾಭಾವಿಕ ಹಿಂಜರಿಕೆಯಲ್ಲಿ ಮೊಗ್ಗಾಗುವ ಮನಸ್ಥಿತಿಯನ್ನು ಕೊಡಸೆಯವರು ಕತೆಗಾರನಂತೆ ಕಟ್ಟಿಕೊಡುತ್ತಾರೆ. ಈ ಅಭಿವ್ಯಕ್ತಿ ಸಾಧ್ಯತೆಯನ್ನು ತೇಜಸ್ವಿಯವರನ್ನು ಕುರಿತ ಬರಹದಲ್ಲೂ ಕಾಣಬಹುದಾಗಿದೆ. `ಬಲ್ಲಿದರೊಡನೆ' ಕಳೆದ ಕ್ಷಣಗಳಲ್ಲಿ ಕೊಡಸೆಯವರಿಗೆ ನಿಜಕ್ಕೂ ಬಲ್ಲಿದರಾಗಿ ಕಂಡವರು ಯಾರೆನ್ನುವುದನ್ನು ಆಯಾ ಬರಹಗಳ ಅಂತಃಸತ್ವವೇ ಅನಾವರಣಗೊಳಿಸುತ್ತದೆ. ಕುವೆಂಪು, ತೇಜಸ್ವಿ, ಲಂಕೇಶ್, ನಂಜುಂಡಸ್ವಾಮಿ- ಇಂಥವರನ್ನು ಕುರಿತು ಬರೆಯುವಾಗಿನ `ಮೈಮನಗಳ ಹೊಂದಾಣಿಕೆ' ಸಹಜವೆನ್ನುವಂತೆ ಮೂಡಿ ಬಂದಿದೆ. ಯಾಕೆ ಸಹಜ, ಯಾಕೆ ಆಪ್ತ, ಎಂಬ ಪ್ರಶ್ನೆಗಳಿಗೆ ಲಕ್ಷ್ಮಣ ಕೊಡಸೆಯವರ ಸಾಮಾಜಿಕ- ಸಾಂಸ್ಕೃತಿಕ ನೆಲೆ- ನಿಲುವುಗಳಲ್ಲಿ ಉತ್ತರವಿದೆ. ಹೀಗೆಂದ ಕೂಡಲೆ ಉಳಿದವರ ಬಗ್ಗೆ ಅನಾದರ ಅಥವಾ ಅನಾಸಕ್ತಿಯಿಂದ ಬರೆದಿದ್ದಾರೆಂದು ಭಾವಿಸಬೇಕಾಗಿಲ್ಲ. ಒಂದೊಮ್ಮೆ ಪತ್ರಿಕೆಗಾಗಿ ಬರೆದಿದ್ದರೂ ತಮಗೆ ಗೌರವವಿಲ್ಲವೆಂದಿದ್ದರೆ, ಅಂಥವರನ್ನು ಕುರಿತ ಬರಹಗಳನ್ನು ಈ ಕೃತಿಯಲ್ಲಿ ಕೈಬಿಡಬಹುದಿತ್ತು. ಕೊಡಸೆಯವರು ಹಾಗೆ ಮಾಡಿಲ್ಲ ಎನ್ನುವುದೇ ಅವರೆಲ್ಲರೂ `ಬಲ್ಲಿದರು'. ಅವರೆಲ್ಲರ ಬಗ್ಗೆಯೂ ಸಕಾರಾತ್ಮಕವಾಗಿಯೇ ಮಾಹಿತಿ ನೀಡುವ ಮೂಲಕ ಲೇಖಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಕೆಲವರ ಬಗ್ಗೆ ಇರಬಹುದಾದ `ಪೂವರ್ಾಗ್ರಹ'ಗಳನ್ನು ಎದುರು ಹಾಕಿಕೊಂಡು ಬೇರೊಂದು ನೆಲೆಯಲ್ಲಿ ಬರೆದಿದ್ದಾರೆ. ಈಗ ನೋಡಿ: ಆರ್.ಸಿ. ಹಿರೇಮಠ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ `ಸಾಹಿತ್ಯದ ಶ್ರೇಷ್ಠತೆ'ಗೆ ತಕ್ಕ ಆಯ್ಕೆಯಲ್ಲವೆಂದು ಭಾವಿಸಿದ ಕೆಲವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇನ್ನೊಂದು ಸಮ್ಮೇಳನವನ್ನು ನಡೆಸಿದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆಲವರನ್ನು ಗಮನಿಸಿದಾಗ ಆರ್.ಸಿ. ಹಿರೇಮಠರು ಅಧ್ಯಕ್ಷರಾದದ್ದೇನು ಮಹಾ ತಪ್ಪು- ಎಂದು ನನಗನ್ನಿಸಿದೆ; ಆ ವಿಷಯ ಇರಲಿ. ಲಕ್ಷ್ಮಣ ಕೊಡಸೆಯವರು ಆರ್.ಸಿ. ಹಿರೇಮಠರ ಬಗ್ಗೆ ಬರೆಯುತ್ತ `ನವ್ಯಕ್ಕೆ ಹಿಡಿಸದ ದಕ್ಷತೆ' ಎಂಬ ಶೀಷರ್ಿಕೆಯಲ್ಲೇ `ಶ್ರೇಷ್ಠತೆ'ಯ ಪ್ರತಿಪಾದಕರ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ಹಿರೇಮಠರು ಸಾಂಸ್ಥಿಕವಾಗಿ ಮಾಡಿದ ಅನೇಕ ಕೆಲಸಗಳನ್ನು ಸಾದರಪಡಿಸುತ್ತಾರೆ. ಈ ಬರಹವು ಹಿರೇಮಠರ ಆಯ್ಕೆಯ ಸಾಂಪ್ರದಾಯಿಕ ಸಮರ್ಥನೆಯಷ್ಟೇ ಆಗದೆ `ನವ್ಯರ ನೋಟ'ದ ಕೊರತೆಯನ್ನು ಪರೋಕ್ಷವಾಗಿ ಹೇಳುತ್ತದೆ. ಅಂತೆಯೇ ಕೆ.ವಿ. ಸುಬ್ಬಣ್ಣನವರ ಬಗ್ಗೆ ಬರೆದ ಬರಹವು ಇತಿಮಿತಿಗಳ ಚೌಕಟ್ಟಿನಲ್ಲಿ ಅವರನ್ನು ಗೌರವಯುತ ಸ್ಥಾನದಲ್ಲಿ ನಿಲ್ಲಿಸುತ್ತದೆ. ನಿಸಾರ್, ವೈಕುಂಠರಾಜು, ವೆಂಕಟಾಚಲಶಾಸ್ತ್ರಿ, ಜಿ. ವೆಂಕಟಸುಬ್ಬಯ್ಯ, ಶಂಕರ ಮೊಕಾಶಿ ಪುಣೇಕರ- ಮುಂತಾದವರನ್ನು ಕುರಿತ ಬರಹಗಳು ಪುಟಮಿತಿಯಲ್ಲೇ ಅವರವರ ವ್ಯಕ್ತಿತ್ವ ಮತ್ತು ಸಾಧನೆಯ ಕೆಲ ಅಂಶಗಳನ್ನು ಪರಿಚಯಿಸುತ್ತವೆ.
ಯು.ಆರ್. ಅನಂತಮೂತರ್ಿಯವರನ್ನು ಕುರಿತ ಬರಹದಲ್ಲಿ ಪತ್ರಕರ್ತರ ಇಕ್ಕಟ್ಟುಗಳನ್ನು ಏನೂ ಆಗಿಲ್ಲವೆನ್ನುವಂತೆ ನಿರುಮ್ಮಳವಾಗಿ ನಿರೂಪಿಸಿದ್ದಾರೆ- ಲಕ್ಷ್ಮಣ ಕೊಡಸೆಯವರು. ಅನಂತಮೂತರ್ಿಯವರು ತಮ್ಮ ಕೃತಿಯೊಂದರ ಬಗ್ಗೆ `ಪ್ರಜಾವಾಣಿ'ಯ `ಸಾಪ್ತಾಹಿಕ ಪುರವಣಿ'ಯಲ್ಲಿ ಪ್ರಕಟವಾದ ವಿಮಶರ್ೆಗೆ ಕೊಟ್ಟ ಶೀಷರ್ಿಕೆಯ ಬಗ್ಗೆ ತಕರಾರು ಎತ್ತಿ ಪ್ರಕ್ಷುಬ್ಧರಾದ `ಕಥಾನಕ'ವು ಸ್ವಾರಸ್ಯಕರವಾಗಿದೆ. ಲೇಖಕರಿಗೆ ಆಗುವ ನಿಜವಾದ ಅಥವಾ ಆರೋಪಿತ ಮುಜುಗರಗಳಿಂದ ಪತ್ರಕರ್ತ ಮಿತ್ರರು ಎದುರಿಸಬೇಕಾಗಿ ಬರುವ ಆಕ್ಷೇಪ ಅಥವಾ ಇಕ್ಕಟ್ಟುಗಳನ್ನು ಅನಂತಮೂತರ್ಿಯವರನ್ನು ಕುರಿತ ಬರಹದಲ್ಲಿ ಕಾಣಬಹುದು. ಒಂದು ಸ್ವಾರಸ್ಯಕರ ಅಂಶವೆಂದರೆ ಹಿಂದೆ ಲಕ್ಷ್ಮಣ ಕೊಡಸೆಯವರು ಮೈಸೂರಲ್ಲಿ ಕೆಲಸ ಮಾಡುತ್ತಿದ್ದಾಗ ದೇ. ಜವರೇಗೌಡರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡಿರುತ್ತಾರಾದರೂ ಮೈಸೂರಲ್ಲೇ ಇದ್ದ ಅನಂತಮೂತರ್ಿಯವರನ್ನು ಒಮ್ಮೆಯೂ ಮುಖತಃ ಭೇಟಿಯಾಗಿರುವುದಿಲ್ಲ. ಇದಕ್ಕೆ ಕೊಡಸೆಯವರು ಕೊಡುವ ಕಾರಣ: ಜಿ.ಪಿ. ಬಸವರಾಜು ಅವರು ಸಾಹಿತ್ಯ ಸಂಬಂಧಿ ವರದಿಗಳನ್ನು ಮಾಡುತ್ತಿದ್ದುದರಿಂದ ಅನಂತಮೂತರ್ಿಯವರ ಸಂಪರ್ಕ ಬರಲಿಲ್ಲ. ಇದು ಒಂದು ತಾಂತ್ರಿಕ ಕಾರಣದಂತೆ ಕಾಣುವುದು ಸಹಜ. `ಬಲ್ಲಿದರೊಡನೆ' ಪುಸ್ತಕವನ್ನು ಓದಿದಾಗ ಲಕ್ಷ್ಮಣ ಕೊಡಸೆಯವರ ಆಸಕ್ತಿಯ ಆದ್ಯತೆಗಳು ಕಾಣಿಸಿಕೊಳ್ಳುವ ಕ್ರಮವನ್ನು ಕಂಡಾಗ ದೇಜಗೌ ಅವರನ್ನು ಸಮೀಪದಿಂದ ಕಂಡದ್ದು, ಅನಂತಮೂತರ್ಿಯವರನ್ನು ದೂರದಿಂದ ಕಂಡದ್ದು ಸ್ವಯಂ ಸಾಮಾಜಿಕ ವ್ಯಾಖ್ಯಾನವಿರಬಹುದೆ ಎನ್ನಿಸುತ್ತದೆ. ಹಾಗೇ ಇದ್ದ ಪಕ್ಷದಲ್ಲಿ ತಪ್ಪೇನೂ ಇಲ್ಲ. `ದೇಜಗೌ' ಕುರಿತ ಲೇಖನಕ್ಕೆ ಕೊಟ್ಟಿರುವ `ಎಲ್ಲಾ ಕನ್ನಡದ ಹೆಸರಲ್ಲಿ' ಎಂಬ ಶೀಷರ್ಿಕೆಯಲ್ಲಿ ವ್ಯಂಗ್ಯವೂ ಇರಬಹುದಾದರೆ, ಸರಿಯಾಗಿದೆ ಎನ್ನಿಸುತ್ತದೆ!
ಒಟ್ಟಿನಲ್ಲಿ ಹೇಳುವುದಾದರೆ ಸುಲಲಿತ ಶೈಲಿ ಮತ್ತು ಸುಲಭ ಸಂವಹನೆಗಳ ನೆಲೆಯಲ್ಲಿ ವಿಶ್ಲೇಷಣೆಯ ಒಳ ಆಯಾಮವುಳ್ಳ ಬರಹಗಳನ್ನು ಕೊಡುವುದರ ಮೂಲಕ ಕೊಡಸೆಯವರು ಒಂದು ಉಪಯುಕ್ತ ಕೆಲಸ ಮಾಡಿದ್ದಾರೆ. ಈ ಕೆಲಸವನ್ನು ಸಂತೋಷದಿಂದ ನಿರ್ವಹಿಸಿದ್ದಾರೆ; ಸಂತೋಷ ಕೊಟ್ಟಿದ್ದಾರೆೆ.
ಮಾತು ಮುಗಿಸುವುದಕ್ಕೆ ಮುಂಚೆ ಒಂದು ವಿಷಯವನ್ನು ಪ್ರಸ್ತಾಪಿಸುವುದು ಅಗತ್ಯವಾಗಿದೆ. ಲೇಖಕರ ಆಶಯ ಸರಿಯಾಗಿದ್ದರೂ ಪದ ಬಳಕೆ ಸರಿಯಾಗಿಲ್ಲದ್ದಿದರೆ ತಪ್ಪು ಅರ್ಥಕ್ಕೆ ಕಾರಣವಾಗುವುದುಂಟು ಅಥವಾ ಪದಗಳನ್ನು ಅನ್ಯಾರ್ಥ ಮಾಡಿಕೊಂಡು ಬಳಸಿದರೆ ತಪ್ಪಾಗುವುದುಂಟು. ಕುವೆಂಪು ಅವರನ್ನು ಕುರಿತ ಲೇಖನದಲ್ಲಿ ಒಂದು ಕಡೆ ಕೊಡಸೆಯವರು ಹೀಗೆ ಬರೆದಿದ್ದಾರೆ: `ಕೆಲವು ವಿಮರ್ಶಕರು ಕುವೆಂಪು ಪ್ರಧಾನ ಧಾರೆಗೆ ಪಯರ್ಾಯವಾದ ಮಾರ್ಗವನ್ನು ತುಳಿದರೆಂದು ಬರೆಯುತ್ತಾರೆ. ಈ ಬಗೆಯ ವಿಮರ್ಶಕರ ದೃಷ್ಟಿಯಲ್ಲಿ ವಿದ್ಯೆಗೆ ವಾರಸುದಾರರಾಗಿದ್ದವರು ಅನುಸರಿಸುತ್ತಿದ್ದುದೇ ಪ್ರಧಾನಧಾರೆ. ಉಳಿದವರು ಆರಂಭಿಸಿದ್ದು ಅದಕ್ಕೆ ಪ್ರತಿಯಾದ ಪಯರ್ಾಯ ಧಾರೆ. ಜನಸಂಖ್ಯೆಯ ಶೇಕಡಾ ಮೂರು- ನಾಲ್ಕರಷ್ಟಿದ್ದ ಜನತೆ ನಿರ್ಣಯಿಸುತ್ತಿದ್ದುದೇ ಸಾಹಿತ್ಯದ ಮೌಲಿಕತೆ. ಅವರು ಅನುಸರಿಸುತ್ತಿರುವುದೇ ನಿಜವಾದ ಸಂಸ್ಕೃತಿ. ಉಳಿದ ಬಹುಸಂಖ್ಯಾತರದೇನಿದ್ದರೂ ಉಪ ಸಂಸ್ಕೃತಿ?' ಲಕ್ಷ್ಮಣ ಕೊಡಸೆಯವರ ಆಶಯ ಮತ್ತು ಆಕ್ಷೇಪವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆಶಯದ ಹಂತದಲ್ಲಿ ಅದರ ಯಥಾರ್ಥತೆಯನ್ನು ಸಾಮಾಜಿಕವಾಗಿ ಒಪ್ಪಬಲ್ಲೆ. ಆದರೆ ಇಲ್ಲಿ `ಪಯರ್ಾಯ ಧಾರೆ' ಮತ್ತು `ಉಪಸಂಸ್ಕೃತಿ' ಎಂಬ ಪದವನ್ನು ತಪ್ಪಾಗಿ ಬಳಸಲಾಗಿದೆ ಅಥವಾ ತಪ್ಪಾಗಿ ಅರ್ಥಮಾಡಿಕೊಂಡು ಬಳಸಲಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಪಯರ್ಾಯಧಾರೆ ಮತ್ತು ಉಪಸಂಸ್ಕೃತಿ- ಎಂಬ ಪದ ಮತ್ತು ಪರಿಕಲ್ಪನೆಗಳನ್ನು ಶ್ರೇಷ್ಠವಲ್ಲದ್ದು, ಮೌಲಿಕವಲ್ಲದ್ದು ಎಂದು ತಿಳಿಯಬೇಕಾಗಿಲ್ಲ. ಈ ಪದ ಮತ್ತು ಪರಿಕಲ್ಪನೆಗಳು ಹೀಗೆ ನಕಾರಾತ್ಮಕ ನೆಲೆಯಲ್ಲಿ ಬಳಕೆಗೆ ಬಂದಿಲ್ಲ. `ಪಯರ್ಾಯ ಧಾರೆ' ಎನ್ನುವುದನ್ನು ಪ್ರತಿಷ್ಠಿತ ವಲಯದ ಜಡ ಮೌಲ್ಯವ್ಯವಸ್ಥೆಯ ವಿರುದ್ಧವಾದ ಪ್ರತಿಭಟನಾತ್ಮಕ ಧಾರೆ- ಎಂದು ಗುರುತಿಸಲಾಗಿದೆ. ಅದೇ ಅರ್ಥದಲ್ಲಿ ಪಯರ್ಾಯಧಾರೆ ಎಂಬ ಪದವನ್ನು ಬಳಸುತ್ತ ಬರಲಾಗಿದೆ. ಆದ್ದರಿಂದ ಪಯರ್ಾಯಧಾರೆ ಎನ್ನುವುದು ಹೊಸ ಹಾದಿ ತೆರೆಯುವ ಮೌಲಿಕ ಮಾರ್ಗ. ಇನ್ನು `ಉಪ ಸಂಸ್ಕೃತಿ' ವಿಷಯ. ನಾನು ಕನರ್ಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ `ಉಪ ಸಂಸ್ಕೃತಿಗಳ ಅಧ್ಯಯನ ಮಾಲೆ'ಯನ್ನು ಆರಂಭಿಸಿ ಸುಮಾರು 40 ಸಂಶೋಧನ ಗ್ರಂಥಗಳನ್ನು ವಿವಿಧ ಲೇಖಕರಿಂದ ಬರೆಯಿಸಿ, ಪ್ರಧಾನ ಸಂಪಾದಕನಾಗಿ ಪ್ರಕಟಿಸಿದೆ. ಆಗ `ಉಪ ಸಂಸ್ಕೃತಿ' ಎಂಬುದು ಬಳಕೆಗೆ ಬಂತು. ಉಪಸಂಸ್ಕೃತಿಗಳ ಅಧ್ಯಯನವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆಯುತ್ತ ಬಂದಂತೆ ಕೆಲ `ಜಾನಪದ ತಜ್ಞರು' ಅಲ್ಲಲ್ಲೇ `ಉಪ ಸಂಸ್ಕೃತಿ'ಯೆಂಬ ಪದ ಬಳಕೆಗೆ ಆಕ್ಷೇಪವೆತ್ತಿದರು. ಇಂಥವರು `ಉಪ ಸಂಸ್ಕೃತಿ'ಯನ್ನು ಒಂದು ವಾಚ್ಯಾರ್ಥದ ಪದವಾಗಿ ನೋಡಿದರೇ ಹೊರತು ಧ್ವನ್ಯಾರ್ಥದ ಪರಿಕಲ್ಪನೆಯಾಗಿ ನೋಡಲಿಲ್ಲ. ಇಷ್ಟಕ್ಕೂ ಬುಡಕಟ್ಟು ಹಾಗೂ ಅಲೆಮಾರಿ ಜನಾಂಗಗಳ ಸಂಸ್ಕೃತಿಗಳನ್ನು `ಉಪ ಸಂಸ್ಕೃತಿಗಳು' ಎಂದು ಗುರುತಿಸಲಾಗಿತ್ತು. ವಿವಿಧ ಜಾತಿ-ಜನಾಂಗಗಳಲ್ಲಿ ಹುಟ್ಟಿ ಮಧ್ಯಮ ವರ್ಗವನ್ನು ಮುಟ್ಟಿದವರು ಮೇಲು ಮಧ್ಯಮ ವರ್ಗಕ್ಕೆ ಏರಿದವರು ಇಡೀ ದೇಶದಲ್ಲಿ ಕೆಲವು ನಿದರ್ಿಷ್ಟ ಜೀವನ ಮಾದರಿಗಳನ್ನು ಅನುಸರಿಸುತ್ತಿದ್ದು- ಯಾರಾದರೂ ಒಪ್ಪಲಿ ಬಿಡಲಿ- ಈ ಮಾದರಿಗಳೇ ಪ್ರಧಾನವಾಗಿವೆ. ಇದರರ್ಥ ಅವು ಶ್ರೇಷ್ಠವಾಗಿವೆ ಎಂದಲ್ಲ. `ಉಪ' ಎಂದಕೂಡಲೇ ಕನಿಷ್ಠ ಎಂದರ್ಥವೂ ಅಲ್ಲ. ಹಾಗೆ ಭಾವಿಸಿ `ಉಪ ಸಂಸ್ಕೃತಿ' ಎನ್ನಬಾರದು ಎಂದು ವಾದಿಸುವವರು ಹುಸಿ ವೈಭವೀಕರಣದ ವಾರಸುದಾರರಾಗುತ್ತಾರೆ. ಕೊಡಸೆಯವರು ಪ್ರಸ್ತಾಪಿಸಿರುವ `ಶೇಕಡಾ ಮೂರು- ನಾಲ್ಕರಷ್ಟಿದ್ದ ಜನತೆ'ಯನ್ನು ವಿರೋಧಿಸುವುದಕ್ಕೆ ಆ ಜನರ ಹುಸಿ ವೈಭವೀಕರಣವೂ ಒಂದು ಮುಖ್ಯ ಕಾರಣ ಎನ್ನುವುದನ್ನು ಮರೆಯಬಾರದು. `ಉಪಸಂಸ್ಕೃತಿ' ಎನ್ನುವ ಬದಲು ತಳಮೂಲ, ನೆಲಮೂಲ ಎನ್ನುವುದು ಯಾಕೆ ಸರಿಯಲ್ಲವೆಂದರೆ ಈಗಿನ ಅಲೆಮಾರಿ, ಬುಡಕಟ್ಟು ಜೀವನ ಮಾದರಿಯೇ ಸಂಸ್ಕೃತಿಯ ಅಥವಾ ಮನುಷ್ಯನ ಮೂಲವಲ್ಲ. ಇದೊಂದು ಸಾಮಾನ್ಯ ತಿಳುವಳಿಕೆಯ ಸಂಗತಿಯೆಂದು ತಜ್ಞರಿಗೆ ತಿಳಿಯಬೇಕಷ್ಟೆ. ಉಪಭಾಷೆ, ಕಿರುಸಂಸ್ಕೃತಿ ಎಂಬ ಪದಗಳು ಹೇಗೆ ಕಡಿಮೆ, ಕನಿಷ್ಠ ಎಂಬ ಅರ್ಥವನ್ನು ಕೊಡುವುದಿಲ್ಲವೊ `ಉಪಸಂಸ್ಕೃತಿ' ಎಂಬ ಪದ- ಪರಿಕಲ್ಪನೆ ಖಂಡಿತ ಕಡಿಮೆ, ಕನಿಷ್ಠ ಎಂಬ ಅರ್ಥ ಕೊಡುವುದಿಲ್ಲ, ಇಷ್ಟಕ್ಕೂ ಒಂದೇ ಉಪಸಂಸ್ಕೃತಿಯಿಲ್ಲ. ಲಕ್ಷ್ಮಣ ಕೊಡಸೆಯವರೇ ಈ ಪುಸ್ತಕದಲ್ಲಿ ಒಂದು ಕಡೆ `ಸಣ್ಣ ಕತೆ (ಅದು ನಿಜಕ್ಕೂ ದೊಡ್ಡದೇ)' ಎಂದು ಹೇಳಿದ್ದಾರೆ. `ಉಪಸಂಸ್ಕೃತಿ' ಪದವನ್ನು ಅನ್ಯಾರ್ಥ ಮಾಡಿಕೊಂಡವರಿಗೆ ಇದೂ ಒಂದು ಉತ್ತರವಾದೀತು. ನಾನು ಇಷ್ಟು ಮಾತುಗಳನ್ನು ಹೇಳಿದ್ದು ಕೊಡಸೆಯವರಲ್ಲಿ ತಪ್ಪು ಹುಡುಕಲು ಖಂಡಿತ ಅಲ್ಲ. `ಉಪಸಂಸ್ಕೃತಿ'ಯೆಂಬ ಪದ ಮತ್ತು ಪರಿಕಲ್ಪನೆಯನ್ನು ಚಾಲ್ತಿಗೆ ಕೊಟ್ಟವನಾಗಿ ನಾನು ಇಷ್ಟು ಹೇಳಬೇಕಾಯಿತು. ಕೆಲವರು ಅನ್ಯಾರ್ಥ ಮಾಡಿ ಪ್ರಚುರ ಪಡಿಸಿದ್ದರಿಂದ ಕೊಡಸೆಯವರೂ ಅದೇ ಅರ್ಥದಲ್ಲಿ ಬೆಳಸುವಂತಾಗಿದೆ; ಅಷ್ಟೆ. `ಪಯರ್ಾಯ ಧಾರೆ'ಗೂ ಇದೇ ಮಾತನ್ನು ಹೇಳಬಹುದು.
ಕಡೆಯಲ್ಲಿ ಒಂದು ಮುಜುಗರದ ಮಾತು; ನನಗೆ ಲೇಖನಗಳನ್ನು ಕಳಿಸಿ ಎಲ್ಲಾ ಮುಗಿದ ಮೇಲೆ ಲಕ್ಷ್ಮಣ ಕೊಡಸೆಯವರು- `ಈ  ಪುಸ್ತಕದಲ್ಲಿ ನಿಮ್ಮ ಬಗ್ಗೆಯೂ ಒಂದು ಲೇಖನ ಇದೆ. ನಿಮಗೆ ಕಳಿಸಿಲ್ಲ ಅಷ್ಟೆ' ಎಂದರು. ಅವರು ಏನಾದರೂ ಬರೆದಿರಲಿ- ನನ್ನನ್ನು ಕುರಿತ ಲೇಖನವನ್ನು ಒಳಗೊಂಡ ಪುಸ್ತಕಕ್ಕೆ ನಾನೇ ಮುನ್ನುಡಿರೂಪದ ಮಾತುಗಳನ್ನು ಬರೆದದ್ದು ಸಂಕೋಚವನ್ನುಂಟು ಮಾಡುತ್ತದೆ. ಆದರೇನು ಮಾಡಲಿ- ನನ್ನನ್ನು ಸಂಕೋಚದಿಂದ ಪಾರು ಮಾಡುವುದು ಬಿಡುವುದು ಗೆಳೆಯ ಲಕ್ಷ್ಮಣ ಕೊಡಸೆಯವರ ಕೈಯ್ಯಲ್ಲಿದೆ, ಅದು ಅವರ ಹಕ್ಕು. (ಬಲ್ಲಿದರೊಡನೆ ಕೃತಿಗೆ ಬರೆದ ಮುನ್ನುಡಿ)
---
ಬರಗೂರು ರಾಮಚಂದ್ರಪ್ಪ, ನಂ.275, 11-ಬಿ ಕ್ರಾಸ್, 14ನೇ ಮೇನ್, ಜೆಪಿ ನಗರ 2ನೇ ಹಂತ, ಬೆಂಗಳೂರು-560078
2. ಬಾಲ್ಯದ ಬದುಕು

ಸಕರ್ಾರದ ಲೆಕ್ಕದಲ್ಲಿ ನಮ್ಮೂರು ಗ್ರಾಮವಲ್ಲ. ಗ್ರಾಮದ ವ್ಯಾಪ್ತಿಯಲ್ಲಿನ ಮಜರೆ ಹಳ್ಳಿ. ಪ್ರಾಯಃ ಮಜರೆ ಎಂದರೆ ಅಧಿಕೃತವಲ್ಲದ ವಸತಿ ಪ್ರದೇಶ ಎಂಬ ಅರ್ಥ ಸಕರ್ಾರದ ದಾಖಲೆಗಳಲ್ಲಿದೆಯೇನೊ .. `ಹೊಸನಗರ ತಾಲೂಕು ಹುಂಚಾ ಹೋಬಳಿ ಮೂಗುಡತಿ ಗ್ರಾಮದ ಮಜರೆ ಕೊಡಸೆ ವಾಸಿ..' ಎಂಬುದು ನಮ್ಮ ಹಳ್ಳಿಯ ಕುರಿತಾಗಿ ಸಕರ್ಾರಕ್ಕೆ ಅಹವಾಲು ಸಲ್ಲಿಸುವಾಗ ಮಾಡುತ್ತಿದ್ದ ಸಂಕ್ಷಿಪ್ತ ಪರಿಚಯ. ಕಂದಾಯ ಅಧಿಕಾರಿಗಳಲ್ಲಿ ಮಜರೆ ಎಂಬುದು ಸುಪರಿಚಿತ ಮಾಹಿತಿ. ಒಮ್ಮೆ ಹೊಸನಗರದ ತಹಶೀಲ್ದಾರ್ ಟಿ.ಕೆ. ರೂಪಕಲಾ ಅವರಲ್ಲಿ ನಮ್ಮೂರಿನ ಹೆಸರು ಹೇಳಿದ್ದಕ್ಕೆ `ಅದು ಮಜರೆ ಹಳ್ಳಿಯಲ್ಲವಾ?' ಎಂದು ತಮ್ಮ ನೆನಪನ್ನು ದೃಢಪಡಿಸಿಕೊಂಡಿದ್ದರು. ಅಂಥ ಹಳ್ಳಿಯೊಂದರಲ್ಲಿ ಹುಟ್ಟಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಲ್ಲದೆ ಪ್ರಜಾವಾಣಿ ಪತ್ರಿಕೆಯಲ್ಲಿ ಮೂರುದಶಕಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶ ಪಡೆದದ್ದು ನನ್ನ ಮಟ್ಟಿಗೆ ಅದೃಷ್ಟ. ಸಣ್ಣ ಮಟ್ಟದ ಸಾಹಿತ್ಯಕ ಕೆಲಸಗಳನ್ನೂ ಈ ಅವಧಿಯಲ್ಲಿ ಮಾಡಲು ಸಾಧ್ಯವಾಗಿದ್ದು ನನಗೆ ಆಶ್ಚರ್ಯಕರ ಸಂಗತಿ. ಅಕ್ಷರ ಪ್ರಪಂಚಕ್ಕೆ ಕಾಲಿರಿಸಿದ ಮೊದಲ ಪೀಳಿಗೆಯವನಾದ ನನಗೆ ಬರವಣಿಗೆ ಬದುಕಿನ ಮಾರ್ಗವಾಗಿ ಪರಿಣಮಿಸಿದ್ದು ಆಕಸ್ಮಿಕ. ವೃತ್ತಿ ಬದುಕಿನ ಅಂಚಿನಲ್ಲಿ ನಿಂತಾಗ ವೈಯಕ್ತಿಕ ಜೀವನದ ಎಷ್ಟೋ ಸಂಗತಿಗಳು ಕಾಡುತ್ತಿದ್ದ ಕಾರಣ ಅವಕ್ಕೆಲ್ಲ ಅಕ್ಷರ ರೂಪ ಕೊಡುವ ದುಸ್ಸಾಹಸಕ್ಕೆ ಪ್ರೇರಣೆಯಾಯಿತು. ಇದನ್ನು ದುಸ್ಸಾಹಸ ಎಂದು ಹೇಳುವುದಕ್ಕೆ ಕಾರಣ ನನಗೂ ಸ್ಪಷ್ಟವಾಗಿ ತೋಚುತ್ತಿಲ್ಲ. ಆದರೆ, ನನ್ನ ಈವರೆಗಿನ ಯಾವ ಸಾಹಿತ್ಯ ಚಟುವಟಿಕೆಯೂ ಮುಖ್ಯವಾಹಿನಿಯಲ್ಲಿ(?) ಗಮನ ಸೆಳೆದಿಲ್ಲ. ಪತ್ರಿಕೆಯಲ್ಲಿ ಇದ್ದ ಕಾರಣಕ್ಕೆ, ಆ ಸಂದರ್ಭದಲ್ಲಿ ಸಂಪರ್ಕಕ್ಕೆ ಬಂದ, ಪತ್ರಿಕೆಯಿಂದಲೇ ಖ್ಯಾತರಾದ ಅನೇಕರು ನನ್ನ ಬರಹಗಳನ್ನು ಮೌಖಿಕವಾಗಿ ಮೆಚ್ಚಿರುವಂತೆ ತೋರಿಸಿಕೊಳ್ಳುವುದಿದೆ. ಆದರೆ ನನ್ನ ಯಾವುದೇ ಸಾಹಿತ್ಯ ಪ್ರಕಾರದ ಬಗ್ಗೆ, ಕೃತಿಯ ಬಗ್ಗೆ ವಿಮರ್ಶಕರು ತಮ್ಮ ಉಪನ್ಯಾಸಗಳಲ್ಲಾಗಲೀ, ಲೇಖನಗಳಲ್ಲಾಗಲೀ ಉಲ್ಲೇಖಿಸಿದ್ದು, ಪ್ರಸ್ತಾಪಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಆಪ್ತ ಮಿತ್ರ ನರಹಳ್ಳಿ ಬಾಲಸುಬ್ರಹ್ಮಣ್ಯ ನಾನು ಶ್ರೋತೃವಾಗಿ ಭಾಗವಹಿಸಿದ್ದ ಕೆಲವು ಸಭೆಗಳಲ್ಲಿ ನನ್ನ ಕಥಾಸಾಹಿತ್ಯಕ್ಕೆ ಯೋಗ್ಯ ಗೌರವ ಸಿಕ್ಕಿಲ್ಲವೆಂದು ಪ್ರಸ್ತಾಪಿಸಿದ್ದುಂಟು (ಅದಕ್ಕಾಗಿ ನಾನು ಅವರಿಗೆ ತುಂಬ ಕೃತಜ್ಞ). ನನ್ನ ಬರಹಗಳಿಗೆ ಸಂಬಂಧಿಸಿ ವಿಶ್ಲೇಷಣಾತ್ಮಕ ಲೇಖನಗಳು ತುಂಬ ಅಪರೂಪ. ಇದಕ್ಕಾಗಿಯೇ ನನ್ನ ಬರಹಗಳ ಬಗ್ಗೆ ಸಾರಸ್ವತ ಲೋಕದ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ನನ್ನ ವ್ಯಾಪ್ತಿಗೆ ಮೀರಿದ್ದೆಂದೇ ಭಾವಿಸುತ್ತೇನೆ. ಯಾವುದೇ, ಸಾಹಿತ್ಯಕ, ಸಾಂಸ್ಕೃತಿಕ ಹಿನ್ನೆಲೆ ಇಲ್ಲದ ಹಳ್ಳಿ, ಸಮುದಾಯದಿಂದ ಬಂದ ವ್ಯಕ್ತಿ ರಾಜಧಾನಿಯಲ್ಲಿ ಗೌರವಯುತ ಹುದ್ದೆ ಸಂಪಾದಿಸಿ ಸ್ವಂತ ಬದುಕನ್ನು ಕಟ್ಟಿಕೊಳ್ಳುವುದೇ ಪವಾಡಸದೃಶ ಬದಲಾವಣೆ. ಬರವಣಿಗೆ ಪ್ರಕಟವಾಗುವುದಕ್ಕೆ ಅವಕಾಶ ಸಿಕ್ಕಿರುವುದು ನಿಜಕ್ಕೂ ಪವಾಡವೇ. ಕಾಳಿದಾಸ ತನ್ನ ರಘುವಂಶ ಕಾವ್ಯಾರಂಭದಲ್ಲಿ `ಪ್ರಾಂಶು ಲಬ್ಧೇ ಫಲೇ ಲೋಭಾತ್ ಉದ್ಭಾಹುರಿವ ವಾಮನಃ' ಎಂದೇನೋ ಹೇಳಿಕೊಂಡಿದ್ದನೆಂದು ಬಿಎ (ಆನಸರ್್) ತರಗತಿಯಲ್ಲಿ ಓದಿದ್ದ ನೆನಪು. ನನ್ನ ಸಾಹಿತ್ಯಕ್ಕೆ ವಿಮರ್ಶಕರ ಮನ್ನಣೆ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳುವುದೆಂದರೆ ಕುವೆಂಪು ಕಾದಂಬರಿಯೊಂದರಲ್ಲಿ ಉಲ್ಲೇಖವಾದ `ಅಂಬಲಿ ಕುಡಿಯೋನು ಅಂಬರಕ್ಕೆ ಹಾರೋಕೆ ಆಸೆ ಪಟ್ಟ' ಎಂಬ ಗಾದೆಯನ್ನು ನಿಜ ಮಾಡಿದಂತಾಗುತ್ತದೆ, ಅಷ್ಟೆ.    
ಪತ್ರಕರ್ತನಾಗಿ ವೃತ್ತಿಯನ್ನು ನಡೆಸಿದವನು. ಅದನ್ನು ಕರ್ತವ್ಯ ಎಂದು ಭಾವಿಸಿದವನು. ವೃತ್ತಿಯ ಗೌರವ, ಸಾಮಾಜಿಕ ಹೊಣೆಗಾರಿಕೆಗಳ ಮಧ್ಯೆ ಸಮತೋಲನ ಸಾಧಿಸಲು ಕಸರತ್ತು ಪಡುತ್ತ ಇದ್ದ ಬಗ್ಗೆ ಸಮಾಧಾನ ಹೊಂದಿರುವ ನನಗೆ, ಬರವಣಿಗೆಗೆ ಸಾರಸ್ವತ ಲೋಕದ ಮಾನ್ಯತೆ ಪಡೆಯುವ ಬಗ್ಗೆ ನಿರೀಕ್ಷೆಗಳಿಲ್ಲ. ನಾನು ಆಸಕ್ತಿ ವಹಿಸಿ ಬರೆದ, ಬರೆಸಿದ ಕೆಲವು ಸಾಮಾಜಿಕ ಚಿಂತನೆಯ ವಿಶೇಷ ವರದಿಗಳಿಗೆ ಸಕರ್ಾರ ಗಮನ ಕೊಟ್ಟಿದೆ ಎಂಬ ಸಮಾಧಾನವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶತಮಾನಗಳಿಂದ ನಡೆಯುತ್ತಿದ್ದ `ಅಜಲು' ಎಂಬ ಅಮಾನವೀಯ ಆಚರಣೆಯ ಕುರಿತಾಗಿ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ, ಅದಕ್ಕೆ (ಆ ಆಚರಣೆಯ ಬಗ್ಗೆ) ವ್ಯಕ್ತವಾದ ಸಾರ್ವಜನಿಕ ವಿರೋಧ, ಸಕರ್ಾರ ಅಜಲು ಪದ್ಧತಿಯನ್ನು ನಿಷೇಧಿಸುವುದಕ್ಕೆ ಕಾರಣವಾಯಿತು. ಬಸವರಾಜ ಸಂಪಳ್ಳಿ ಎಂಬ ಕಿರಿಯ ಸಹೋದ್ಯೋಗಿಗೆ ಧೈರ್ಯ ತುಂಬಿ ಹೇಳಿ ಬರೆಸಿದ ಮಡೆಮಡೆಸ್ನಾನ ಕುರಿತಾದ ಸಾಂದಭರ್ಿಕ ಲೇಖನ, ಆ ಪದ್ಧತಿಯ ಬಗ್ಗೆ ವ್ಯಾಪಕ ಚಚರ್ೆಗೆ ನೆಪವಾಯಿತು. ರಾಜ್ಯದಾದ್ಯಂತ ಪ್ರಗತಿಪರ ಸಂಘಟನೆಗಳು ಎಂಜಲು ಎಲೆಯ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನದ ನಿಷೇಧಕ್ಕೆ ಸಕರ್ಾರವನ್ನು ಒತ್ತಾಯಿಸಿದವು. ಒಂದು ಪತ್ರಿಕಾ ವರದಿ ಸಾಮಾಜಿಕ ಜಾಗೃತಿಗೆ ನೆರವಾಗುತ್ತದೆ. ಆ ಪ್ರಕ್ರಿಯೆಯಲ್ಲಿ ಒಂದು ಸಣ್ಣ ಪಾತ್ರ ವಹಿಸಿದ ತೃಪ್ತಿ ಪತ್ರಿಕೆಯಲ್ಲಿನ ಎಲ್ಲ ಉದ್ಯೋಗಿಗಳಿಗೂ ಸಿಗುತ್ತದೆ. ಅಂಥ ತೃಪ್ತಿಯನ್ನು ಆಗಾಗ ಪಡೆದ ಧನ್ಯತೆ ನನ್ನದು.  
ತಮ್ಮ ಬರಹಗಳ ಮೂಲಕ ನನ್ನಂಥವರಲ್ಲಿ ಸ್ವತಂತ್ರ ವಿಚಾರಧಾರೆಯನ್ನು ಮೂಡಿಸಿದವರು ಕುವೆಂಪು. ವಿದ್ಯಾಥರ್ಿದೆಸೆಯಲ್ಲಿ ಅವರನ್ನು ಎರಡು ಸಲ ನಿಕಟವಾಗಿ ಭೇಟಿ ಮಾಡಿದ ಅನುಭವ ನನ್ನ ಮೇಲೆ ಬೀರಿದ ಪ್ರಭಾವ ಅಪಾರ. ಬೆಂಗಳೂರಿನಲ್ಲಿ ನನ್ನ ಬಿ.ಎ (ಆನಸರ್್) ಪದವಿ ಪ್ರದಾನ ಘಟಿಕೋತ್ಸವ ಭಾಷಣವನ್ನು ಕುವೆಂಪು ಅವರೇ ಮಾಡಿದ್ದರು. ಅದೊಂದು ಐತಿಹಾಸಿಕ ಸಮಾವೇಶ. ಘಟಿಕೋತ್ಸವಕ್ಕೆ ಬಂದಿದ್ದವರು ಮರುದಿನವೇ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರೂ ಭಾಗಿಯಾಗಿದ್ದ ಆ ಸಮಾರಂಭದಲ್ಲಿ ಕುವೆಂಪು ಅವರ ಉಪಸ್ಥಿತಿಯೇ ತುಂಬ ಪರಿಣಾಮಕಾರಿಯಾಗಿತ್ತು. ಕುವೆಂಪು ಸಾಹಿತ್ಯವಂತೂ ಬಾಲ್ಯದಿಂದಲೇ ಪರಿಚಿತವಾದದ್ದು. ಅದು ನನ್ನ ಬದುಕಿನ ಗುರಿಯನ್ನು ನಿದರ್ೇಶಿಸುವಷ್ಟು ಪ್ರಭಾವ ಬೀರಿದೆ. ನನ್ನ ಚಿಂತನೆಯನ್ನು ಪ್ರಭಾವಿಸಿದೆ. ಸಮಾಜದ ಕೆಳವರ್ಗದ ವ್ಯಕ್ತಿಗಳಿಗೆ ಸಾಹಿತ್ಯದಲ್ಲಿ ಸ್ಥಾನ ನೀಡಿದ ಕುವೆಂಪು ಸಾಮಾನ್ಯ ವ್ಯಕ್ತಿಯನ್ನು ಶ್ರೀಸಾಮಾನ್ಯ ಎಂದು ಕರೆದು ಗೌರವಿಸಿದವರು. ವಿದ್ಯಾಥರ್ಿಯನ್ನು ಗೌರವ ತಪಸ್ವಿ ಎಂದು ಬಣ್ಣಿಸಿ ಕಲಿಕೆಯ ಪ್ರಕ್ರಿಯೆ ತಪಸ್ಸಿಗೆ ಕಡಿಮೆಯಾದದ್ದಲ್ಲ ಎಂದು ಗುರುತ್ವವನ್ನು ನೀಡಿದವರು. ವರ್ಷಗಳು ಕಳೆದಂತೆ ಅವರ ಸಾಹಿತ್ಯ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದೆ ಎಂಬುದು ನನ್ನ ಅನಿಸಿಕೆ.

`ಇವರ ಕಾಟ ಅತಿಯಾಯ್ತು..'  
ಊರಿನಲ್ಲಿ ನಮ್ಮದು ಹುಲ್ಲಿನ ಮನೆ. ಮಣ್ಣಿನ ಗೋಡೆ ಇದ್ದುದು ಅದಕ್ಕೊಂದು ಭದ್ರತೆ ನೀಡಿತ್ತು. ಸಣ್ಣದೊಂದು ಅಂಗಿ, ಚಡ್ಡಿ ಹಾಕಿಕೊಂಡು ಮನೆಯಲ್ಲಿದ್ದಾಗ ಅಕ್ಕಮ್ಮ (ನನ್ನ ಎರಡನೇ ಅಕ್ಕ, ಜಾನಕಮ್ಮ) ನೆರೆಮನೆಯ ಹುಡುಗಿಯರೊಂದಿಗೆ ಮನೆಯಿಂದ ಮೂರು ಕಿಲೋಮೀಟರ್ ದೂರದ ಕಣಬಂದೂರು ಶಾಲೆಗೆ ಹೋಗಿ ಬರುತ್ತಿದ್ದಳು. ಮನೆಯ ಸುತ್ತಮುತ್ತ ತಿರುಗಾಡುತ್ತ ಬೇಕುಬೇಕಾದ ಆಟ ಆಡಿಕೊಂಡಿದ್ದವನಿಗೆ ಒಂದು ಮಧ್ಯಾಹ್ನ, ಕೊಟ್ಟಿಗೆಯ ಬಳಿ ತಮ್ಮನ ಜೊತೆಗೆ ಜಗಳವಾಗಿ ಅದು ವಿಕೋಪಕ್ಕೆ ಹೋಯಿತು. ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವನಾಗಿದ್ದರೂ ಆಳುತನದಲ್ಲಿ ಅವನಿಗಿಂತ ಪೀಚೇ ಆಗಿದ್ದ ನನ್ನ ಮೇಲೆ ತಮ್ಮ ತನ್ನ ಪುಟ್ಟ ಕೈಗಳಿಂದ ಹಲ್ಲೆ ನಡೆಸಿ ಮುಖ ಪರಚಿದ್ದ. ಕೆನ್ನೆಯ ಬಳಿ ಉಗುರು ತಾಗಿ ಸಣ್ಣದೊಂದು ಬರೆ ಹಾಕಿದಂತೆ ಗಾಯವೂ ಆಗಿತ್ತು. ಸಣ್ಣಗೆ ರಕ್ತ ಜಿನುಗಿರಬೇಕು. ನೋವು ಮತ್ತು ತಮ್ಮನಿಂದ ಪರಚಿಸಿಕೊಂಡ ಅಪಮಾನದಿಂದ ಅವನನ್ನು ಅಟ್ಟಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಚುರುಕಾಗಿದ್ದ ತಮ್ಮ, `ಅವ್ವಾ, ಇವನು ಹೊಡೀತಾನೆ' ಎಂದು ಆರ್ತನಾದ ಮಾಡುತ್ತ ಅಂಗಳದಿಂದ ಜಗುಲಿ ಹತ್ತಿ ಒಳಮನೆಗೆ ನುಗ್ಗಿ ಅಡುಗೆಮನೆಯಲ್ಲಿದ್ದ ಅವ್ವನ ಸೀರೆ ನೆರಿಗೆಯಲ್ಲಿ ಅಡಗಿಕೊಂಡ. ಮುಖದಲ್ಲಿ ಪರಚಿ ಗಾಯ ಮಾಡಿದ್ದ ತಮ್ಮನ ವಿರುದ್ಧ ಸಾಕ್ಷ್ಯ ಸಮೇತ ವರದಿ ನೀಡಿ ಶಿಕ್ಷೆ ಕೊಡಿಸಬೇಕು ಎಂದು ಅಳುತ್ತಾ ಬೆನ್ನತ್ತಿದವನು ನಡುಮನೆಯಿಂದ ಹೊರಬರುತ್ತಿದ್ದ ಅಪ್ಪನ ಕಾಲಿಗೆ ಡಿಕ್ಕಿ ಹೊಡೆದು ನಿಂತುಬಿಟ್ಟೆ.
`ಈ ಹುಡುಗರ ಕಾಟ ಜಾಸ್ತಿಯಾಯ್ತು..' ಎಂದು ಅಸಹನೆ ವ್ಯಕ್ತಪಡಿಸಿದ ಅಪ್ಪ `ನಿಲ್ಲೋ ಅಲ್ಲಿ, ಯಾಕೋ ಅವನ್ನ ಬೆನ್ನಟ್ಟಿ ಹೊಡಿತೀಯಾ' ಎಂದು ಹಠಾತ್ತಾಗಿ ಬಂದ ಕೋಪದಿಂದ ರಟ್ಟೆ ಹಿಡಿದು ನಿಲ್ಲಿಸಿದ. ಮುಖದಲ್ಲಿ ರಕ್ತ ಜಿನುಗುತ್ತಿರುವುದನ್ನು ನೋಡಿದರೆ ಅದಕ್ಕೆ ಕಾರಣನಾದ ತಮ್ಮನನ್ನು ಹಿಡಿದು ಹೊಡೆಯುತ್ತಾನೆ ಎಂದು ನಿರೀಕ್ಷಿಸಿ `ಅವನು ಹೊಡೆದ..' ಎಂದು ತಮ್ಮನತ್ತ ಕೈ ತೋರಿಸಿ ಅಳುತ್ತಳುತ್ತಲೇ ಹೇಳಿದೆ. ಯಾವ ಚಿಂತೆಯಲ್ಲಿದ್ದನೋ ಅಪ್ಪ, `ನಿಮಗೆ, ತಿಂದ ಸೊಕ್ಕು.. ದೊಡ್ಡ ಕತ್ತೆಯಾಗಿದ್ದೀಯಾ, ನಿಮ್ಮನ್ನ ಹೀಗೆ ಬಿಟ್ರೆ ಹಾಳಾಗಿ ಹೋಗ್ತೀರಿ..' ಎಂದು, ಮೊದಲೇ ಅಳುತ್ತಿದ್ದ ನನ್ನ ರೆಟ್ಟೆಯನ್ನು ಎಡಗೈಯಲ್ಲಿ ಎತ್ತಿ ಹಿಡಿದು ಬಲಗೈಯಿಂದ ಪೃಷ್ಟದ ಮೇಲೆ ರಪ್ಪರಪ್ಪನೆ ಬಾರಿಸಿದ. ಚುರುಕಾಗಿದ್ದ ಪೆಟ್ಟಿನ ಏಟಿಗೆ ಇನ್ನಷ್ಟು ನೋವಾಯಿತಾದರೂ ಜೋರಾಗಿ ಅತ್ತರೆ ಮತ್ತಷ್ಟು ಪೆಟ್ಟು ಬೀಳುವ ಭಯದಿಂದ ಬಾಯಿ ಅದುಮಿಕೊಂಡು ಸುಮ್ಮನಾದೆ. ಉಸಿರು ತಡೆಹಿಡಿದ ಕಾರಣ ಬಿಕ್ಕಳಿಸುವಂತಾಯಿತು.
`ಇವರ ಕಾಟ ಅತಿಯಾಯ್ತು..' ಎಂದು ಹೇಳುತ್ತ `ಏಯ್, ಇವನ ಮುಖ ತೊಳೆದು ಬಟ್ಟೆ ಹಾಕಿ ಕಳಿಸು' ಎಂದು ಒಳಗಡೆ ಆಜ್ಞಾಪಿಸಿದ ಅಪ್ಪ. ಅವನು ಅವ್ವನನ್ನು ಕರೆಯುತ್ತಿದ್ದುದೇ ಹಾಗೆ. ನಾನು ಅಷ್ಟಕ್ಕೆ ಸಮಾಧಾನಗೊಂಡು ಅವ್ವನನ್ನು ಅರಸಿ ಅಡುಗೆ ಮನೆ ಪ್ರವೇಶಿಸಿದೆ. ಕತ್ತಲು ತುಂಬಿದ ಅಡುಗೆ ಮನೆ. ಅಪ್ಪನ ಆಣತಿಯಂತೆ ಅವ್ವ ಒಳಗೆ ಬಂದಿದ್ದ ನನ್ನನ್ನು ಹಿಡಿದು ಹಿತ್ತಲು ಕಡೆ ಬಾಗಿಲ ಬಳಿ ಕರೆದೊಯ್ದು ತಣ್ಣೀರಿನಿಂದ ಮುಖ ತೊಳೆದಳು. ಆಗಷ್ಟೆ ಉಗುರಿನ ಗಾಯವಾಗಿದ್ದರಿಂದ ನೋವು ಮತ್ತಷ್ಟು ಜೋರಾಗಿ ತಡೆದುಕೊಳ್ಳಲಾಗದೆ ಕಿರುಚಿದೆ. `ಏನಂತೆ ಅವನಿಗೆ, ಯಾಕೆ ಹಂಗೆ ಒರಲ್ತಾನೆ' ಎಂದು ಅಪ್ಪ ಜಗುಲಿಯಿಂದಲೇ ಗುಡುಗಿದಾಗ ಮತ್ತೆ ಉಸಿರು ಹಿಡಿದುಕೊಂಡೆ. ಕೆನ್ನೆಯ ಗಾಯದ ಉರಿ ಮತ್ತಷ್ಟು ಜಾಸ್ತಿಯಾದರೂ ಕೂಗಿಕೊಳ್ಳುವಂತೆ ಇರಲಿಲ್ಲ.                                            
ಆಗಿನ್ನೂ ಅಂಗನವಾಡಿ, ಬಾಲವಾಡಿಗಳ ಪರಿಕಲ್ಪನೆ ಹಳ್ಳಿಗಳಿಗೆ ಕಾಲಿಟ್ಟಿರಲಿಲ್ಲ. ಊರಲ್ಲಿ ಶಾಲೆ ಇಲ್ಲದಿದ್ದರೆ ಹತ್ತಿರದ ಊರಿನಲ್ಲಿ ಇರುವ ಶಾಲೆಗೆ ಸೇರಿಸಬೇಕು ಎಂಬ ಭಾವನೆ ಮನೆ ಹಿರಿಯರಿಗೆ ಬರಬೇಕೆಂದರೆ ಮನೆಯಲ್ಲಿನ ಸಣ್ಣ ಮಕ್ಕಳ ಉಪಟಳ ಮೇರೆ ಮೀರಿ ಅವರ ಗಮನ ಸೆಳೆಯಬೇಕಿತ್ತು. ಮೂರು ವರ್ಷ ತುಂಬುವುದರಲ್ಲಿ ಮಾತಾಡುವುದನ್ನು ಕಲಿತಿರುತ್ತಿದ್ದ ಮಕ್ಕಳು ಮನೆಯ ಸುತ್ತಲಿನ ಗದ್ದೆ, ಹಕ್ಕಲಿನ ಕಲ್ಲು ಮಣ್ಣಿನಲ್ಲಿ ಉರುಳುತ್ತ ಹೊರಳಾಡುತ್ತ, ಕೆಸರಿನಲ್ಲಿ ಬೀಳುತ್ತ ಏಳುತ್ತ, ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡು ಮನೆಯಲ್ಲಿದ್ದ ಮಹಿಳೆಯರಿಗೆ ಕಾಟ ಕೊಡುತ್ತ ಕಳೆಯುತ್ತಿದ್ದ ದಿನಗಳು. ನಮ್ಮದು ರೈತ ಕುಟುಂಬ. ಹಳ್ಳಿಯಲ್ಲಿ ಬೇಸಾಯ ಬಿಟ್ಟರೆ ಬೇರೆ ಕಸುಬು ಗೊತ್ತಿರಲಿಲ್ಲ. ಅವರ ಯಾವತ್ತೂ ಮಾತುಕತೆಗಳು ಬೇಸಾಯ, ಬೆಳೆ ರಕ್ಷಣೆ, ಕುಸಿದ ಧಾರಣೆ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಿದ್ದವು. ಅಪ್ಪ, ಅಣ್ಣಂದಿರು ಕೃಷಿಯ ಕೆಲಸಗಳಿಗಾಗಿ ಬೆಳಗ್ಗೆ ಹೊರಟು ಮಧ್ಯಾಹ್ನ ಊಟಕ್ಕೆ ವಾಪಸಾಗುವವರೆಗೆ ಮನೆಯಲ್ಲಿ ಮಕ್ಕಳದೇ ಸಾಮ್ರಾಜ್ಯ. ಮನೆ ಸುತ್ತಮುತ್ತ ಓಡಾಡಲು ಆರಂಭಿಸಿದ ಮೇಲೆ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲು ಮನೆಯ ಹೆಂಗಸರಿಗೂ ಆಗುತ್ತಿರಲಿಲ್ಲ. ಬೆಳಿಗ್ಗೆ ಹೊಟ್ಟೆಗೆ ಹಾಕಿದರೆ ಮತ್ತೆ ಹಸಿವಾದಾಗ ಅಡುಗೆ ಮನೆಗೇ ಬಂದು ಊಟಕ್ಕೆ ಒತ್ತಾಯಿಸುತ್ತಿದ್ದರಿಂದ ಮೂರು- ನಾಲ್ಕು ವರ್ಷದ ಮಕ್ಕಳಿಗಾಗಿ ಹೆಚ್ಚಿನ ಗಮನ ಕೊಡಲಾಗುತ್ತಿರಲಿಲ್ಲ. ಆಟ, ಮನೆ ಬದಿ ತಿರುಗಾಟದಲ್ಲಿ ಮುಳುಗಿರುತ್ತಿದ್ದ ಮಕ್ಕಳು ತಮ್ಮತಮ್ಮಲ್ಲಿ ಹೊಡೆದಾಡಿ ಗಾಯ ಮಾಡಿಕೊಂಡು ದೂರು ತಂದಲ್ಲಿ, `ಇವರ ಉಪಟಳ ಜಾಸ್ತಿಯಾಯಿತು, ಇಸ್ಗೂಲಿಗೆ ಹಾಕಬೇಕು' ಎಂಬ ಉದ್ಗಾರ ಬರುತ್ತಿತ್ತು.
ಐದು ವರ್ಷ ತುಂಬಿದ್ದ ನನಗೆ, `ಇವನಿಗೆ ಮೇಷ್ಟರಿಂದ ಎರಡು ಬೀಳಬೇಕು' ಎಂದು ಆ ಕ್ಷಣವೇ ತೀಮರ್ಾನಿಸಿದ ಅಪ್ಪ, ಗದ್ದೆ ಸಾಲಿನ ಕಾಲುಹಾದಿಯಲ್ಲಿ ಕೋಡಿಕೊಪ್ಪದ ಶಾಲೆಗೆ ಕರೆತಂದ (ಆ ಹಳ್ಳಿಗೆ ಕಣಬಂದೂರು ಎಂಬ ಇನ್ನೊಂದು ಹೆಸರೂ ಇತ್ತು. ಅದೇ ಈಗ ಚಾಲ್ತಿಯಲ್ಲಿದೆ). ನಾಲ್ಕನೇ ತರಗತಿಯ ಹುಡುಗರನ್ನು ಆಟಕ್ಕೆ ಬಿಟ್ಟು ಮೂರನೇ ತರಗತಿಯ ಮಕ್ಕಳಿಗೆ ಏನೋ ಪಾಠ ಹೇಳುತ್ತಿದ್ದ ಗಿರಿಯಪ್ಪ ಮೇಷ್ಟರು, ಅಪ್ಪ ನನ್ನನ್ನು ತಳ್ಳಿಕೊಂಡು ಒಳಗೆ ಪ್ರವೇಶಿಸಿದಾಗ ಪಾಠ ನಿಲ್ಲಿಸಿ ವಿಚಾರಿಸಿದರು. `ಇಸ್ಗೂಲಿಗೆ ಸೇರಿಸಲು ಬಂದಿದ್ದಾಗಿ' ಅಪ್ಪ ಹೇಳಿದಾಗ ಅವರು ಪುಸ್ತಕವೊಂದನ್ನು ತೆರೆದು ಏನನ್ನೋ ಬರೆದುಕೊಂಡರು. ಹುಟ್ಟಿದ ತಾರೀಕು ಕೇಳಿದಾಗ ಅಪ್ಪ ಯಾವುದೋ ಘಟನೆಯನ್ನು ಪ್ರಸ್ತಾಪಿಸಿ `ಯುಗಾದಿ ಕಳೆದು ಮೂರು ದಿನ ಆಗಿತ್ತು ಇವನು ಹುಟ್ಟಿದಾಗ' ಎಂದು ನಿಖರವಾದ `ಸಾಕ್ಷ್ಯ' ಒದಗಿಸಿದ. ಆಗ ಜನನ ದಾಖಲೆ ಕಡ್ಡಾಯವಾಗಿರಲಿಲ್ಲವೆಂದು ತೋರುತ್ತದೆ. ತಮಗೆ ಕಂಡಂತೆ ಲೆಕ್ಕ ಹಾಕಿದ ಗಿರಿಯಪ್ಪ ಮೇಷ್ಟರು ಒಂದನೇ ತರಗತಿಯ ಹಾಜರಿ ಪುಸ್ತಕದಲ್ಲಿ ಹೆಸರು ಬರೆದು ಅದನ್ನು ಕೂಗಿದರು. ಅದಕ್ಕೆ ಎದ್ದು ನಿಂತು `ಪ್ರಜೆಂಟ್ ಸಾರ್' ಎಂದು ಪ್ರತಿಯಾಗಿ ಹೇಳಬೇಕೆಂದೂ ಹೇಳಿಕೊಟ್ಟರು. ಹೀಗೆ ಮಧ್ಯಾಹ್ನದ ಊಟದ ಬಿಡುವಿನ ನಂತರ, ಬಹುಮಟ್ಟಿಗೆ ಶಾಲೆ ಬಿಡುವ ಸಮಯದಲ್ಲಿ ನಾನು ಶಾಲೆಗೆ ಸೇರಿಕೊಂಡೆ.
ಮನೆಯಿಂದ ಕಣಬಂದೂರು ಶಾಲೆಗೆ ಹೋಗಿ ಬರುತ್ತಿದ್ದಾಗ ಜೊತೆಗೆ ನನ್ನ ಎರಡನೇ ಅಕ್ಕ ಇದ್ದಳೆ. ಅವಳಿಗೆ ನಾವು ಅಕ್ಕಮ್ಮ ಎಂದು ಕರೆಯುತ್ತಿದ್ದೆವು. ಅವಳು ಮೂರನೇ ತರಗತಿಯಲ್ಲಿದ್ದಳು. ಗದ್ದೆಯ ಸಾಲಿನಲ್ಲಿ ನಡೆದುಕೊಂಡು ಹೋಗಿ ವಾಪಸು ಬರುತ್ತಿದ್ದೆವು. ಬೇಸಿಗೆಯಲ್ಲಿ ಅದು ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ಗದ್ದೆಯ ಕೋಗಿನಲ್ಲಿ ಸಾಗುವುದು ಸುಲಭವಿರಲಿಲ್ಲ. ಮಧ್ಯೆ ಸಣ್ಣಮಟ್ಟದ ನಾಲ್ಕು ಹಳ್ಳಗಳನ್ನು ದಾಟಬೇಕಿತ್ತು. ಹಳ್ಳ ದಾಟಲು ಮರದ ಕೊರಡುಗಳ ಸಾರವನ್ನು (ಸಂಕ) ಹಾಕಿರುತ್ತಿದ್ದರಾದರೂ ಜೋರು ಮಳೆಯಾಗಿ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದಾಗ ತುಂಬ ಭಯವಾಗುತ್ತಿತ್ತು. ಅದೊಂದು ಶನಿವಾರ. ಅರ್ಧ ದಿನದ ಶಾಲೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದೆವು. ನಿತ್ಯದಂತೆ ಗದ್ದೆಯ ಮಧ್ಯೆ ಇದ್ದ ಹಳ್ಳವನ್ನು ದಾಟಬೇಕಿತ್ತು. ಅಲ್ಲಿ ಹಳ್ಳದಾಟಲು ಒಂದು ಮರದ ಕೊರಡನ್ನು ಹಾಕಿದ್ದರು. ಹಳ್ಳದಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಅಕ್ಕಮ್ಮ ಮುಂದೆ ಸಾಗಿದಳು. ನನ್ನ ಹಿಂದೆ ನಮ್ಮೂರಿನ ಶ್ರೀಧರಣ್ಣ ಬರುತ್ತಿದ್ದ. ಅವನು ಪೇಟೆಯ ಮಾಧ್ಯಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದವನು. ಅವನು ಒಳದಾರಿಯಲ್ಲಿ ಬಂದು ನಮ್ಮನ್ನು ಸೇರಿಕೊಂಡಿದ್ದ. ಪೇಟೆಯ ಶಾಲೆಯಲ್ಲಿ ಓದುತ್ತಿದ್ದ ಅವನು ನಮಗೆ ತುಂಬ ದೊಡ್ಡವನಂತೆ ಕಾಣುತ್ತಿದ್ದ. ಅವನೊಟ್ಟಿಗೆ ಏನೇನೋ ಗಳಹುತ್ತಿದ್ದ ನಾನು, ಅಕ್ಕಮ್ಮ ಸಾರ ದಾಟಿದ ಮೇಲೆ ನಿಧಾನವಾಗಿ ಹಿಂಬಾಲಿಸಿದೆ. ಎರಡನೇ ಹೆಜ್ಜೆಗೆ ಕಾಲು ಜಾರಿ ಕೆಳಕ್ಕೆ ಹಳ್ಳಕ್ಕೆ ಬಿದ್ದೆ. ನಾಲ್ಕು ಅಡಿಯಷ್ಟು ಆಳದ ಹಳ್ಳದ ನೀರು ರಭಸವಾಗಿ ನುಗ್ಗುತ್ತಿದ್ದ ಕಾರಣ ಅದರಲ್ಲಿ ನಿಲ್ಲಲಾಗದೆ ಮುಗ್ಗರಿಸಿದೆ. ಕಲ್ಲು, ಕೊರಕಲು ಇದ್ದ ಹಳ್ಳದ ನೀರಿನಲ್ಲಿ ತೇಲಿಹೋದೆ. ಅದನ್ನು ಕಂಡು ಏನನ್ನೂ ಹೇಳಲಾಗದ ದಿಕ್ಕೆಟ್ಟ ಸ್ಥಿತಿಯಲ್ಲಿ ಅಕ್ಕಮ್ಮನಿದ್ದರೆ ನಮ್ಮಿಬ್ಬರಿಗಿಂತ ಒಂದೆರಡು ವರ್ಷ ದೊಡ್ಡವನಾಗಿದ್ದ ಶ್ರೀಧರಣ್ಣ ತಕ್ಷಣವೇ ಕೆಳಕ್ಕೆ ಧುಮುಕಿ ಹಳ್ಳದ ದಂಡೆಯಲ್ಲಿ ಜೋರಾಗಿ ಓಡಿ ಮುಂದೆ ಬಂದು ಅಡ್ಡ ನಿಂತು ನನ್ನನ್ನು ಹಿಡಿದು ನಿಲ್ಲಿಸಿದ. ನೀರಿಗೆ ಬಿದ್ದ ಗಾಬರಿಯಿಂದ ಅಳಲೂ ಆಗದಷ್ಟು ಆಘಾತದ ಸ್ಥಿತಿಯಲ್ಲಿದ್ದ ನನ್ನ ಬೆನ್ನ ಮೇಲೊಂದು ಗುದ್ದು ಕೊಟ್ಟ. ಹಾಗೆ ಮಾಡಿದರೆ ನೀರಿಗೆ ಬಿದ್ದಾಗ ಯಾವುದಾದರೂ ದೆವ್ವಗಳು ಅಮರಿಕೊಂಡಿದ್ದರೆ ಬಿಟ್ಟು ಹೋಗುತ್ತವೆ ಎಂದು ಯಾರೋ ಹೇಳಿದ್ದರಂತೆ. ನಾನು ಮುಗ್ಗರಿಸಿ ಬಿದ್ದಿದ್ದೆನಾದರೂ ನೀರನ್ನು ಕುಡಿದಿರಲಿಲ್ಲ. ಆದ್ದರಿಂದ ಆಘಾತವಷ್ಟೆ ಆಗಿತ್ತು. ಭಯದಿಂದ ಸಣ್ಣಗೆ ನಡುಕವೂ ಇತ್ತು. ಅಕ್ಕಮ್ಮ ಅಳುತ್ತಳುತ್ತಲೇ ಸಂತೈಸುತ್ತ ನನ್ನನ್ನು ನಿಧಾನವಾಗಿ ಮನೆಗೆ ಕರೆದೊಯ್ದಳು. ಅವತ್ತು ಶ್ರೀಧರಣ್ಣ ಜೊತೆಗೆ ಬರದೇ ಇದ್ದಿದ್ದರೆ...?
ಮಳೆಗಾಲ ಕಳೆದು ಚಳಿಗಾಲ ಆರಂಭವಾದಾಗ ನಮ್ಮೂರಲ್ಲಿ ಗದ್ದೆ ಕೊಯ್ಲು. ಕೊಯ್ಲು ಮುಗಿದ ಮೇಲೆ ಗದ್ದೆಗಳಲ್ಲಿ ಕೂಳೆಯ ಹುಲ್ಲು. ಚಪ್ಪಲಿ ಇಲ್ಲದೆ ನಡೆದಾಡುವಾಗ ಚುಚ್ಚುತ್ತಿದ್ದರೂ ಅದೆಲ್ಲ ಅಭ್ಯಾಸವಾಗಿತ್ತು. ಚಪ್ಪಲಿಗಳಿಲ್ಲ ಎಂಬ ಭಾವನೆಯೂ ಬರುತ್ತಿರಲಿಲ್ಲ. ಒಂದು ಶನಿವಾರ ಒಪ್ಪೊತ್ತಿನ ಶಾಲೆ ಮುಗಿಸಿ ವಾಪಸು ಬರುವಾಗ ಗದ್ದೆ ಮಧ್ಯೆ ಜೊತೆ ಇದ್ದವರಲ್ಲಿ ಏನೋ ಭಿನ್ನಾಭಿಪ್ರಾಯ ತಲೆದೋರಿ ಅದನ್ನು ತಕ್ಷಣವೇ ಇತ್ಯರ್ಥ ಮಾಡಲು ನಮ್ಮೂರಿನ ಹುಡುಗನೊಬ್ಬ ನನ್ನನ್ನು ಅಟ್ಟಿಸಿಕೊಂಡು ಬಂದ. ಅವನಿಂದ ತಪ್ಪಿಸಿಕೊಳ್ಳಲು ಗದ್ದೆ ಇಳಿದು ಬಯಲಲ್ಲಿ ಓಡತೊಡಗಿದೆ. ಒಂದು ಗದ್ದೆಯನ್ನು ದಾಟಿ ಇನ್ನೊಂದು ಗದ್ದೆಯ ಅಂಚನ್ನು ಹಾದು ಮುಂದೆ ಒಂದೆರಡು ಹೆಜ್ಜೆ ಹಾಕುತ್ತಿದ್ದಂತೆ ಕಾಲಿಗೆ ಮೆತ್ತನೆಯ ವಸ್ತುವೊಂದು ತೊಡರಿದಂತಾಯಿತು. ಹಗ್ಗದಂತೆ ತೊಡರಿಕೊಂಡಿದ್ದ ಅದು ನಯವಾಗಿ ಜಾರಿದ್ದರಿಂದ ಮುಗ್ಗರಿಸಿ ಬೀಳಲಿಲ್ಲ. ಅದು ಮೆತ್ತಗೆ ಇದ್ದುದಕ್ಕಿಂತ ತಣ್ಣಗೆ ಇದ್ದುದು ನನ್ನ ಅನುಭವಕ್ಕೆ ಬಂತು. ತಪ್ಪಿಸಿಕೊಳ್ಳುವ ಏಕೈಕ ಉದ್ದೇಶದಿಂದ ಓಡುತ್ತಿದ್ದ ನನಗೆ, ಜತೆ ಇದ್ದ ಹುಡುಗರು `ಹಾವು ಹಾವು' ಎಂದು ಕೂಗಿದಾಗಲೇ ಓಡುವ ರಭಸಕ್ಕೆ ಭೀತಿಯೂ ಸೇರಿಕೊಂಡಿತು. ನನ್ನನ್ನು ಬೆನ್ನಟ್ಟಿದ್ದ ಹುಡುಗನೂ ತಪ್ಪಿಸಿಕೊಳ್ಳುವತ್ತ ಗಮನ ಹರಿಸಿ ಸುರಕ್ಷಿತ ಜಾಗಕ್ಕೆ ಧಾವಿಸಿದ. ಹಿಂದೆಲ್ಲೋ ಬರುತ್ತಿದ್ದ ಅಕ್ಕಮ್ಮನೂ ಗಾಬರಿಯಿಂದ ಓಡಿ ನನ್ನ ಬಳಿ ಬಂದಳು. ಅಷ್ಟು ಹೊತ್ತಿಗೆ ಹಾವಿನ ಮೇಲೆ ಕಾಲು ಇಟ್ಟು ಅದನ್ನು ರೊಚ್ಚಿಗೆ ಎಬ್ಬಿಸಿದ ಭಾವಕ್ಕೆ ಒಳಗಾಗಿದ್ದ ನಾನು ಗದ್ದೆಯ ಅಂಚಿಗೆ ಬಂದು ಕಾಲಿಗೆ ತೊಡರಿಕೊಂಡಿದ್ದ ಹಾವು ಯಾವ ಕಡೆ ಹೋಯಿತೆಂಬುದನ್ನು ನೋಡುತ್ತಿದ್ದೆ. ನನ್ನನ್ನು ಅಟ್ಟಿಸಿಕೊಂಡು ಬಂದಿದ್ದ ಹುಡುಗನಿಗೂ ಗಾಬರಿ ಆಗಿತ್ತು. ಅವನು ಹಾವಿನ ಬಣ್ಣವನ್ನು ನೋಡಿದ್ದಲ್ಲದೆ, ಅದು ಕೂಡ ಗಾಬರಿಯಿಂದ ವೇಗವಾಗಿ ಧಾವಿಸಿ ಗದ್ದೆಯ ಇನ್ನೊಂದು ಅಂಚನ್ನು ಸೇರಿ ಮರೆಯಾಯಿತು ಎಂಬ ವರದಿ ಕೊಟ್ಟ. ಅಕ್ಕಮ್ಮ ಹತ್ತಿರ ಬಂದವಳು `ಎಲ್ಲಾದರೂ ಕಚ್ಚಿತೇನೋ' ಎಂದು ಎರಡೂ ಕಾಲುಗಳ ಪರೀಕ್ಷೆ ನಡೆಸಿದಳು. ಮೂರನೆಯ ತರಗತಿಯಲ್ಲಿದ್ದ ಅವಳಿಗೆ ನಾಗರ ಹಾವಾಗಿದ್ದರೆ ಬಾಯಲ್ಲಿ ಕಚ್ಚಿ ವಿಷ ಬಿಡುತ್ತದೆ, ಕೇರೆ ಹಾವಾದರೆ, ಅದಕ್ಕೆ ಬಾಲದಲ್ಲಿ ಮುಳ್ಳು ಇರುತ್ತದೆ, ಅದರಿಂದ ವಿಷ ಬಿಡುತ್ತದೆ ಎಂಬಷ್ಟು ತಿಳಿವಳಿಕೆ ಇತ್ತು. ನನಗೆ ಎಲ್ಲಿಯೂ ಗಾಯ ಆಗಿರಲಿಲ್ಲವಾದ್ದರಿಂದ ಸದ್ಯಕ್ಕೆ ಅಪಾಯವಾಗಲಿಲ್ಲ. ಆದರೆ ಹಾವು ಹನ್ನೆರಡು ವರ್ಷ ಸೇಡು ಇಡುತ್ತದೆಯಾದ್ದರಿಂದ ಇನ್ನೊಮ್ಮೆ ಹಾದಿಯಲ್ಲಿ ಕಾದು ಕಚ್ಚಬಹುದು ಎಂದು ಯೋಚಿಸಿ ಅದನ್ನೇ ನನಗೆ ಹೇಳಿದಳು. ನನ್ನನ್ನು ಅಟ್ಟಿಸಿಕೊಂಡು ಬಂದಿದ್ದ ಹುಡುಗನೂ ನನಗೆ ದೊಡ್ಡ ಕಂಟಕವೊಂದು ಸ್ವಲ್ಪದರಲ್ಲಿ ತಪ್ಪಿತೆಂದೂ ಹಾವಿನ ದ್ವೇಷಕ್ಕೆ ಗುರಿಯಾಗದಂತಿರಲು ಇನ್ನು ಮುಂದೆ ನಾನು ಆ ಮಾರ್ಗದಲ್ಲಿ ಸುಳಿಯಬಾರದು ಎಂದೂ ಹೇಳಿದ. ಹಾವಿನ ಮೇಲೆ ಕಾಲಿಟ್ಟು ಅದರಿಂದ ಬಚಾವಾಗಿ ಬಂದಿದ್ದರೂ ಎದೆ ಡವಗುಡುತ್ತಿತ್ತು. ಓಡುತ್ತಲೇ ಮನೆಯನ್ನು ಸೇರಿದೆವು. ಆಗಷ್ಟೆ ಹಸಿಯಾಗಿದ್ದ ಅನುಭವವನ್ನು ಮನೆಯಲ್ಲಿ ಗಾಬರಿ ಮೂಡುವಂತೆ ಹೇಳಿದೆವು. `ನಾಳೆಯಿಂದ ಇಸ್ಗೋಲಿಗೆ ಹೋಗಾದೇ ಬ್ಯಾಡ' ಎಂದು ಹೇಳುತ್ತಾರೇನೋ ಎಂದು ಆಸೆಯಿಂದ ನಿರೀಕ್ಷಿಸಿದೆವು. ಜಗುಲಿಯಲ್ಲಿ ಕುಳಿತು ಪುಂಡಿನಾರನ್ನು ಸೀಳಿ ಬತ್ತದ ಹೊರೆ ಕಟ್ಟುವ ಹಗ್ಗ ಹೊಸೆಯುತ್ತಿದ್ದ ಅಪ್ಪ ಅದನ್ನೆಲ್ಲ ಕೇಳಿಸಿಕೊಂಡವನು ಎದ್ದು ಬಂದು ಬಾಯಲ್ಲಿದ್ದ ತಾಂಬೂಲವನ್ನು ಅಂಗಳದ ಮೂಲೆಯಲ್ಲಿ ಉಗಿದು ಬಾಯಿಗೆ ಬಿಡುವು ಮಾಡಿಕೊಂಡ. `ಗದ್ದೆ ಕೊಯ್ಲು ಆದಮೇಲೆ ಇಲಿ ಹೆಗ್ಗಣ ತಿನ್ನಾಕೆ ಹಾವು ಬರ್ತಾವೆ. ಅದೇನು ಕೇರೆ ಹಾವಿರಬೇಕು. ಅದರ ಪಾಡಿಗೆ ಹೋಗಿರುತ್ತೆ' ಎಂದು ಸಮಾಧಾನವಾಗಿ ಹೇಳಿದ. ಅಪ್ಪನ ಪ್ರತಿಕ್ರಿಯೆಗೆ ನಿರಾಸೆಯಾಗಿ `ಅದಕ್ಕೆ ಹನ್ನೆರಡು ವರ್ಷ ಸೇಡು ಇರುತ್ತಂತಲ್ಲ' ಎಂದು ನಾನು ಮೆತ್ತಗೆ ಹೇಳಿದೆ. `ಹೋಗೊ ಹೋಗು, ಹರಿಯೋ ಹಾವು ಮುರಿಯೋ ಹುಲಿ ಒಂದೇ ಕಡೆ ಇರಾದಿಲ್ಲ..' ಎಂದು ಹೇಳುತ್ತ ಹಗ್ಗ ಹೊಸೆಯುವ ಕೆಲಸ ಮುಂದುವರಿಸಿದ.    
ಅಪ್ಪನಿಗೆ ಕೆಲವೇ ತಿಂಗಳ ಹಿಂದೆ ಮಳೆಗಾಲದಲ್ಲಿ ನಾನು ಹಳ್ಳಕ್ಕೆ ಬಿದ್ದು ಪಾರಾಗಿ ಬಂದ ಸುದ್ದಿ ಅಕ್ಕಮ್ಮನಿಂದ ತಿಳಿದಿತ್ತು. ಆದ್ದರಿಂದ ಮುಂದೆ ಒಂದೇ ವಾರದಲ್ಲಿ ಮನೆಗೆ ಕೋಡಿಕೊಪ್ಪಕ್ಕಿಂತಲೂ ಹತ್ತಿರವಿದ್ದ, ಹಕ್ಕಲಿನಲ್ಲಿ ದಾರಿ ಇದ್ದ ಜಂಬಳ್ಳಿಯ ಶಾಲೆಗೆ ಸೇರಿಸಿದ. ಜಂಬಳ್ಳಿಯಲ್ಲಿ ನಾಲ್ಕನೆಯ ತರಗತಿವರೆಗೆ ಓದಿ ಐದನೇ ತರಗತಿಗಾಗಿ ರಿಪ್ಪನ್ಪೇಟೆಗೆ ಹೋಗಬೇಕಾಯಿತು. ಮನೆಯಿಂದ ಓಡಾಡುವುದು ದೂರ ಎಂಬ ಕಾರಣಕ್ಕೆ ಪೇಟೆಗೆ ಹತ್ತಿರವೇ ಇದ್ದ ಸೋದರಮಾವನ ಮನೆ ಸೇರಿಕೊಂಡೆ.  
* * *
ರಿಪ್ಪನ್ಪೇಟೆ ಆಗ ನಾಲ್ಕು ಮುಖ್ಯರಸ್ತೆಗಳು ಸಾಗಿರುವ ಕೇಂದ್ರಸ್ಥಳವಾಗಿದ್ದ ಕಾರಣ ಪ್ರಾಮುಖ್ಯತೆ ಪಡೆದಿತ್ತು. ರಸ್ತೆ ಬದಿ ಅಂಗಡಿ ಸಾಲುಗಳು ಇದ್ದು ಸಂಜೆ ವೇಳೆಗೆ ಅಲ್ಲಲ್ಲಿ ಬೀದಿ ದೀಪಗಳನ್ನು ಉರಿಸುತ್ತಾ ಇದ್ದ ಕಾರಣ ಅದಕ್ಕೆ ಪೇಟೆಯ ಕಳೆ ಬಂದಿತ್ತು. ಹೊಸನಗರದಿಂದ ಶಿವಮೊಗ್ಗಕ್ಕೆ, ತೀರ್ಥಹಳ್ಳಿಯಿಂದ ಸಾಗರಕ್ಕೆ ಸಾಗುವ ರಸ್ತೆಗಳು ಇಲ್ಲಿಯೇ ಸಂಧಿಸುತ್ತಿದ್ದ ಕಾರಣ ಜನರ ಓಡಾಟವೂ ಇತ್ತು. ಪೇಟೆಯೂ ನಾಲ್ಕು ರಸ್ತೆಗಳ ಅಕ್ಕಪಕ್ಕ ಬೆಳೆಯುತ್ತಿತ್ತು. ಆದರೆ ಆಗಿನ ಮನೆಗಳೆಲ್ಲವೂ ಬಹುತೇಕ ಹಂಚಿನವಾಗಿದ್ದವು. ಅಲ್ಲಲ್ಲಿ ಹುಲ್ಲಿನ ಮನೆಗಳೂ ಇದ್ದವು. ಉಡುಪಿ ಬ್ರಾಹ್ಮಣರ ಕಾಫಿ ಕ್ಲಬ್, ಮಿತ್ರ ಸಮಾಜ, ಮರಾಠ ಮಿಲಿಟರಿ ಹೋಟಲ್, ಸರ್ಕಲ್ ಲಂಚ್ ಹೋಂ ಇತ್ಯಾದಿ ನಾಲ್ಕು ರಸ್ತೆಗಳಲ್ಲಿ ತಲೆ ಎತ್ತಿದ್ದವು. ಸೋಮವಾರ ಸಂತೆಯನ್ನು ಸೇರಿಸುವುದು ಅದೇ ಸುಮಾರಿನಲ್ಲಿ ಆರಂಭವಾಗಿತ್ತು. ಸೋದರಮಾವನ ಮನೆಯಿಂದ ನಡೆದು ಬರುತ್ತಿದ್ದ ನನಗೆ ಜೊತೆಗಾರರಾಗಿ ಸಹಪಾಠಿಗಳೂ, ನನಗಿಂತ ಎರಡು ತರಗತಿ ಮುಂದೆ ಇದ್ದ `ಹಿರಿಯ'ರೂ ಸಿಗುತ್ತಿದ್ದರು. ತರಗತಿಗಳಲ್ಲಿ ಟೆಸ್ಟುಗಳು ನಡೆಯುತ್ತಿದ್ದವಾದರೂ ಓದಿನ ಒತ್ತಡ ಅನುಭವಕ್ಕೆ ಬರುತ್ತಿರಲಿಲ್ಲ. ಶಾಲೆಯ ಅವಧಿಯಲ್ಲಿ ಕಬಡ್ಡಿ, ವಾಲಿಬಾಲ್ ಆಟಗಳನ್ನು ಹುಡುಗರಿಂದ ಆಡಿಸಲಾಗುತ್ತಿತ್ತು. ನಾನು ಮೊದಲಿನಿಂದ ದೈಹಿಕವಾಗಿ ಅಷ್ಟೇನೂ ದೃಢವಾಗಿರಲಿಲ್ಲ. ಅದಕ್ಕೆ ಹಳ್ಳಿಯಿಂದ ಬಂದಿದ್ದ ಹಿಂಜರಿಕೆಯೂ ಸೇರಿ ನಾನು ಅಂಥ ಆಟಗಳಲ್ಲಿ ಸೇರುತ್ತಿರಲಿಲ್ಲ. ರಿಪ್ಪನ್ಪೇಟೆಗೆ ಸುತ್ತಲಿನ ಹಳ್ಳಿಗಳಿಂದಲೇ ಹೆಚ್ಚಿನ ವಿದ್ಯಾಥರ್ಿಗಳು ಬರುತ್ತಿದ್ದರು. ಹಳ್ಳಿಗಳಲ್ಲಿ ಪ್ರಚಲಿತವಿದ್ದ ಬುಗುರಿ, ಗೋಲಿ ಆಟಗಳು ಪೇಟೆಯವರೆಗೂ ಬಂದಿದ್ದವು. ಅವುಗಳಿಗೆ ಕಬಡ್ಡಿ, ವಾಲಿಬಾಲ್ ನಂಥ ಕ್ರೀಡೆಗಳಿಗೆ ನೀಡುವ ಪ್ರಾಶಸ್ತ್ಯ ಇರಲಿಲ್ಲವಾದ್ದರಿಂದ ಶಾಲೆಯಿಂದ ವಾಪಸು ಮನೆಗೆ ತೆರಳುವಾಗ ಅವು ಹಳ್ಳಿ ಹಾದಿ ಬದಿಯಲ್ಲಿ ವಿಜೃಂಭಿಸುತ್ತಿದ್ದವು. ಜೇಬಲ್ಲಿ ಗೋಲಿ ಇಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಗತಿಯೂ ಆಗಿತ್ತು. ಹಳ್ಳಿ ಹುಡುಗರ ಆಸಕ್ತಿ, ಉತ್ಸಾಹಗಳನ್ನು ಅರಿತಿದ್ದ ಪೇಟೆಯ ಕೆಲವು ಕಿರಾಣಿ ಅಂಗಡಿ ಮಾಲೀಕರು ಬಣ್ಣಬಣ್ಣದ ಗೋಲಿಗಳನ್ನು ಎದ್ದು ಕಾಣುವಂತೆ ಗಾಜಿನ ಜಾಡಿಗಳಲ್ಲಿ ಪ್ರದಶರ್ಿಸಿ ಹುಡುಗರನ್ನು ಸೆಳೆಯುತ್ತಿದ್ದರು. ನಾನೂ ಮಾಧ್ಯಮಿಕ ಶಾಲೆಯಲ್ಲಿದ್ದಾಗ ಗೋಲಿಗಳನ್ನು ಜೇಬಲ್ಲಿ ದಾಸ್ತಾನು ಇಟ್ಟುಕೊಳ್ಳುವ ಶೋಕಿಯನ್ನೂ ಮಾಡಿದ್ದೆ.
ಹಾದಿ ಬದಿಯಲ್ಲಿ ಸಣ್ಣದೊಂದು ಗುಳಿ ಸಿಕ್ಕಿದರೆ ಅಲ್ಲಿಯೇ ಗೋಲಿಯಾಟಕ್ಕೆ ವೇದಿಕೆ ಸಿದ್ಧವಾಗಿ ಬಿಡುತ್ತಿತ್ತು. ಎರಡು ಗುಳಿಗಳ ಮಧ್ಯೆ ಗೋಲಿಯನ್ನು ಗೋಲಿಯಿಂದ ತಳ್ಳುವ ಆಟ. ಅದರಲ್ಲಿ ಹನ್ನೆರಡೋ ಹದಿಮೂರೋ ನಡೆಗಳ ಲೆಕ್ಕಾಚಾರ. ಅವುಗಳಿಗೆ ಗೋಲಿಯಾಟದ ವಿಶಿಷ್ಟ ಪರಿಭಾಷೆ. `ಒಕ್ಕರಸೆಟ್ಟಿ, ಇಕ್ಕಿರಿ ಎರಡು, ಮುಕ್ಕರಮುದ್ದೆ, ನಕ್ಕರ ನಾಲೆ, ಐದಾರುಂಡ, ಆರಂತಾರ, ಏಳಂಬೋಳಿ, ಎಂಟುಮಣ ಶುಂಠಿ, ಒಮ್ಮನ ಗೋಲ, ತಿಮ್ಮನ ತೇಲ. ತ್ಯಾದಿ ಗೋಲ, ಬೂದಿ ನೆಕ್ಕ...' ಇತ್ಯಾದಿ ಪ್ರಾಸಬದ್ಧ ಲೆಕ್ಕಾಚಾರದ ನಂತರ ಹನ್ನೆರಡೋ, ಹದಿಮೂರೋ ನಡೆಗಳನ್ನು ಮುಗಿಸಿ ಎದುರಾಳಿಯ ಗೋಲಿಯನ್ನು ಗುಳಿಗೆ ತಳ್ಳಿದನೆಂದರೆ ಆತ ಗೆಲುವು ಸಾಧಿಸಿದಂತೆ. ಸೋತವನು ಅದೇ ಗುಳಿಯ ಮುಂದೆ ಗೋಲಿಯನ್ನು ಇರಿಸಿ ಮುಂಬೆರಳಿನಿಂದ ತಳ್ಳುತ್ತಾ ಅದನ್ನು ಇನ್ನೊಂದು ಗುಳಿಗೆ ತಳ್ಳಿ ತನ್ನ ಸೋಲಿನ ಕಹಿಯನ್ನು ಅನುಭವಿಸಬೇಕಿತ್ತು. ಆದರೂ, ನಂತರದ ಆಟದಲ್ಲಿ ಆತನೇ ಎಲ್ಲ ಹದಿಮೂರು ನಡೆಗಳನ್ನೂ ಬೇಗ ಮುಗಿಸಿ ಎದುರಾಳಿಯನ್ನು ಮುಂಬೆರಳು ಗೋಲಿ ತಳ್ಳಾಟಕ್ಕೆ ಒಳಪಡಿಸಿ ಸಮಾಧಾನ ಪಡುವುದಕ್ಕೆ ಪ್ರಯತ್ನ ಪಡುತ್ತಿದ್ದ.
ಗೋಲಿಯಾಟಕ್ಕೆ ಇಬ್ಬರು ಇಲ್ಲವೇ ಮೂವರು ಇದ್ದರೆ ಸಾಕಾಗುತ್ತಿತ್ತು. ಆದರೆ ಗುಂಪು ಸೇರಿ ಆಡುವ `ಸುಳ್ಳಿ ಪಟ್ಟೆ' ಎಂಬ ಆಟ ತುಂಬ ರೋಚಕವಾಗಿರುತ್ತಿತ್ತು. ಅದು ಈಗಿನ ಆಟ್ಯಾಪಾಟ್ಯಕ್ಕೆ  ಹತ್ತಿರದ ಗುಂಪು ಪಂದ್ಯ. ಎರಡು ತಂಡಗಳು. ನಾಲ್ಕು ಅಥವಾ ಐದು ಪಟ್ಟೆಗಳು. ಅವು ಸಮಾನಾಂತರವಾಗಿರುತ್ತಿದ್ದವು. ಒಂದು ಪಟ್ಟೆಗೂ ಇನ್ನೊಂದು ಪಟ್ಟೆಗೂ ಇರುವ ಅಂತರಕ್ಕೆ ಒಂದು ಲೆಕ್ಕಾಚಾರ. ಸಮಾನಾಂತರ ಪಟ್ಟೆಗಳ ಮಧ್ಯೆ ಅವೆಲ್ಲವನ್ನೂ ಕೂಡಿಸಿದ ಒಂದು ಪಟ್ಟೆ. ತಂಡದ ಮುಖಂಡ ಮುಂದಿನ ಪಟ್ಟೆಯನ್ನಲ್ಲದೆ, ಮಧ್ಯದ ಪಟ್ಟೆಯಲ್ಲಿಯೂ ಓಡಾಡಿ ಎದುರು ತಂಡದ ಹಿರಿಯಾಳುಗಳನ್ನು ಔಟ್ ಮಾಡುವ ಅಧಿಕಾರ ಪಡೆದಿರುತ್ತಿದ್ದ. ಅವನಿಗೆ ಕದುರುಗಣೆ ಅಂತ ಹೆಸರು. ಸುಳ್ಳಿಪಟ್ಟೆಯ ಆಟದ ವಿವರಗಳು ಹೆಚ್ಚಿನ ನೆನಪು ಉಳಿದಿಲ್ಲ. ಏಕೆಂದರೆ ಆ ಆಟ ಈಗ ಚಾಲತಿಯಲ್ಲಿಯೇ ಇಲ್ಲ. ಆದರೆ ಅದೇ ಆಟದಲ್ಲಿ ಎರಡೂ ತಂಡಗಳಿಗೆ ಅನುಕೂಲವಾಗಿ ವತರ್ಿಸುವ ಒಂದು ಪಾತ್ರಕ್ಕೆ `ಹಾಲುಂಡಿ' ಎಂಬ ಹೆಸರಿತ್ತು. ಇಸಪೇಟಿನ ಆಟದಲ್ಲಿ ಜೋಕರ್ ಗೆ ಇರುವಂಥ ಸ್ಥಾನ ಅದು. `ಅವನು ಬಿಡು ಹಾಲುಂಡಿ' ಎಂಬ ಪಡೆಮಾತು ಎರಡೂ ಕಡೆಯವರಲ್ಲಿ ಮಿತ್ರತ್ವದಲ್ಲಿದ್ದರೂ ನಂಬಿಕೆಗೆ ಪಾತ್ರನಲ್ಲದ ರೀತಿಯಲ್ಲಿ ವತರ್ಿಸುವವನೆಂಬ ಅರ್ಥದಲ್ಲಿ ನಮ್ಮ ಅಂದಿನ ಗೆಳೆಯರ ಬಳಗದಲ್ಲಿ ಪ್ರಸ್ತಾಪಿಸುವುದರಲ್ಲಿ ಉಳಿದುಕೊಂಡಿದೆ.
* * *
ನಮ್ಮೂರಲ್ಲಿ ನಾಲ್ಕನೇ ತರಗತಿಯವರೆಗೆ ಇದ್ದಾಗ ನನಗೆ ಕುವೆಂಪು ಸಾಹಿತ್ಯದ ಪರಿಚಯ ಆಗಿತ್ತು. ಆಗ ಅವರು ಕೆ.ವಿ.ಪುಟ್ಟಪ್ಪ ಎಂದೇ ಪರಿಚಿತರು. `ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ..' ಎಂಬುದರಿಂದ ಹಿಡಿದು ಕಾನೂರು ಹೆಗ್ಗಡತಿಯ ಕಿಲಿಸ್ತರ ಜಾಕಿ, ಶಿಕಾರಿಯ ಪುಟ್ಟಣ್ಣ, ಬಾಡುಗಳ್ಳ ಸೋಮ ಮೊದಲಾದವುಗಳನ್ನು ನನ್ನ ಅಣ್ಣಂದಿರಾದ ರಾಮಣ್ಣ, ಟೋಪಣ್ಣ ಮತ್ತು ಸಣ್ಣಣ್ಣ ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಯಾಗಿದ್ದಾಗಲೇ ರಾತ್ರಿ ಹೊತ್ತು ಅಡಿಕೆ ಸುಲಿಯುತ್ತಿದ್ದಾಗ ಓದುತ್ತಿದ್ದು ನನ್ನಲ್ಲಿ ಕುವೆಂಪು ಕುರಿತ ಕುತೂಹಲವನ್ನು ಮೂಡಿಸಿದ್ದರು. ಮಾಧ್ಯಮಿಕ ಶಾಲೆಯಲ್ಲಿನ ಪಠ್ಯಗಳಲ್ಲಿ ಕುವೆಂಪು ಅವರ ಒಂದಾದರೂ ಪದ್ಯಗಳು ಇರುತ್ತಿದ್ದವು. ಅವುಗಳನ್ನು ಬಾಯಿ ಪಾಠ ಮಾಡಿಕೊಂಡಿದ್ದ ನೆನಪು ಇತ್ತು. ಹೈಸ್ಕೂಲಿನಲ್ಲಿಯೂ ಅವರ ಕವನಗಳಿರುತ್ತಿದ್ದವು. ಗದ್ಯದ ಪಾಠಭಾಗಗಳಲ್ಲಿ ಕುವೆಂಪು ಕೃತಿಗಳು ಇದ್ದೇ ಇರುತ್ತಿದ್ದವು. ಎಸ್ಎಸ್ಎಲ್ಸಿ ಪಠ್ಯದಲ್ಲಿ ಕವಿ ಕಾವ್ಯ ಪರಿಚಯದಲ್ಲಿ ಹೆಚ್ಚಿನ ವಿವರಗಳಿರುತ್ತಿದ್ದು ಅವರ ವ್ಯಕ್ತಿತ್ವಕ್ಕೆ ಹತ್ತಿರವಾದ ಆಪ್ತಭಾವ ಮೊಳಕೆಯ ಸ್ವರೂಪದಲ್ಲಿತ್ತು. ಅವರು ನಮ್ಮದೇ ಊರಿನ ಹತ್ತಿರದ ತೀರ್ಥಹಳ್ಳಿ ತಾಲೂಕಿನವರು. ಅಲ್ಲದೆ, ನಾವು ನಿತ್ಯ ಬಳಸುತ್ತಿದ್ದರೂ ನಮ್ಮ ಶಾಲೆಯ ದಿನಗಳಲ್ಲಿ ಪೇಟೆಯ ಹುಡುಗರ ಎದುರು ಬಹಿರಂಗವಾಗಿ ಹೇಳಿಕೊಳ್ಳಲು ಸಂಕೋಚಪಡುತ್ತಿದ್ದ ಮೀನು-ಮಾಂಸದ ಊಟಕ್ಕೆ ಸಾಹಿತ್ಯದಲ್ಲಿ ಸ್ಥಾನ ಕಲ್ಪಿಸಿದ್ದವರು. ಆದ್ದರಿಂದ ಕುವೆಂಪು ಅವರ ಬಗ್ಗೆ ಬೆರಗಿನ ಭಾವನೆ ಇತ್ತು. ನೇಗಿಲು ಹಿಡಿದು ಗದ್ದೆಯಲ್ಲಿ ಉತ್ತು ಬಿತ್ತುವ ಕೆಲಸವನ್ನು ಶಾಲಾದಿನಗಳಲ್ಲಿ ಮಾಡುತ್ತಿದ್ದ ನನಗೆ ರೈತನನ್ನು ಯೋಗಿಯ ರೂಪದಲ್ಲಿ ಚಿತ್ರಿಸಿದ ಕುವೆಂಪು ಅಸಾಮಾನ್ಯರಾಗಿ ಕಂಡಿದ್ದರು.
ನಮಗೆ ದೊಡ್ಡ ಮನೆಯಿಂದ ಹಿಸ್ಸೆಯಾಗಿ ಬಂದಾಗ ಗದ್ದೆ ತೋಟಗಳೇನೋ ಇದ್ದವು. ಆದರೆ ಮೂವರು ಅಣ್ಣಂದಿರು ಮದುವೆಯಾಗಿ ಅವರ ಸಂಸಾರಗಳು ದೊಡ್ಡದಾಗುತ್ತಿದ್ದವು. ಗದ್ದೆಯಲ್ಲಿ ಬೆಳೆದ ಬತ್ತ ಊಟಕ್ಕಷ್ಟೆ ಸಾಕಾಗುತ್ತಿತ್ತು. ತೋಟದ ಉತ್ಪತ್ತಿ ಮೇಲು ಖಚರ್ಿಗೆ ಎಂಬುದು ಅಂದಿನ ಅಂದಾಜು. ಹೆಚ್ಚುತ್ತಿದ್ದ ಸಂಸಾರದ ಖಚರ್ಿಗೆ ನಮ್ಮ ತೋಟವನ್ನು ಸಾಧ್ಯವಿದ್ದಷ್ಟು ಹೆಚ್ಚಿಸುವುದು ಅಗತ್ಯವೆಂದು ಅಪ್ಪ ಭಾವಿಸಿದ್ದ. ಮನೆಯ ತೋಟದ ಸುತ್ತ ದಟ್ಟವಾಗಿದ್ದ ಕಾಡು. ಮನೆಯಿಂದ ತೋಟಕ್ಕೆ ಹೋಗುವ ದಾರಿಯಲ್ಲಿ ಮಸೆ ಹುಲ್ಲು. ತಗ್ಗು ದಿನ್ನೆಯ ಜಾಗವನ್ನು ಸಮತಟ್ಟಾಗಿಸಿ ಅಡಿಕೆ ಸಸಿಗಳನ್ನು ನೆಟ್ಟು ತೋಟವನ್ನು ವಿಸ್ತರಿಸುವ ಅಗತ್ಯವನ್ನು ಅಪ್ಪ ಮನಗಂಡಿದ್ದ. ಇದರ ಜೊತೆಗೆ ಹಳೆಯ ತೋಟಕ್ಕೆ ಕ್ರಮಪ್ರಕಾರವಾಗಿ ಬೇಸಾಯ, ಉದಿ, ಮಧ್ಯೆ ತೋಡು ತೆಗೆಯುವುದೇ ಮೊದಲಾದ ಕೆಲಸಗಳನ್ನು ಮಾಡಿಸಬೇಕಿತ್ತು. ಆಗ ನಮ್ಮ ಮನೆಯ ಕೆಲಸಗಳಿಗೆ ಬಂದವರು ಕನ್ನಡ ಜಿಲ್ಲೆಯ ಆಳುಗಳು. ಅವರಿಗೆ ಸೇರೆಗಾರನೊಬ್ಬನ ನೇತೃತ್ವ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುತ್ತಿದ್ದವರನ್ನು ಆಗ ಕನ್ನಡ ಜಿಲ್ಲೆಯವರೆಂದೇ ಕರೆಯುವ ವಾಡಿಕೆ. ಅವರಲ್ಲಿ ಹೆಚ್ಚಿನವರು ಈಗಿನ ಉಡುಪಿ ಜಿಲ್ಲೆಗೆ ಸೇರಿದವರಿದ್ದಿರಬೇಕು. ಏಕೆಂದರೆ ಅವರ ಮಾತು ಈಗಿನ ಕುಂದಕನ್ನಡಕ್ಕೆ (ಕುಂದಾಪುರ ಆಜುಬಾಜಿನ ಮಾತು) ಹತ್ತಿರವಾಗಿರುತ್ತಿತ್ತು. ಹೋಗಬೇಕು ಎನ್ನುವುದಕ್ಕೆ `ಹ್ವಾಯ್ಕು', ಬರಬೇಕು ಎನ್ನುವುದಕ್ಕೆ `ಬರ್ಕು' ಎಂಬಂಥ ಮಾತುಗಳು.
ಅವರೆಲ್ಲರೂ ನಮ್ಮ ಮನೆಯ ಹಿತ್ತಲಿನಲ್ಲಿ ಬಿಡಿಬಿಡಿಯಾಗಿ ಗುಡಿಸಲುಗಳನ್ನು ಹಾಕಿಕೊಂಡಿದ್ದರು. ಬಿದಿರಿನ ಗಳುಗಳನ್ನು ಕೋರೆಯಾಗಿ ನಿಲ್ಲಿಸಿ ಅಡಿಕೆ ಸೋಗೆಗಳನ್ನು ಹೊದಿಸಿರುತ್ತಿದ್ದರು. ಒಳಗೆ ಪ್ರವೇಶಿಸಲು ಬಿದಿರಿನ ದಬ್ಬೆಗಳ ಬಾಗಿಲು. ಒಳಗಿನ ಬಿಡಾರದಲ್ಲಿ ಒಂದು ಮೂಲೆಯಲ್ಲಿ ಗಂಜಿ ಬೇಯಿಸಲು ಒಲೆ. ಅದನ್ನು ಅವರು ಬಿಡಾರ ಎಂದು ಕರೆಯುತ್ತಿದ್ದರು. ಎಷ್ಟು ಕುಟುಂಬಗಳಿರುತ್ತಿದ್ದವೋ ಅಷ್ಟು ಬಿಡಾರಗಳು. ಅದರಲ್ಲಿ ಸ್ವಲ್ಪ ದೊಡ್ಡದಾಗಿ ಇರುತ್ತಿದ್ದುದು ಸೇರೆಗಾರನ ಬಿಡಾರ. ಸ್ವಲ್ಪ ಉಬ್ಬು ಹಲ್ಲಿನ, ಉದ್ದನೆಯ ತಲೆಕೂದಲು ಬಿಟ್ಟಿದ್ದ ಗಣಪಣ್ಣ ಎಂಬಾತ ಸೇರೆಗಾರನಾಗಿದ್ದ. ಕೃಶ ಶರೀರದವನಾಗಿದ್ದರೂ ಮಾತಿಗೆ ನಿಂತರೆ ಖಡಕ್ ಎನಿಸುವಂಥ ದಿಟ್ಟತನ. ಗಣಪಣ್ಣ ತೋಟದ ಕೆಲಸ ವಹಿಸಿಕೊಂಡ ಸ್ವಲ್ಪ ದಿನಗಳಲ್ಲೇ ಮನೆಯವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಕೆಲವು ಗಂಡಾಳು, ಇನ್ನು ಕೆಲವು ಹೆಣ್ಣಾಳುಗಳು ನಿತ್ಯವೂ ಕೆಲಸಕ್ಕೆ ಬರುತ್ತಿದ್ದರು. ಕೆಲಸಕ್ಕೆ ಬಂದವರಿಗೆ ಸಂಜೆ ಹೊತ್ತು ಪಡಿ ಕೊಡುವುದು ಮನೆಯಲ್ಲಿದ್ದವರ ಕೆಲಸ. ಪಡಿ ಎಂದರೆ ಆಳಿನ ಲೆಕ್ಕದಲ್ಲಿ ಅಕ್ಕಿ. ತಾಂಬೂಲದ ರೂಪದಲ್ಲಿ ನಾಲ್ಕು ಅಡಿಕೆ ಹೋಳು, ಎರಡು ವೀಳೆಯದೆಲೆ. ಜೊತೆಗೆ ಚೂರು ಹೊಗೆಸೊಪ್ಪಿನ ಎಸಳನ್ನೂ ಕೊಡುವುದಿತ್ತು. ಮನೆಯಲ್ಲಿ ಅವ್ವನೋ, ಅತ್ತಿಗೆಯರೋ ಒಳಗಡೆ ಕೆಲಸದಲ್ಲಿದ್ದಾಗ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಾದ ನಮಗೆ ಪಡಿ ಕೊಡುವ ಕೆಲಸ ಬರುತ್ತಿತ್ತು. ಜಗುಲಿಯ ದೊಡ್ಡ ಅಕ್ಕಿ ಮರಿಗೆಯಲ್ಲಿ ಇಳಿದು ಆಳುಗಳಿಗೆ ಸೇರಿನಲ್ಲಿ ಅಕ್ಕಿ ಅಳೆದು ಕೊಡುವ ಸಂಭ್ರಮವನ್ನು ಎಷ್ಟೋ ಸಲ ನಾನು ಅನುಭವಿಸಿದ್ದೆ. ಹುಡುಗನೆಂದೋ ಏನೋ ಕೆಲವು ಆಳುಗಳು ಹೆಚ್ಚಾಗಿ ಎರಡು ಹೋಳು ಅಡಿಕೆಯನ್ನು ಕೊಡಲು ಸಣ್ಣದನಿಯಲ್ಲಿ ಒತ್ತಾಯಿಸಿದರೂ ಮನೆ ಯಜಮಾನಿಕೆಯ ಗತ್ತಿನಲ್ಲಿ ಅದನ್ನು ನಿರಾಕರಿಸುವ ಧೈರ್ಯವನ್ನು ಪ್ರದಶರ್ಿಸಿದ್ದೆ.
ಸೇರೆಗಾರರ ಆಳುಗಳಿಗೆ ಮನೆಯಿಂದ ಅಕ್ಕಿ ಕೊಡುತ್ತಿದ್ದರೂ ಅವರಿಗೆ ಮೇಲು ಖಚರ್ಿಗೆ ಹಣವನ್ನು ಸೇರೆಗಾರ ಗಣಪಣ್ಣನೇ ಕೊಡುತ್ತಿದ್ದಿರಬೇಕು. ಅಥವಾ ವಾರಕ್ಕೊಮ್ಮೆ ಅವನು ಪೇಟೆಗೆ ಹೋಗಿ ಪ್ರತಿ ಬಿಡಾರದವರಿಗೆ ಬೇಕಾಗುವ ದಿನಸಿ ಸಾಮಾನುಗಳನ್ನು ತಂದುಕೊಡುತ್ತಿದ್ದನೋ ಏನೋ. ತೋಟದ ಕೆಲಸ ಮುಗಿಸಿ ಬಂದ ಅವರೆಲ್ಲ ಸಂಜೆಯಾಗುತ್ತಲೂ ತಮ್ಮ ತಮ್ಮ ಬಿಡಾರಗಳಲ್ಲಿ ಸೇರಿ ಬಿಸಿ ನೀರಿನ ಸ್ನಾನ ಮುಗಿಸಿ ಚಿಮಿಣಿ ದೀಪದ ಮಬ್ಬು ಬೆಳಕಲ್ಲಿ ಊಟವನ್ನು ಮುಗಿಸಿ ಬೇಗನೇ ನಿದ್ದೆಗೆ ಇಳಿಯುತ್ತಿದ್ದರು. ಹೆಣ್ಣಾಳುಗಳು ಮನೆಯ ಹಿತ್ತಲಿನಲ್ಲಿ ಬೆಳೆದಿರುತ್ತಿದ್ದ ಸೊಪ್ಪು ತರಕಾರಿಗಳನ್ನೋ, ಒಣಮೀನನ್ನೋ ಊಟಕ್ಕೆ ಅಣಿಗೊಳಿಸುತ್ತಿದ್ದರು. ಒಂದೇ ಕಡೆ ಅಡಿಗೆ ಮಾಡುವುದಾಗಲೀ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದುದಾಗಲೀ ಇರಲಿಲ್ಲ. ಪ್ರತಿ ಬಿಡಾರವೂ ಪ್ರತ್ಯೇಕ ಮನೆಯಂತೆ ಇರುತ್ತಿತ್ತು.
ಇದನ್ನು ಕಣ್ಣಾರೆ ಕಂಡಿದ್ದ ನನಗೆ `ಕಾನೂರು ಹೆಗ್ಗಡಿತಿ'ಯಲ್ಲಿ ಬರುವ ಬಾಡುಗಳ್ಳ ಸೋಮ ಹಂದಿಯ ಹುರಿದ ತುಂಡುಗಳನ್ನು ಒಂದೊಂದಾಗಿ ತಿನ್ನುತ್ತ ಕೊನೆಗೆ ಎಲುಬಿನ ಚೂರೊಂದು ಗಂಟಲಲ್ಲಿ ಸಿಕ್ಕಿಕೊಂಡು ಒದ್ದಾಡುವ ಚಿತ್ರಣವನ್ನು ಮನೆಯಲ್ಲಿ ಅಡಿಕೆ ಸುಲಿಯುವಾಗ ಕೇಳಿ ಬೆರಗಾಗಿತ್ತು. ಅಲ್ಲಿನ ವಿವರಣೆಗಳು ಸೋಮನ ಬಾಡುಗಳ್ಳತನವನ್ನು ಬಿಂಬಿಸುವಷ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆಯಲ್ಲವೇ ಎನಿಸಿತ್ತು. ಅವನು ಅದರ ಹಿಂದಿನ ದಿನ ನಡೆದ ಶಿಕಾರಿಯಲ್ಲಿ ಪುಟ್ಟಣ್ಣ ಹೊಡೆದ ಹಂದಿಯ ಮೇಲಿನ ಹಕ್ಕನ್ನು ಚಲಾಯಿಸುವ ಹುಂಬತನದಲ್ಲಿ ಕಿಲಿಸ್ತರ ಜಾಕಿಯಿಂದ ಕೈಗೆ ಪೆಟ್ಟನ್ನು ತಿಂದಿದ್ದ. ಆಗ ನಡೆದ ಚಕಮಕಿಯಲ್ಲಿ ಪುಟ್ಟಣ್ಣ ಪ್ರೀತಿಯಿಂದ ಸಾಕಿದ್ದ ಬೇಟೆ ನಾಯಿ ಟೈಗರ್ ಕಿಲಿಸ್ತರ ಜಾಕಿಯ ದೊಣ್ಣೆ ಏಟಿನಿಂದ ಮೃತಪಟ್ಟಾಗ ಅದರ ಅಂತ್ಯಕ್ರಿಯೆಯ ಶೋಕದಲ್ಲಿ ಮುಳುಗಿದ್ದ ಪುಟ್ಟಣ್ಣನಿಂದ ಟೈಗರ್ಗೆ ಸಲ್ಲಬೇಕಿದ್ದ ಹಂದಿ ಬಾಡಿನ ಪಾಲನ್ನು ತಾನು ಕೇಳಿ ಪಡೆದುಕೊಂಡಿದ್ದ. ಈ ಎರಡೂ ಹಕ್ಕಿನ ಕಾರಣ ತನಗೆ ಹಂದಿ ಬಾಡಿನಲ್ಲಿ ಹೆಚ್ಚಿನ ಪಾಲು ಸಿಗಬೇಕೆಂದು ಅವನು ಭಾವಿಸಿದ ಎಂಬರ್ಥದ ವಿವರಣೆಗಳು ಅಲ್ಲಿ ಬರುತ್ತವೆಯಲ್ಲ ಎಂಬುದು ಆಶ್ಚರ್ಯದ ಸಂಗತಿಯೂ ಆಗಿತ್ತು. ಅಲ್ಲಿನ ವಿವರಣೆಗಳು ಹೇಗಿವೆಯೆಂದರೆ ಹಂದಿ ಬಾಡನ್ನು ತಂದ ಮೇಲೆ ಗಟ್ಟದ ತಗ್ಗಿನ ಆಳುಗಳೆಲ್ಲ ಒಟ್ಟಿಗೆ ಅಡುಗೆ ಮಾಡಿಕೊಂಡು ಹಿಂದಿನ ರಾತ್ರಿ ಊಟ ಮಾಡಿದರು. ಉಳಿದ ಹುರಿ ತುಂಡನ್ನು ಬೆಳಿಗ್ಗೆ ಗಂಜಿಯೂಟದ ಸಂದರ್ಭದಲ್ಲಿ ಅಷ್ಟಿಷ್ಟು ಬಳಸಿಕೊಂಡರು. ಉಳಿದದ್ದನ್ನು ಮಧ್ಯಾಹ್ನವೋ, ರಾತ್ರಿಯೋ ಬಳಸುವುದಕ್ಕಾಗಿ ಹಾಗೆಯೇ ಎತ್ತಿಟ್ಟಿದ್ದರು ಎಂಬ ಅರ್ಥ ಬರುವಂತೆ ಇವೆ.
ಆ ದಿನ ಕೆಲಸಕ್ಕೆ ಉಳಿ ಮಾಡಿದ್ದ (ಅಂದರೆ `ರಜೆ' ಹಾಕಿದ್ದ) ಸೋಮ ಬಿಡಾರದಲ್ಲಿ ಹಾಗೆಯೇ ಸುಮ್ಮನೆ ಮಲಗಿದ್ದ. ಸ್ವಲ್ಪ ಹೊತ್ತಿಗೆ ಬೇಸರವಾಗಿ ಎದ್ದು ಎಲೆ ಅಡಿಕೆ ಹಾಕಿದ. ಅದನ್ನು ಉಗುಳಿ ಬಾಯಿ ತೊಳೆದುಕೊಳ್ಳಲು ಅಡಿಗೆ ಮನೆಗೆ ಹೋದಾಗ ಹಿಂದಿನ ರಾತ್ರಿ ಮಾಡಿದ್ದ ಹಂದಿಯ ಹುರಿದ ತುಂಡುಗಳನ್ನು ಕಂಡ. ಹಂದಿ ಬಾಡಿನ ಮೇಲೆ ತನಗೆ ಇದ್ದ ಹಕ್ಕನ್ನು ಮತ್ತೊಮ್ಮೆ ನೆನಪಿಗೆ ತಂದುಕೊಂಡ ಅವನು ಒಂದೆರಡು ತುಂಡುಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿಯತೊಡಗಿದ. ಮೊದಲೆಲ್ಲ ರುಚಿವಶನಾಗಿ ತಿನ್ನುತ್ತಿದ್ದವನು ಕ್ರಮೇಣ ಅದನ್ನು ಹಕ್ಕಿನಂತೆ ಮುಕ್ಕಳಿಸಲು ಆರಂಭಿಸಿದನು. ಯಾರಾದರೂ ಬಂದಾರೆಂಬ ಗಾಬರಿಯಲ್ಲಿ ತಿನ್ನುತ್ತಿದ್ದವನಿಗೆ ಮಾಂಸ ಮೆತ್ತಿದ ಎಲುಬೊಂದನ್ನು ನುಂಗುವ ಅವಸರದಲ್ಲಿ ಅದು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಉಸಿರು ಸಿಕ್ಕಿಕೊಂಡಂತಾಯಿತು. ಅದುವರೆಗೆ ಯಾರೂ ಬಾರದಿರಲಿ ಎಂದು ಹಾರೈಸುತ್ತಿದ್ದವನು ಯಾರಾದರೂ ಬಂದು ಕಾಪಾಡಲಿ ಎಂದು ನಿರೀಕ್ಷಿಸುವಷ್ಟು ಅಸಹಾಯಕನಾದನು ಎಂಬರ್ಥದ ನಿರೂಪಣೆಯನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಎಷ್ಟೇ ಬಾಡುಗಳ್ಳನಾದರೂ ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುವಷ್ಟು ಗಾಬರಿಯಲ್ಲಿ ಯಾರಾದರೂ ತಿನ್ನುತ್ತಾರೆಯೇ ಎಂದು ಮನೆಯಲ್ಲಿ ಅಡಿಕೆ ಸುಲಿಯುತ್ತಿದ್ದವರು ವ್ಯಾಖ್ಯಾನಿಸುತ್ತಿದ್ದರು. ಎಳೆಯನ ಕುತೂಹಲದಿಂದ ನೋಡುತ್ತಿದ್ದರೂ ಸೋಮನ ಬಾಡು ಪ್ರೇಮ ಅತಿಶಯ ವರ್ಣನೆ ಎಂಬಂತೆ ತೋರುತ್ತಿತ್ತು.
ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ನಮ್ಮಲ್ಲಿಗೆ ಗದ್ದೆ ಕೆಲಸಕ್ಕೆ ಕರಡಿ ಎಂಬಾತ ಬರುತ್ತಿದ್ದ. ಅವನಿಗೆ ಅದೇ ಹೆಸರು ಇಟ್ಟಿದ್ದರೋ, ಗುಂಗುರು ಗುಂಗುರು ಕಪ್ಪು ಕೂದಲಿನ ಕಾರಣ ಅನ್ವರ್ಥಕವಾಗಿ ಆ ಹೆಸರು ಬಂದಿತ್ತೋ ತಿಳಿದಿರಲಿಲ್ಲ. ಅವನಿಗೆ ಮಧ್ಯಾಹ್ನದ ಊಟಕ್ಕೆ ಬಾಳೆಎಲೆಯಲ್ಲಿ ಅಂಚಿನಲ್ಲಿ ಚೆಲ್ಲುವಷ್ಟು ಅನ್ನ ಹಾಕಿದರೂ ಆತ ಬೇಡ ಎನ್ನುತ್ತಿರಲಿಲ್ಲ. ಎರಡನೇ ಸಲಕ್ಕೂ ಅವನು ಅಷ್ಟು ಅನ್ನವನ್ನು ತಿನ್ನುತ್ತಿದ್ದ. ಅವನು ಊಟ ಮಾಡುತ್ತಿದ್ದ ಅನ್ನದ ಪ್ರಮಾಣದಲ್ಲಿ ಇಬ್ಬರು ಗಂಡಸರು ಹೊಟ್ಟೆ ಬಿರಿಯುವಷ್ಟು ಊಟ ಮಾಡಬಹುದಿತ್ತು. ಕರಡಿಯ ಹೊಟ್ಟೆ ಅಳತೆ ಮೀರಿದ್ದನ್ನು ಅವನಿಗೆ ಊಟ ಬಡಿಸುವವರು ಮಾತ್ರವೇ ಗಮನಿಸುತ್ತಿರಲಿಲ್ಲ. ಅವನು ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗ ಅಕ್ಕಪಕ್ಕದಲ್ಲಿ ಕುಳಿತವರೆಲ್ಲ ಅವನ ಎಲೆಯನ್ನು ಗಮನಿಸುತ್ತಿದ್ದರು. ಕರಡಿ ಎಂದರೆ ಹೊಟ್ಟೆಬಾಕ ಎನ್ನುವಂತಾಗಿ ಹೋಗಿತ್ತು. ಆದರೆ, ಯಾರೂ ಅದನ್ನು ಅವನ ಎದುರಿನಲ್ಲಿ ಹೇಳಲು ಹೋಗುತ್ತಿರಲಿಲ್ಲ.
ಕರಡಿ ಗದ್ದೆ ಕೆಲಸಕ್ಕೆ ನಮ್ಮ ಮನೆಗಷ್ಟೇ ಬರುತ್ತಿರಲಿಲ್ಲ. ನಮ್ಮ ಊರಿಗೆ ಹತ್ತಿರದ ಗೌಡರ ಮನೆಯ ಕೆಲಸಕ್ಕೂ ಹೋಗುತ್ತಿದ್ದ. ನಮ್ಮ ಮನೆಯಲ್ಲಿ ನಮ್ಮೆಲ್ಲರ ಜೊತೆಗೆ ಊಟಕ್ಕೆ ಕೂರುತ್ತಿದ್ದವನಿಗೆ ಗೌಡರ ಮನೆಯಲ್ಲಿ ಕೊಟ್ಟಿಗೆಯ ಬಳಿ ಕಟ್ಟೆಯಲ್ಲಿ ಕೂರಿಸಿ ಊಟ ಹಾಕುತ್ತಿದ್ದರು. ಅಲ್ಲಿಯೂ ಅವನ ಅಪರಿಮಿತ ಭಕ್ಷಣಾ ಸಾಮಥ್ರ್ಯ ಪ್ರಕಟವಾಗಿತ್ತು. ನಮ್ಮಲ್ಲೇನೋ ಅದನ್ನು ರಹಸ್ಯವಾಗಿ ಇರಿಸಿಕೊಂಡಿದ್ದರೆ, ಗೌಡರ ಮನೆಯವರಿಗೆ ಅಂತಹ ಸೂಕ್ಷ್ಮತೆ ಅವಶ್ಯಕವೆನಿಸಿರಲಿಲ್ಲ. ಗೌಡರ ಮನೆಯ ಆಳುಕಾಳುಗಳೆಲ್ಲ ಕರಡಿಯ ಹೊಟ್ಟೆಬಾಕತನವನ್ನು ಅವನಿಗೆ ನಾಚಿಕೆಯಾಗುವಷ್ಟರ ಮಟ್ಟಿಗೆ ಆಡಿಕೊಳ್ಳುತ್ತಿದ್ದರು. ಅದೇ ಸುಮಾರಿನಲ್ಲಿ ಗೌಡರ ಮನೆಯಲ್ಲಿ ಒಂದು ಮದುವೆ ನಡೆಯಿತು. ಮದುವೆ ಮನೆಗೆ ಹೋಗಿದ್ದ ಕರಡಿ ಊಟಕ್ಕೆ ಕುಳಿತಿದ್ದಾಗ ಗೌಡರು ವಿಚಾರಿಸಿಕೊಳ್ಳಲು ಬಂದವರು `ಕರಡಿಗೆ ಸರಿಯಾಗಿ ಅನ್ನ ಹಾಕ್ರೋ..' ಎಂದು ಊಟದ ಪಂಕ್ತಿಯಲ್ಲಿ ಕುಳಿತಿದ್ದ ನೂರಾರು ಮಂದಿಯ ಎದುರಿಗೆ ಹೇಳಿ ತಮ್ಮ ದೊಡ್ಡಸ್ಥಿಕೆ ಮೆರೆದಿದ್ದರಂತೆ. ಅವರು ಕೂಡ ಪಟೇಲರು. ಮನೆಯಲ್ಲಿ ಜೀತದ ಆಳುಗಳೂ ಇದ್ದ ಜಮೀನುದಾರರು. ಕಾನೂರು ಚಂದ್ರಯ್ಯಗೌಡರಂತೆ, ಕುಪ್ಪಳಿಯ ಪಟೇಲರಂತೆ.
ಗೌಡರ ಮನೆಗಳೆಂದರೆ ಒಳಗಡೆ ದೊಡ್ಡ ಭಾವಂತಿ ಅಂಗಳ ಇರುವ ಸುತ್ತು ಪ್ರಾಕಾರದ ಕಟ್ಟಡಗಳು. ಚಿಕ್ಕವನಿದ್ದಾಗ ಒಂದು ಸಲ ಯಾವುದೋ ಮದುವೆ ಸಂದರ್ಭದಲ್ಲಿ ಹುಡುಗರೊಂದಿಗೆ ಹೋಗಿದ್ದೆ. ಹೆಬ್ಬಾಗಿಲಿನಿಂದ ಪ್ರವೇಶ. ಪ್ರವೇಶಿಸುತ್ತಲೂ ಒಂದು ಕಡೆ ಕೊಟ್ಟಿಗೆ. ಕೊಟ್ಟಿಗೆಗೆ ಹೊಂದಿಕೊಂಡಂತೆ ದೊಡ್ಡ ಅಂಗಳ. ಅಂಗಳಕ್ಕೆ ನೇರ ಬಿಸಿಲು ಬರುತ್ತಿತ್ತು. ಮೈಸೂರು ಮಂಡ್ಯ ಕಡೆಯ ಹಳ್ಳಿಗಳಲ್ಲಿ ಸಿರಿವಂತ ರೈತರು ಕಟ್ಟಿಸಿಕೊಂಡ ತೊಟ್ಟಿ ಮನೆಗಳಂತೆ. ಅಂಗಳಕ್ಕೆ ಹೊಂದಿಕೊಂಡಂತೆ ಬಯಲಿನ ಅಂಕಣ. ಅದನ್ನು ಪಾತಾಳಂಕಣ ಎಂದು ಕರೆಯುವುದು ವಾಡಿಕೆ. ಅದರ ಮೇಲುಗಡೆ ಜಗುಲಿ ಎಂಬ ಪ್ರದೇಶ. ಸ್ವಲ್ಪ ಎತ್ತರಕ್ಕಿರುವ ಜಗುಲಿಯಲ್ಲಿ ಒಳಮನೆಗೆ ಪ್ರವೇಶಿಸುವ ಕುಸುರಿ ಕೆಲಸದ ಬಾಗಿಲು. ಅದರ ಪಕ್ಕದಲ್ಲಿ ಗೌಡರು ಕುಳಿತುಕೊಳ್ಳುವ ಕುಚರ್ಿ. ಅದು ಅವರ ದಬರ್ಾರಿನ ಜಾಗ. ಈ ಜಾಗದಲ್ಲಿ ಕುಳಿತುಕೊಂಡೇ ಆಳುಕಾಳುಗಳನ್ನು ಗದರಿಸುವುದು. ಜಗುಲಿ ಹತ್ತುವುದು ಮನೆಯವರು ಮತ್ತು ಬಂಧುಗಳು ಮಾತ್ರ. ಆಳುಗಳು, ಹೊರಜಾತಿಯವರು ಅಂಗಳದಲ್ಲಿ ನಿಂತುಕೊಂಡೇ ಗೌಡರ ಆದೇಶಗಳನ್ನು ಕೇಳಬೇಕು. ಕೊಟ್ಟಿಗೆಯ ಇನ್ನೊಂದು ಪಾಶ್ರ್ವಕ್ಕೆ ಪಾತಾಳಂಕಣದ ವಿಸ್ತರಣೆ. ಅದು ಮನೆಯ ಹಿಂದುಗಡೆಯವರೆಗೂ ಸಾಗುವ ಕಡಿಮಾಡು. ಅಲ್ಲಿ ಅಡಿಕೆ ಬೇಯಿಸುವ ಒಲೆಗಳು. ಕರೆಯುವ ಹಸುಗಳ ಕೊಟ್ಟಿಗೆ. ಕರುಗಳನ್ನು ಬಿಡುವ ಸಣ್ಣ ಕೊಟ್ಟಿಗೆ. ಇಷ್ಟಿದ್ದರೂ ಈ ಕಡಿಮಾಡು ಗೌಡರ ಅವಕೃಪೆಗೆ ಒಳಗಾದವರನ್ನು ಕಂಬಕ್ಕೆ ಕಟ್ಟಿ ಶಿಕ್ಷಿಸುವ ಲಾಕಪ್ಪಿನಂತೆಯೂ ಕುಪ್ರಸಿದ್ಧವಾದದ್ದು. `ಏಯ್, ಕರ್ಕೊಂಡು ಹೋಗೋ ಅವನ್ನ ಕಡಿಮಾಡು ಕಡೆ..' ಎಂದು ಗೌಡರು ಆದೇಶ ಮಾಡಿದರೆಂದರೆ ಅವರ ಕೋಪಕ್ಕೆ ಗುರಿಯಾದ ವ್ಯಕ್ತಿಗೆ ಕಂಬಕ್ಕೆ ಕಟ್ಟಿ ಬಾರಕೋಲಿನಿಂದ ಹೊಡೆಯುವುದೆಂದೇ ಅರ್ಥ. ಹೆಬ್ಬಾಗಿಲಿನಿಂದ ಒಳಪ್ರವೇಶಿಸಿದರೆ ಕೋಟೆಯನ್ನು ಹೊಕ್ಕಂತೆ. ಭದ್ರತೆ, ಪ್ರತಿಷ್ಠೆ, ಯಜಮಾನಿಕೆಯ ಪ್ರತೀಕದಂತೆ ದೊಡ್ಡ ಗೌಡರುಗಳ ಮನೆ.
ನಾನು ನೋಡಿದ್ದ ಗೌಡರ ಮನೆ ನಮ್ಮ ಹಳ್ಳಿಗೆ ಹತ್ತಿರ ಇದ್ದ ಊರಿನದು. ಈ ಗೌಡರಲ್ಲಿ ನಮ್ಮ ಜಮೀನುಗಳೆಲ್ಲ ಸಾಲಕ್ಕೆ ಅಡವಾಗಿದ್ದವು. ಅಪ್ಪನ ಪ್ರಯತ್ನದಿಂದ ವರ್ಷಕ್ಕೆ ಇನ್ನೂರೈವತ್ತು ರೂಪಾಯಿ ಕಂತಿನ ಮೇಲೆ ನಲವತ್ತು ವರ್ಷಗಳ ದೀರ್ಘ ಅವಧಿಗೆ ದೀಡಾಗಿದ್ದವು. ನಾವು ಗೇಣಿ ರೈತರಂತೆ ಗೌಡರ ಒಕ್ಕಲುಗಳಾಗಿರಲಿಲ್ಲ. ಆದರೆ ಗೌಡರಿಂದ ಸಾಲಗಾರರಾಗಿದ್ದೆವು. ಪ್ರತಿ ವರ್ಷ ಕಂತು ಕಟ್ಟಿಕೊಂಡು ಬರದಿದ್ದರೆ ಸಾಲದ ವಸೂಲಿಗೆ ಅವರು ಕ್ರಮ ಕೈಗೊಳ್ಳಬಹುದಿತ್ತು. ಗೌಡರ ಕಿರಾತಕ ಬುದ್ಧಿಯ ಅರಿವಿದ್ದ ಅಪ್ಪ ಮಾಘ ಬಹುಳ ಅಮಾವಾಸ್ಯೆಗೆ ಮೊದಲು ಗೌಡರಿಗೆ ಸಂದಾಯವಾಗಬೇಕಾದ ಕಂತಿನ ಹಣವನ್ನು ಮನಿಆರ್ಡರ್ ಮಾಡಿ ಬಿಡುತ್ತಿದ್ದ. ನಮ್ಮೂರಿನಿಂದ ಒಂದು ಮೈಲು ದೂರವೂ ಇಲ್ಲದ ಗೌಡರ ಮನೆಗೆ ಮನಿ ಆರ್ಡರ್ ಮಾಡುವುದೇಕೆ ಎಂದು ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಥರ್ಿಯಾಗಿದ್ದ ನನಗೆ ಪ್ರಶ್ನೆ ಎದ್ದಿತ್ತು. ಗೌಡರ ಮನೆಗಳಿಗೆ ಹೋಗಿ ಅಂಗಳದಲ್ಲಿ ನಿಂತು ಅಪಮಾನವಾಗುವ ಸಂಕಟದಿಂದ ಪಾರಾಗಲು ಅಪ್ಪ, ಸಾಲದ ಪ್ರಕರಣ ಕೋಟರ್್ ಕಟ್ಟೆ ಹತ್ತಿದ್ದಾಗ ಹೀಗೆ ಮನಿ ಆರ್ಡರ್ ಮೂಲಕ ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದನೆಂದು ನಂತರ ಗೊತ್ತಾಗಿ ಅಪ್ಪನ ವ್ಯವಹಾರ ಕೌಶಲ್ಯಕ್ಕೆ ಮೆಚ್ಚುಗೆ ಮೂಡಿತ್ತು. ನಮ್ಮೂರಿನವರು, ಗೌಡರ ಎದುರು ಚರ್ಮದ ಚಪ್ಪಲಿ ಹಾಕಿಕೊಂಡು ನಡೆದಾಡಿದರೆ ಗೌಡರಿಗೆ ಕೋಪ ಬರುತ್ತಿತ್ತಂತೆ.
ಒಮ್ಮೆ ನಮ್ಮೂರಿನ ತಿಮ್ಮಯ್ಯ ಎಂಬುವರು ಗೌಡರ ಮನೆ ಎದುರು ಹಾದು ಹೋಗಿದ್ದಾರೆ. ಹೊಸದಾಗಿ ಹೊಲಿಸಿದ್ದ ಚರ್ಮದ ಚಪ್ಪಲಿಗಳು. ಗಿಕರ್ಿನ ಚಪ್ಪಲಿಗಳಿಂದ ಸ್ವಲ್ಪ ದೂರದವರೆಗೂ ನಡೆದಾಡುವ ಸದ್ದು ಕೇಳುತ್ತಿರುತ್ತದೆ. ಗೌಡರ ಮನೆಯಿಂದ ಅರ್ಧ ಫಲರ್ಾಂಗ್ ದೂರದಲ್ಲಿ ಚೌರದವರ ಮನೆ. ತಲೆ ಚೌರ ಮಾಡಿಸಿಕೊಳ್ಳುವುದಿರಲಿ, ಗಡ್ಡ ಮಾಡಿಸಿಕೊಳ್ಳುವುದಿರಲಿ, ತುತರ್ು ಸಂದರ್ಭ ಇದ್ದರೆ ಅವರ ಮನೆಗಳಿಗೇ ಹೋಗಿ ಬರಬೇಕು. ತಿಮ್ಮಯ್ಯ ತುತರ್ು ಸನ್ನಿವೇಶ ಎಂದುಕೊಂಡು ಚೌರದವನ ಮನೆಗೆ ಹೋಗಿದ್ದಾರೆ. ಗೌಡರ ಮನೆಯ ಎದುರಿಗೆ ಹೋಗುವಾಗ ಅವರ ಚಪ್ಪಲಿಯ ಗಿಕರ್ಿ ಗಿಕರ್ಿ ಸದ್ದು ಮನೆಯ ಒಳಗೆ ಕೊಟ್ಟಿಗೆಯಲ್ಲಿ ಆಳುಗಳೊಟ್ಟಿಗೆ ಏನೋ ಕೆಲಸ ಮಾಡಿಸುತ್ತಿದ್ದ ಗೌಡರಿಗೆ ಕೇಳಿಸಿದೆ. `ಯಾರದ್ದೋ ಅದು ಮೆಟ್ಟಿನ ಸಪ್ಪಳ. ಯಾರಾದ್ರೂ ನೆಂಟರು ಬಂದ್ರೇನೋ ನೋಡ್ರೋ' ಎಂದು ತಮ್ಮ ಆಳೊಬ್ಬನನ್ನು ಹೊರಕ್ಕೆ ಕಳುಹಿಸಿದ್ದಾರೆ. ಅವನು ಹೊರಗೆ ಬಂದವನು ತಿಮ್ಮಯ್ಯನನ್ನು ನೋಡಿ `ಅದೇ, ಒಡಿಯಾ, ತಿಮ್ಮನಾಯ್ಕ, ಮೆಟ್ಟು ಹಾಕ್ಕಂಡು ಜೋರಾಗಿ ಚೌರದವರ ಮನೆ ಕಡೆ ಹೋದ..' ಎಂದು ವರದಿ ಒಪ್ಪಿಸಿದ್ದಾನೆ.
ತಿಮ್ಮಯ್ಯ ಚೌರದವನ ಮನೆ ತಲುಪಿದ್ದಾರೆ. ಎಲ್ಲಿಗೋ ಕೆಲಸದ ಮೇಲೆ ಹೋಗಿದ್ದ ಚೌರದವನನ್ನು ಕಾದಿದ್ದು ಅವನು ಬಂದ ಮೇಲೆ ಚೌರ ಮಾಡಿಸಿಕೊಂಡು ವಾಪಸಾಗಿದ್ದಾರೆ. ವಾಪಸು ಬರುವಾಗ ಮತ್ತೆ ಮೆಟ್ಟಿನ ಗಿಕರ್ು ಗಿಕರ್ು ಶಬ್ದ. ಗೌಡರ ಮನೆ ಹತ್ತಿರ ಬರುತ್ತಿದ್ದಂತೆ ಕಿರಿಕಿರಿಗೆ ಒಳಗಾದ ಗೌಡರು ಮೊದಲು ಕಳಿಸಿದ್ದ ಆಳನ್ನೇ ಕರೆದು `ಅವನ್ನು ಕರ್ಕಂಡು ಬಾ' ಎಂದು ಆದೇಶಿಸಿದ್ದಾರೆ. ಅವನು ಹೊರಗಡೆ ಬಂದು, ಗೌಡರ ಮನೆಯ ಎದುರು ರಸ್ತೆಯಲ್ಲಿ ಸಾಗುತ್ತಿದ್ದ ತಿಮ್ಮಯ್ಯನನ್ನು `ಗೌಡರು ಕರೀತಿದ್ದಾರೆ ಬಾ..' ಎಂದು ಕರೆದಿದ್ದಾನೆ. ಗೌಡರೊಂದಿಗೆ ಯಾವ ವ್ಯವಹಾರ ಇಲ್ಲದಿದ್ದರೂ ದೊಡ್ಡವರು ಕರೆದಾಗ ಹೋಗದಿರುವುದು ಸರಿಯಲ್ಲ ಎಂದುಕೊಂಡು ತಿಮ್ಮಯ್ಯ ಗೌಡರ ಮನೆಗೆ ಹೋಗಿದ್ದಾರೆ. ಅಭ್ಯಾಸದಂತೆ ಹೆಬ್ಬಾಗಿಲ ಹೊರಗಡೆ ತಮ್ಮ ಚರ್ಮದ ಚಪ್ಪಲಿಗಳನ್ನು ಬಿಟ್ಟು ಒಳಗೆ ಪ್ರವೇಶಿಸಿದ್ದಾರೆ. ಅವರು ಒಳಗೆ ಪ್ರವೇಶಿಸುತ್ತಲೇ ಗೌಡರು ತಮ್ಮ ಆಳುಗಳಿಗೆ `ಹೆಬ್ಬಾಗಿಲು ಹಾಕ್ರೋ' ಎಂದು ಆದೇಶಿಸಿದ್ದಾರೆ. ಗೌಡರ ಮನೆಗೆ ಹೋದ ತಕ್ಷಣ ಹೆಬ್ಬಾಗಿಲು ಹಾಕುವುದೆಂದರೆ ಯಾವುದೋ ವಿಚಾರಣೆಗೆ ಒಳಗಾಗುವುದೆಂದು ಕೇಳಿ ತಿಳಿದಿದ್ದ ತಿಮ್ಮಯ್ಯನವರಿಗೆ ಅದು ಪ್ರತ್ಯಕ್ಷ ಅನುಭವಕ್ಕೆ ಬಂದಿದೆ.
ಆಳೊಬ್ಬ ಹೆಬ್ಬಾಗಿಲು ಹಾಕುತ್ತಿದ್ದಂತೆ ಮನೆಯ ಕೋಟೆಯೊಳಗೆ ಸೆರೆಸಿಕ್ಕ ಕೈದಿಯಂತೆ ಅಸಹಾಯಕನಾಗಿದ್ದ ತಿಮ್ಮಯ್ಯನತ್ತ ದೂರದ ಜಗುಲಿಯಿಂದ ಕೆಕ್ಕರಿಸಿ ನೋಡಿದ ಗೌಡರು `ಸೂಳೆಮಗನಿಗೆ ಏನು ದೌಲತ್ತು? ಗಿಕರ್ಿ ಜೋಡು ಹಾಕಿಕೊಂಡು ಜಬರ್ು ತೋರಿಸ್ತಾನೆ, ಹಾಕ್ರೋ ಅವನಿಗೆ ನಾಕು, ಮೆಟ್ಟಲ್ಲಿ..' ಎಂದು ಅಬ್ಬರಿಸಿ ಕೋಪ ಪ್ರದಶರ್ಿಸಿದ್ದಾರೆ. ಒಂಟಿಯಾಗಿ ಸೆರೆ ಸಿಕ್ಕಿದ ತಿಮ್ಮಯ್ಯ ಆಗಷ್ಟೆ ತಲೆಗೆ ಚೌರ ಮಾಡಿಸಿಕೊಂಡು ಬಂದಿದ್ದವರು, ಗೌಡರ ಆಳುಗಳಿಂದ ಚಪ್ಪಲಿ ಪ್ರಹಾರಕ್ಕೆ ಒಳಗಾಗಿದ್ದಾರೆ. ಅಸಹನೆಯಿಂದ ಕುದಿಯುತ್ತಿದ್ದ ಗೌಡರೂ ತಮ್ಮದೊಂದು ಚಪ್ಪಲಿಯನ್ನು ಹುಡುಕಿ ತಿಮ್ಮಯ್ಯನ ತಲೆಯ ಮೇಲೆ ಬಡಿದಿದ್ದಾರೆ. ತಿಮ್ಮಯ್ಯ, ಗೌಡರ ಕಾಲ ಬಳಿ ಕುಸಿದು `ದಮ್ಮಯ್ಯ ಬಿಟ್ಟು ಬಿಡಿ..' ಎಂದು ಅಂಗಲಾಚಿಕೊಂಡು ಅಂತೂ ಹೊರಗಡೆ ಬಂದಿದ್ದಾರೆ. ಹೆಬ್ಬಾಗಿಲ ಹೊರಗಡೆ ಬಿಟ್ಟಿದ್ದ ತಮ್ಮ ಹೊಸ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದೇ ಊರ ಕಡೆ ದೌಡಾಯಿಸಿದ್ದಾರೆ. ತಿಮ್ಮಯ್ಯನಿಗೆ ಗೌಡರ ಮನೆಯಲ್ಲಿ ಶಿಕ್ಷೆಯಾದ ಸಂಗತಿ ಒಂದೆರಡು ದಿನಗಳಲ್ಲಿ ಗೌಡರ ಮನೆಯ ಆಳುಗಳ ಮೂಲಕ ನಮ್ಮೂರಿಗೆ ತಲುಪಿ ಮನೆಯವರ ಪಿಸುಮಾತಿಗೂ ಕಾರಣವಾಗಿತ್ತು. ಪಟೇಲಿಕೆಯೂ ಇದ್ದ ಗೌಡರ ದೌರ್ಜನ್ಯದ ಸುದ್ದಿ ಕೇಳಿದಾಗ ಅಪ್ಪ ಸಾಲದ ಕಂತು ಕಟ್ಟಲು ಮನಿ ಆರ್ಡರ್ ಮಾಡುವ ಮಾರ್ಗ ಅನುಸರಿಸಿ ಎಷ್ಟು ಒಳ್ಳೆಯ ಕೆಲಸ ಮಾಡಿದ ಎನಿಸಿತ್ತು.        
ಹೈಸ್ಕೂಲಿನಲ್ಲಿ ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ನಾನು `ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಅದು ಶಾಲೆಯ ಗ್ರಂಥಾಲಯಕ್ಕೆ ಬಂದ ತಕ್ಷಣವೇ ಓದಿಬಿಟ್ಟಿದ್ದೆ. ಅದನ್ನು ಎಷ್ಟರಮಟ್ಟಿಗೆ ಹಚ್ಚಿಕೊಂಡಿದ್ದೆ ಎಂದರೆ ನಾನು ಹೈಸ್ಕೂಲು ಕಲಿಯಲು ನೆಲೆಸಿದ್ದ ಹುಳುಗದ್ದೆಯಿಂದ ಪೇಟೆಗೆ ಎರಡು ಮೈಲು ನಡೆದುಕೊಂಡು ಬರುವಾಗ ಕೂಡ ಓದುತ್ತಿದ್ದೆ. ಶಾಲೆಯಿಂದ ಮನೆಗೆ ಮರಳುವಾಗ ರಸ್ತೆಯ ಬದಿ ನಿಧಾನವಾಗಿ ನಡೆಯುತ್ತಾ ಅದನ್ನು ಓದುತ್ತಿದ್ದೆ. ಅದನ್ನು ಪೂತರ್ಿ ಓದಿ ಮುಗಿಸಿದ ಮೇಲೆಯೇ ನಾನು ಇತರ ಪಠ್ಯದ ಕಡೆ ಗಮನ ಹರಿಸಿದ್ದೆ. ಅಷ್ಟರಮಟ್ಟಿಗೆ `ಮಲೆಗಳಲ್ಲಿ ಮದುಮಗಳು' ನನ್ನನ್ನು ಆವರಿಸಿಕೊಂಡಿತ್ತು. ಬೆಟ್ಟಳ್ಳಿ ಕಲ್ಲಯ್ಯಗೌಡರ ಮನೆ ಪಡಸಾಲೆಯಲ್ಲಿ ದೊಡ್ಡಬೀರನ ಮಗ ಸಣ್ಣಬೀರನಿಗೆ ವಸೂಲಿ ಸಾಬರಿಂದ `ಹೊನ್ನಳ್ಳಿ ಹೊಡ್ತ' ಕೊಡಿಸಿದ ಸಂದರ್ಭ ಓದುತ್ತಿದ್ದಾಗ ನೆನಪಿಗೆ ಬಂದದ್ದೇ ಆಯುಷ್ಕರ್ಮಕ್ಕೆ ಹೋಗಿದ್ದ ನಮ್ಮೂರ ತಿಮ್ಮಯ್ಯ ಗಿಕರ್ಿ ಮೆಟ್ಟಿನ ದೆಸೆಯಿಂದ ಗೌಡರ ಆಳುಗಳಿಂದ ಹೊಡೆತ ತಿಂದ ಪ್ರಸಂಗ.
* * *
ರಿಪ್ಪನ್ಪೇಟೆಯಲ್ಲಿ ನೂತನ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ನಾಲ್ಕರಿಂದ ಏಳನೆಯ ತರಗತಿಯವರೆಗೆ ಓದಿ ಅಲ್ಲಿದ್ದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದೆ. ಸೋದರ ಮಾವನ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದೆ. ವಿಜ್ಞಾನ, ಗಣಿತದ ಪ್ರಪಂಚಕ್ಕೆ ತೆರೆದುಕೊಂಡವನಿಗೆ ಓದಿನ ಹಸಿವು ಹೆಚ್ಚಿಸಿದ ಅವಧಿ ಅದು. ನನಗೆ ಐದನೆಯ ತರಗತಿಯಿಂದ ಜೊತೆ ಸೇರಿದ ಬರುವೆ ತಿಮ್ಮಪ್ಪ ಜನ್ಮಾಂತರದ ಬಂಧುವಾಗಿ ಹೋದ. ಹೈಸ್ಕೂಲು ದಿನಗಳಲ್ಲಿ ಇಬ್ಬರೂ ಒಂದೇ ಕೋಣೆಯಲ್ಲಿ ಇದ್ದೆವು. ಇಬ್ಬರಿಗೂ ಭವಿಷ್ಯದ ಬಗ್ಗೆ ಖಚಿತ ಗುರಿ ಇರಲಿಲ್ಲ. ಆದರೆ, ಬೀಜಗಣಿತ, ರೇಖಾಗಣಿತದ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಹೊತ್ತುಗೊತ್ತಿನ ಪರಿವೆ ಇಲ್ಲದೆ ತೊಡಗಿಕೊಂಡಿರುತ್ತಿದ್ದೆವು. ನಮ್ಮ ಹೈಸ್ಕೂಲು ಮೇಷ್ಟರುಗಳು ಆ ಹದಿವಯಸ್ಸಿನಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸಿದ್ದರು. ಹೆಡ್ಮಾಸ್ಟರ್ ಮುರುಗೇಂದ್ರಪ್ಪನವರು `ಸ್ಮಶಾನ ಕುರುಕ್ಷೇತ್ರ' ನಾಟಕವನ್ನು, ಅದು ಪಠ್ಯವಾಗಿರದಿದ್ದರೂ ಓದಿ ನಮ್ಮಲ್ಲಿ ಓದುವ ಹಸಿವನ್ನು ಹುಟ್ಟಿಸಿದ್ದರು. ಪಂಡಿತ ನಾಗೇಂದ್ರ ಭಟ್ಟರು ಕನ್ನಡದ ವ್ಯಾಕರಣವನ್ನು ತಲಸ್ಪಶರ್ಿಯಾಗಿ ಕಲಿಸಿದ್ದರು. ನಾರಾಯಣ ಭಟ್ಟರು ಹಳಗನ್ನಡ ಪಾಠ ಮಾಡುತ್ತಾ ಸುಕನಾಸ ಮಂತ್ರಿ ಚಂದ್ರಾಪೀಡನಿಗೆ ನೀಡಿದ ಉಪದೇಶದ ನೆಪದಲ್ಲಿ ಬಾಣನ ಕಾದಂಬರಿಯ ಸಂಸ್ಕೃತ ಮೂಲದ ಸ್ವಾರಸ್ಯವನ್ನು ಹೇಳಿ ಕಾದಂಬರಿ, ಮಹಾಶ್ವೇತೆಯರ ಹೆಸರುಗಳನ್ನು ಪರಿಚಯಿಸಿದ್ದರು. ಎಂ.ಆರ್.ಲಿಂಗರಾಜು, ಎಂ.ಈಶ್ವರಪ್ಪ, ಅನಂತಮೂತರ್ಿ, ಗೋಪಾಲರಾವ್ ಅವರೆಲ್ಲ ನಮಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸುಭದ್ರವಾದ ಅಡಿಪಾಯ ಹಾಕಿಕೊಟ್ಟವರು (ಐದನೆಯ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಸದಾ ಜೊತೆಯಾಗಿರುತ್ತಿದ್ದ ನಾವಿಬ್ಬರು ಎಸ್ಸೆಸ್ಸೆಲ್ಸಿ ಮುಗಿದ ನಂತರ ಬೇರೆ ಬೇರೆಯಾದರೂ ಆ ದಿನಗಳ ಆಪ್ತತೆ ಆರು ದಶಕಗಳ ನಂತರವೂ ಹೆಚ್ಚಾಗುತ್ತಿದೆ).
ರಿಪ್ಪನ್ಪೇಟೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಮುಂದೇನು ಎನ್ನುವ ಪ್ರಶ್ನೆ ಮನೆಯಲ್ಲಿ ಎದ್ದಿತು. ಆಗ ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗುವುದು ದೊಡ್ಡ ಸಾಧನೆ ಎಂದು ಪರಿಗಣಿತವಾಗುತ್ತಿದ್ದ ಕಾಲ. ಪೇಟೆಗೊಮ್ಮೆ ಹೋಗಿದ್ದ ಅಪ್ಪ ತನ್ನ ವಾರಿಗೆಯ ಕೆಲವು ಗೌಡರುಗಳಲ್ಲಿ ಸಲಹೆ ಕೇಳಿದಾಗ `ಮುಂದೆ ಕಾಲೇಜು.. ಅದೂ ಇದೂ ಅಂತ ತಲೆ ಕೆಡಿಸ್ಗೋಬ್ಯಾಡ.. ಎಲ್ಲಾದರೂ ಮೇಷ್ಟರ ಕೆಲಸ ಹುಡುಕೋದಕ್ಕೆ ಹೇಳು' ಎಂದು ಹೇಳಿದ್ದರಂತೆ. ಅಪ್ಪ ಮನೆಯಲ್ಲಿ ಅದನ್ನೇ ಹೇಳಿದಾಗ ನನಗೆ ಅದೂ ಆಗಬಹುದೇನೋ ಅನ್ನಿಸಿತ್ತು. ಅಪ್ಪನೂ ಯೋಚನೆ ಮಾಡಿದ್ದಿರಬೇಕು. ಮೊದಲಿಂದಲೂ ಪಾಸಾಗುತ್ತಲೇ ಬಂದಿದ್ದ ನನ್ನ ವಿದ್ಯಾಭ್ಯಾಸ ಅಷ್ಟಕ್ಕೆ ಮೊಟಕು ಮಾಡಲು ಅವನು ಇಷ್ಟಪಡಲಿಲ್ಲ. ಅದು ಮತ್ತೆ ಮನೆಯಲ್ಲಿ ಚಚರ್ೆಗೆ ಬಂತು. ಎಲ್ಲಾದರೂ ಉಚಿತ ವಿದ್ಯಾಥರ್ಿ ನಿಲಯದ ಸೌಲಭ್ಯ ಸಿಕ್ಕಿದರೆ ಮೇಲು ಖಚರ್ಿಗೆ ಹಣ ಕೊಡಬಹುದು ಎಂಬ ಮಾತು ಮನೆಯ ಯಜಮಾನಿಕೆ ನಡೆಸುತ್ತಿದ್ದ ದೊಡ್ಡಣ್ಣನಿಂದ ಬಂದಿತು. ಎಸ್ಎಸ್ಎಲ್ಸಿ ಪಾಸಾದ ಮೇಲೆ ನಮ್ಮೂರು ಸಮೀಪದ ಕೋಣಂದೂರಿನಲ್ಲಿ ಆಗಷ್ಟೆ ಪಿಯು ಕಾಲೇಜು ಆರಂಭವಾಗಿದ್ದು ಅಲ್ಲಿಯೇ ಶಿಕ್ಷಣ ಮುಂದುವರಿಸಲು ಮನಸ್ಸು ಮಾಡುತ್ತಿದ್ದೆನೇನೋ. ಆದರೆ ಉಚಿತ ವಿದ್ಯಾಥರ್ಿನಿಲಯದ ಅನುಕೂಲ ಇದ್ದ ಕಾರಣ ಎಸ್ಎಸ್ಎಲ್ಸಿ ಫಲಿತಾಂಶ ಬರುತ್ತಲೇ ಬೆಂಗಳೂರಿನತ್ತ ಮುಖ ಮಾಡಿದೆ. (ಮುಂದುವರಿಯಲಿದೆ...)
1. ಹೆತ್ತವರ ಬದುಕು ಪ್ರೇರಕ 

ಮಣ್ಣಿನ ಗೋಡೆ. ಸಗಣಿ ಸಾರಿಸಿ ನಯಗೊಳಿಸಿದ ನೆಲ. ಜಗುಲಿ, ಒಳಗಿನ ಅಡುಗೆ ಮನೆ, ಹಿಂಭಾಗದ ಹಿತ್ತಲು ಬಾಗಿಲ ಹಿಂದಿನ ಚಡಿ ಒಂದು ಮಟ್ಟದಲ್ಲಿದ್ದರೆ, ಜಗುಲಿಯಿಂದ ಮೊಣಕಾಲು ಅಂತರ ಕೆಳಗೆ ಕಡಿಮಾಡು, ಪಕ್ಕಕ್ಕೆ ಹೊರಳಿ ವಿಸ್ತರಿಸಿದ ಚೌಕಿಯ ಭಾಗ ಇನ್ನೊಂದು ಮಟ್ಟದಲ್ಲಿ. ಜಗುಲಿಯಿಂದ ಒಳಮನೆಗೆ ಒಂದು ಬಾಗಿಲು, ಹಿಂದೆ ಒಂದು ಬಾಗಿಲು. ಇಷ್ಟೇ ಭದ್ರತೆ. ಮರದ ಪೆಟ್ಟಿಗೆಗೆ ಒಳಮನೆಯಲ್ಲಿ ಜಾಗ. ಐದು ಅಡಿ ಉದ್ದ ಒಂದು ಅಡಿ ಅಗಲದ ಮರದ ಪೆಟ್ಟಿಗೆಯಲ್ಲಿ ಚಿಕ್ಕದೊಂದು ಸಂದೂಕ. ಅದು ಮನೆಯ ತಿಜೋರಿ. ಮರದ ಪೆಟ್ಟಿಗೆಯ ಬಾಗಿಲು ತೆಗೆಯುವಾಗ ದೊಡ್ಡದಾಗಿ ಕೀರಲು ಸದ್ದು ಬರುತ್ತಿದ್ದ ಕಾರಣ ಸಪ್ಪಳ ಮಾಡದೆ ಮನೆಯ ತಿಜೋರಿಯನ್ನು ಯಾರಿಗೂ ಮುಟ್ಟಲು ಸಾಧ್ಯವಿರುತ್ತಿರಲಿಲ್ಲ. ಜಗುಲಿಗೂ, ಕೆಳಕ್ಕೆ ವಿಸ್ತರಿಸಿದ್ದ ಚೌಕಿ ಮನೆಗೂ ಮೂರು ಕಡೆ ಮಣ್ಣಿನ ಗೋಡೆಯ ಆಸರೆ. ಜಗುಲಿ ಕೆಳಗಿನ ಪಾತಾಳಂಕಣವೂ ಚೌಕಿಯ ವಿಸ್ತರಿಸಿದ ಭಾಗವೂ ಅಂಗಳದ ಕಡೆಗೆ ತೆರೆದುಕೊಂಡಿದ್ದವು. ಜಗುಲಿ, ಕೆಳಗಿನ ಪಾತಾಳಂಕಣ, ಚೌಕಿಯಲ್ಲಿ ಮಲಗಿದವರಿಗೆ ತಲೆಯ ಮೇಲೆ ಸೂರು ಇದೆಯೆಂಬಷ್ಟೇ ಸಮಾಧಾನ. ಅಂಗಳಕ್ಕೂ ಚೌಕಿಗೂ ಮಧ್ಯೆ ಯಾವ ಅಡೆತಡೆಯೂ ಇರಲಿಲ್ಲ. ಅಡುಗೆ ಮನೆಗೆ ಹೊಂದಿಕೊಂಡ ಒಳಮನೆಯಲ್ಲಿ ಮಲಗಿದವರಿಗೆ ಮಾತ್ರ ಸುತ್ತ ಗೋಡೆಯ ರಕ್ಷಣೆ ಇರುವ ಭಾವ. ಸೂರು ಹುಲ್ಲಿನದು.

ಒಂದನೆಯ ತರಗತಿಗೆ ಸೇರುವಷ್ಟು ದೊಡ್ಡವನಾಗಿದ್ದಾಗ ನನಗೆ ನೆನಪಿಗೆ ಬರುವ ನಮ್ಮ ಮನೆಯ ಚಿತ್ರ ಇದು. ಆರು ಗಂಡು ಎರಡು ಹೆಣ್ಣು ಮಕ್ಕಳ ದೊಡ್ಡ ಸಂಸಾರ ಅಪ್ಪನದು. ನಾನು ಐದನೆಯ ಮಗ. ನನಗೆ ನಾಲ್ಕು ಜನ ಅಣ್ಣಂದಿರು, ಇಬ್ಬರು ಅಕ್ಕಂದಿರು. ಒಬ್ಬ ತಮ್ಮ. ಐದು ತುಂಬಿ ಆರು ನಡೆಯುತ್ತಿರುವಾಗ ಮನೆಯಿಂದ ಮೂರು ಕಿಲೋಮೀಟರ್ ದೂರದ ಶಾಲೆಗೆ ಒಂದನೆಯ ತರಗತಿಗೆ ಸೇರಿಕೊಂಡಾಗ ಅಣ್ಣಂದಿರಿಬ್ಬರ ಮದುವೆಯಾಗಿತ್ತು. ದೊಡ್ಡ ಅಕ್ಕನೂ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು. ಆ ದಿನಗಳಲ್ಲಿ ಇಬ್ಬರು ಅತ್ತಿಗೆಯರು ಅವ್ವನೊಟ್ಟಿಗೆ ಅಡುಗೆ ಮತ್ತು ಗದ್ದೆಯ ಕೆಲಸಗಳಲ್ಲಿ ಕೈ ಜೋಡಿಸುತ್ತಿದ್ದರು. ಮದುವೆಯಾದ ಇಬ್ಬರು ಅಣ್ಣಂದಿರ ಒತ್ತಿನ ಇನ್ನೊಬ್ಬ ಅಣ್ಣ ಶಾಲೆಗೆ ಶರಣು ಹೊಡೆದು ರೈತಾಪಿ ಕೆಲಸಕ್ಕೆ ಮರಳಿದ್ದ. ದೊಡ್ಡ ಅಣ್ಣ ನಾನು ಹುಟ್ಟಿದ ವರ್ಷ (1953) ಮೆಟ್ರಿಕ್ನಲ್ಲಿ ಪಾಸಾಗಿದ್ದು ಮುಂದೆ ಓದುವ ಅನುಕೂಲ ಇಲ್ಲದ ಕಾರಣ ಮನೆಗೆ ವಾಪಸಾಗಿ ಅಪ್ಪನ ಜತೆ ಬೇಸಾಯದ ಕೆಲಸದಲ್ಲಿ ಕೈ ಜೋಡಿಸಿದ್ದ. ಎರಡನೇ ಅಣ್ಣ ಮಿಡ್ಲ್ ಸ್ಕೂಲಿಗೆ ಶರಣು ಹೊಡೆದಿದ್ದ. ಶಾಲೆಯ ಮೇಷ್ಟರುಗಳು ಹಳ್ಳಿ ಹುಡುಗರು ಮನೆಪಾಠ ಮಾಡಿಕೊಂಡು ಬರುತ್ತಿಲ್ಲ ಎಂದು ವಿಧಿಸುತ್ತಿದ್ದ ಉಗ್ರ ಶಿಕ್ಷೆಗಳಿಗೆ ಹೆದರಿ ಅವನು ಶಾಲೆಗೆ ತಪ್ಪಿಸಿಕೊಂಡಿದ್ದನಂತೆ. ಶಾಲೆಯಲ್ಲಿ ಗಣಿತ, ಇಂಗ್ಲಿಷಿನ ಕಠಿಣ ಅಭ್ಯಾಸಕ್ಕಿಂತ ಮನೆ ಬದಿಯಲ್ಲಿ ಸ್ವಂತ ಗದ್ದೆ ತೋಟಗಳಲ್ಲಿ ಮೈ ಬಗ್ಗಿಸಿ ಕೆಲಸ ಮಾಡುವುದೇ ಸುಲಭವೆಂದು ಆವನು ಆಗ ಪರಿಗಣಿಸಿದ್ದನೆಂದು ಮುಂದೆ ಎಷ್ಟೋ ವರ್ಷಗಳ ನಂತರ ನನಗೆ ಗೊತ್ತಾಗಿತ್ತು. ನನ್ನ ಎರಡನೇ ಅಕ್ಕನ ಒತ್ತಿನ ಇನ್ನೊಬ್ಬ ಅಣ್ಣ ಹಳ್ಳಿ ಶಾಲೆಯಿಂದ ತೇರ್ಗಡೆಯಾಗಿ ಮಾಧ್ಯಮಿಕ ಶಾಲೆಯಲ್ಲಿ ಓದು ಮುಂದುವರಿಸಲು ಆಗ ರಿಪ್ಪನ್ಪೇಟೆಯ ಸಮೀಪ ಇದ್ದ ಸೋದರ ಮಾವನ ಮನೆಯಲ್ಲಿದ್ದ. ಸಾಗರ- ತೀರ್ಥಹಳ್ಳಿ ಸಕರ್ಾರಿ ರಸ್ತೆಯಲ್ಲಿ ರಿಪ್ಪನ್ಪೇಟೆ - ಹೊಂಬುಚದ ಮಧ್ಯೆ ಇರುವ ಹೆದ್ದಾರಿಪುರ ಎಂಬ ಊರಿಗೆ ಒಂದೂವರೆ ಕಿಲೋಮೀಟರ್ ಒಳಗಡೆ ಇರುವ ನಮ್ಮೂರು ಕೊಡಸೆಗೆ ಆಗ ಹತ್ತಿರದ ಶಾಲೆ ಎಂದರೆ ಅಲ್ಲಿಂದ ಮೂರು ಕಿಲೋಮೀಟರ್ ದೂರದ ಕಣಬಂದೂರು ಶಾಲೆ. ಅದಕ್ಕೆ ಕೋಡಿಕೊಪ್ಪ ಎಂಬ ಇನ್ನೊಂದು ಹೆಸರೂ ಇತ್ತು. ಅಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಕಲಿಸುವ ವ್ಯವಸ್ಥೆ ಇತ್ತು. ನಾನು ಒಂದನೆಯ ತರಗತಿಗೆ ಸೇರಿದ್ದಾಗ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು ಗಿರಿಯಪ್ಪ ಎಂಬುವರು. ಸಣ್ಣದೊಂದು ಚುಳುಕಿನ ಬೆತ್ತವನ್ನು ಮೇಜಿನ ಮೇಲೆ ಸದಾ ಇಟ್ಟುಕೊಂಡಿರುತ್ತಿದ್ದ ಬಿಳಿ ಟೋಪಿಯ ಗಿರಿಯಪ್ಪ ಮೇಷ್ಟರು ಬೆತ್ತವನ್ನು ಝಳಪಿಸಿದ ಮಾತ್ರದಿಂದಲೇ ಅಳ್ಳೆದೆಯ ಹುಡುಗ- ಹುಡುಗಿಯರಲ್ಲಿ ತುತರ್ು ಮೂತ್ರವಿಸರ್ಜನೆಗೆ ಕಾರಣರಾಗುತ್ತಿದ್ದರೆಂಬ ಖ್ಯಾತಿ ಗಳಿಸಿದ್ದರು.

ಮಲೆನಾಡಿನ ಹೆಚ್ಚಿನ ಹಳ್ಳಿಗಳಂತೆ ನಮ್ಮದು ಒಂಟಿ ಮನೆಯ ಊರು. ಆದರೆ ನಾನು ಹುಟ್ಟಿದ ವರ್ಷ ನಮ್ಮ ಮೂಲಮನೆ ಹಿಸ್ಸೆಯಾಗಿತ್ತು. ಚಿಕ್ಕಪ್ಪ, ದೊಡ್ಡಪ್ಪಂದಿರ ಮಕ್ಕಳೆಲ್ಲ ತಮಗೆ ಬಂದ ಗದ್ದೆ ಹೊಲಗಳ ಬದಿ ಮನೆ ಮಾಡಿಕೊಂಡಿದ್ದರು. ಮೂಲಮನೆಯನ್ನು ತ್ಯಜಿಸಿ ಬಂದಿದ್ದ ಅಪ್ಪ ನಮ್ಮ ಪಾಲಿಗೆ ಬಂದಿದ್ದ ಗದ್ದೆ ತೋಟದ ಸನಿಹದಲ್ಲಿ ಆಗ ದುರ್ಗಮವಾಗಿದ್ದ ಕಾಡನ್ನು ಕಡಿದು ಹುಲ್ಲುಮನೆ ಹಾಕಿಕೊಂಡಿದ್ದ. ಒಟ್ಟು ಕುಟುಂಬದ ಯಜಮಾನಿಕೆ ನಡೆಸುತ್ತಿದ್ದ ಅಪ್ಪ ಆ ಧೈರ್ಯದಿಂದಲೇ ಮಕ್ಕಳಿಗೆ ಶಿಕ್ಷಣ ಕೊಡಿಸಲು ವ್ಯವಸ್ಥೆ ಮಾಡಿದ್ದ. ಮನೆ ಪಾಲಾದ ಮೇಲೆ ಹೆಚ್ಚಿನ ಆಥರ್ಿಕ ಹೊಣೆಯನ್ನು ಹೊರಲು ಅಸಮರ್ಥನಾದ ಕಾರಣ ದೊಡ್ಡಣ್ಣ ಮುಂದೆ ಓದಲು ಆಗಿರಲಿಲ್ಲ. ಆದರೆ ಎಲ್ಲ ಮಕ್ಕಳೂ ತಾವು ತೇರ್ಗಡೆ ಆಗುತ್ತಿರುವವರೆಗೆ ಓದುತ್ತಲೇ ಇರಬೇಕು, ಓದಿ ಏನಾದರೂ ನೌಕರಿ ಹಿಡಿಯಬೇಕು ಎಂಬುದು ಅಪ್ಪನ ಪ್ರಬಲ ಇಚ್ಛೆಯಾಗಿತ್ತು. ಆದ್ದರಿಂದಲೇ ನಮ್ಮ ಶಾಲಾ ಹಾಜರಾತಿಯ ಮೇಲೆ ಅವನ ಕಣ್ಣು ಇರುತ್ತಿತ್ತು. ಮೇಷ್ಟರ ಭಯದಿಂದ ಶಾಲೆ ತಪ್ಪಿಸಿಕೊಂಡರೆ ಗಿರಿಯಪ್ಪ ಮೇಷ್ಟರ ಬೆತ್ತದ ರುಚಿಯೇ ವಾಸಿ ಎನಿಸುವಷ್ಟು ಉಗ್ರವಾಗಿರುತ್ತಿತ್ತು ಅಪ್ಪನ ಕೋಪ ಮತ್ತು ಕೈ ಪೆಟ್ಟು.

ಊಟಕ್ಕೆ ಬತ್ತ ಆಗುವಷ್ಟು ಗದ್ದೆ ಮತ್ತು ಮೇಲು ಖಚರ್ಿಗೆ ಒದಗುವಷ್ಟು ಅಡಿಕೆ ತೋಟವಿದ್ದ ಕುಟುಂಬ ನಮ್ಮದು. ಬೆಳೆಯುತ್ತಿದ್ದ ಸಂಸಾರದ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಂಪಾದನೆಗೆ ಅಪ್ಪ ಒಂದಲ್ಲ ಒಂದು ಪ್ರಯತ್ನ ನಡೆಸುತ್ತಲೇ ಇದ್ದ. ಗದ್ದೆ- ತೋಟದ ಒತ್ತುವರಿ ಜಾಗದ ವಿಸ್ತರಣೆಯೇ ಆಗ ಉಳಿದಿದ್ದ ಮಾರ್ಗ. ದೊಡ್ಡ ಕುಟುಂಬದ ಯಜಮಾನಿಕೆ ನಡೆಸಿದ್ದ ಅಪ್ಪನಿಗೆ ಎರಡನೇ ತರಗತಿಯ ವರೆಗೆ ಮಾತ್ರ ಇದ್ದ ಓದು. 1905ರಲ್ಲಿ ಜನಿಸಿದ್ದ ಅಪ್ಪ ಅಷ್ಟೇ ಓದಿನ ಬೆಂಬಲದಿಂದ ಮುಂದೆ ಶಿವಮೊಗ್ಗದಲ್ಲಿ ಅಡಿಕೆ ಮಂಡಿಗಳಲ್ಲಿ ಮನೆಯ ಯಾವತ್ತೂ ವ್ಯವಹಾರಗಳನ್ನು ನಡೆಸಬಲ್ಲವನಾಗಿದ್ದ. ತನಗಿದ್ದ ಅಲ್ಪ ಅಕ್ಷರಾಭ್ಯಾಸದ ಬಲದಿಂದ ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಸಿಗುತ್ತಿದ್ದ ಪುಸ್ತಕಗಳನ್ನು ತಂದು ನಿಧಾನವಾಗಿ ಓದುತ್ತಿದ್ದ. ಹಿತೋಪದೇಶದ ಕಥೆಗಳು, ರಾಮಾಯಣದ ಕಥೆಗಳು ಅಪ್ಪನ ಆಸಕ್ತಿಯಿಂದ ನಮಗೆ ಪ್ರಾಥಮಿಕ ಶಾಲೆಯ ಕಾಲದಲ್ಲಿಯೇ ಕಿವಿಗೆ ಬೀಳುತ್ತಿದ್ದವು.
ನಮ್ಮ ಗದ್ದೆ ತೋಟದಲ್ಲಿ ಮನೆಯವರೆಲ್ಲರೂ ದುಡಿಯಲೇ ಬೇಕಿತ್ತು. ನಮಗೆ ಶಾಲೆಯ ಅವಧಿ ಬಿಟ್ಟರೆ ಮನೆಯ ಎಲ್ಲ ಕೆಲಸಗಳಲ್ಲಿಯೂ ಕೈ ಹಾಕುವ ಅನಿವಾರ್ಯತೆ ಇತ್ತು. ಅಡಿಕೆ ಕೊಯ್ಲು ಮನೆಯವರೇ ಮಾಡುವ ಕೆಲಸ. ಅದರಲ್ಲಿಯೂ ಅಡಿಕೆಯನ್ನು ಸುಲಿದು, ಬೇಯಿಸಿ ಹದವಾದ ಬಿಸಿಲಲ್ಲಿ ಒಣಗಿಸಿ ಆರಿಸಿ ವ್ಯಾಪಾರಕ್ಕೆ ಅಣಿಗೊಳಿಸುವ ಕುಶಲ ಕೆಲಸವೆಲ್ಲ ಅಪ್ಪನ ವಿಶೇಷತೆ. ಅಡಿಕೆ ಸುಲಿತ ರಾತ್ರಿ ಬಹುಹೊತ್ತಿನವರೆಗೆ ಸಾಗುತ್ತಿದ್ದ ನೀರಸ ಕಾರ್ಯ. ಅಪ್ಪನ ಜೊತೆ ಅಣ್ಣಂದಿರು ಮೆಟ್ಟುಗತ್ತಿ ಎದುರಿಗೆ ಇಟ್ಟುಕೊಂಡು ಸುಲಿಯುತ್ತಿದ್ದಾಗ ಹೊರಬರುತ್ತಿದ್ದ ಕರಕರ ಶಬ್ದ ಈಗಲೂ ಆಪ್ಯಾಯಮಾನವಾಗಿ ಅನುರಣಿಸುವಂತಿದೆ. ಅಡಿಕೆ ಸುಲಿತದ ಏಕತಾನತೆಯನ್ನು ನಿವಾರಿಸಲು ಶಾಲೆಗೆ ಹೋಗುತ್ತಿದ್ದ ಹಾಗೂ ಕನ್ನಡವನ್ನು ಓದುವಷ್ಟು ಬೆಳೆದಿದ್ದ ನನಗೆ ಅವರಿಗಾಗಿ ಏನನ್ನಾದರೂ ಓದಿ ಹೇಳುವ ಕೆಲಸವನ್ನು ಅಪ್ಪ ಕೊಡುತ್ತಿದ್ದ. `ಕಾನೂರು ಸುಬ್ಬಮ್ಮ ಹೆಗ್ಗಡಿತಿ' ಕಾದಂಬರಿ ಅಡಿಕೆ ಸುಲಿತದ ಸಂದರ್ಭದಲ್ಲಿ ಓದಿ ಹೇಳಿದ್ದು ನನಗೆ ಬಾಲ್ಯದಲ್ಲಿಯೇ ಸಿಕ್ಕಿದ ಸಾಹಿತ್ಯದ ಸಂಸ್ಕಾರ. `ಹೆಗ್ಗಡಿತಿ' ಕಾದಂಬರಿ ಆಗ ಬಿಡಿ ಸಂಪುಟಗಳಾಗಿ ಪ್ರಕಟವಾಗಿತ್ತು. ಚೌಕಿಯ ಮನೆಯಲ್ಲಿ ಚಿಮಿಣಿ ದೀಪದ ಮಂದ ಬೆಳಕಿನಲ್ಲಿ ಅಪ್ಪ, ಅಣ್ಣಂದಿರು, ಅಡುಗೆ ಮನೆಯ ಕೆಲಸಗಳನ್ನು ಮುಗಿಸಿ ಜತೆ ಸೇರುತ್ತಿದ್ದ ಅತ್ತಿಗೆಯರು ಸುತ್ತ ಕುಳಿತಿದ್ದಾಗ ನಾನು ಇಲ್ಲವೇ ಎರಡನೇ ಅಕ್ಕ `ಕಾನೂರು ಹೆಗ್ಗಡಿತಿ'ಯ ಪುಟಗಳನ್ನು ಓದುತ್ತಿದ್ದೆವು. ಹೆಚ್ಚುಕಡಿಮೆ ನಮ್ಮೂರಿನ ಪರಿಸರದ ಕತೆಯನ್ನೇ ಕೇಳುತ್ತಿದ್ದ ಅವರಿಗೆ ಮನೆಯ ಸುತ್ತಮುತ್ತಲ ಕಾಡು, ಕೆರೆ, ಚೌಡಿ ಹರಕೆ, ಕಳ್ಳಿನ ಸೇವನೆ, ಶಿಕಾರಿ, ಸುಬ್ಬಮ್ಮನ ಬಾಯಲ್ಲಿ ಬರುತ್ತಿದ್ದ ದೇಸೀ ಬೈಗುಳದ ಮಾತುಗಳೆಲ್ಲ ಇಷ್ಟವಾದಂತಿದ್ದವು. ನಮ್ಮ ಸುತ್ತಮುತ್ತಲ ಸಣ್ಣ ಸಣ್ಣ ಕ್ಷುದ್ರ ಸಂಗತಿಗಳೆಲ್ಲ ಸಾಹಿತ್ಯಾಭಿವ್ಯಕ್ತಿಯ ವಸ್ತುಗಳಾಗಿ ಪರಿಣಮಿಸುತ್ತಿದ್ದ ಕಾರಣವೋ ಅವರು ಓದನ್ನು ಅಲ್ಲಲ್ಲಿ ನಿಲ್ಲಿಸುವಂತೆ ಹೇಳಿ ಆ ಘಟನೆಗಳಿಗೆ ತಮ್ಮದೇ ವ್ಯಾಖ್ಯಾನ ನೀಡುತ್ತಿದ್ದರು. ಶಿಕಾರಿಯ ಪ್ರಸ್ತಾಪ ಬಂದಾಗ ತಮ್ಮ ಅನುಭವಗಳನ್ನು ತಾಳೆ ನೋಡುತ್ತಿದ್ದರು. ಅಡಿಕೆ ಸುಲಿತದ ಸಂದರ್ಭದಲ್ಲಿ ನಮಗೆ ಹೀಗೆ ಓದಿಗೆ ಹಚ್ಚುತ್ತಿದ್ದ ಅಪ್ಪನ ಉದ್ದೇಶ ತಡರಾತ್ರಿಯ ನಿದ್ದೆಗಣ್ಣಿನಿಂದ ಅಡಿಕೆ ಸುಲಿಯುತ್ತಿರುವವರನ್ನು ಎಚ್ಚರದಿಂದ ಇರಿಸುವುದಾಗಿತ್ತು. ನಮ್ಮ ಓದಿನ ಸಾಮಥ್ರ್ಯವನ್ನು ಪರಿಶೀಲಿಸುವುದೂ ಆಗಿತ್ತು. ಒತ್ತಕ್ಷರ, ಸಂಯುಕ್ತಾಕ್ಷರದ ಪದಗಳಲ್ಲಿ ನಾಲಿಗೆ ತಡವರಿಸಿದಾಗ ಅಪ್ಪ ಅಡಿಕೆ ಸಿಪ್ಪೆಯಿಂದಲೇ ಗುರಿಯಿಟ್ಟು ತಲೆಗೆ ಹೊಡೆದು ನಮ್ಮನ್ನು ಸರಿದಾರಿಗೆ ತರುತ್ತಿದ್ದ.  

ಅಡಿಕೆ ಸುಲಿತ ದಸರೆಯ ನಂತರ ಬರುತ್ತಿತ್ತು. ಆದರೆ ಅದಕ್ಕೂ ಮೊದಲಿನ ಶ್ರಾವಣ ಮಾಸ ನಮ್ಮ ಬಾಲ್ಯದ ಓದಿಗೆ ಮೊದಲ ವೇದಿಕೆ ಒದಗಿಸುತ್ತಿತ್ತು. ಅಪ್ಪನದು ಶನಿವಾರದ ವ್ರತ. ಅಂದು ಒಪ್ಪೊತ್ತಿನ ಊಟ. ಬೆಳಿಗ್ಗೆಯಿಂದ ಹಸಿದಿದ್ದು ಮಧ್ಯಾಹ್ನದ ವೇಳೆಗೆ ಮಿಂದು ಶುಚಿಯಾಗಿ ದೇವರ ಪೂಜೆ ಮಾಡಿ, ಮಡಿಯಲ್ಲಿ ಸಿದ್ಧಪಡಿಸಿದ ಊಟವನ್ನು ಅಗ್ನಿಗೆ ನೈವೇದ್ಯ ಮಾಡಿದ ನಂತರವೇ ಊಟ ಮಾಡುವುದು ಶನಿವಾರ ವ್ರತದ ವೈಶಿಷ್ಟ್ಯ. ಶನಿವಾರ ಅಪ್ಪನ ವ್ರತದ ದಿನವಾದ್ದರಿಂದ ಅಂದು ನಮ್ಮ ಮನೆಯಲ್ಲಿ ವಿಶೇಷ ಅಡುಗೆ ಇಲ್ಲ. ವಿಶೇಷವೆಂದರೆ ಮೀನು ಮಾಂಸದ ಖಾದ್ಯಗಳಿಲ್ಲ. ಶನಿವಾರ ಮನೆಗೆ ಅಪರೂಪದ ಅತಿಥಿಗಳು ಬಂದರೂ ಅವರಿಗೆ ಕೋಳಿ ಔತಣದ ಆತಿಥ್ಯ ಇರುತ್ತಿರಲಿಲ್ಲ.

ಶನಿವಾರದ ವ್ರತ ಹಿಡಿದಿದ್ದ ಕಾರಣ ಅಪ್ಪ ನಿತ್ಯವೂ ನಾಮ ಹಾಕಿಕೊಳ್ಳದೆ ಏನನ್ನೂ ಸೇವಿಸುತ್ತಿರಲಿಲ್ಲ. ಬೆಳಗಿನ ತಿಂಡಿ ಇಲ್ಲವೇ ಊಟಕ್ಕೆ ಅಡಿಗೆ ಮನೆಗೆ ಹೋಗುವ ಮೊದಲು ಅಂಗಳದಲ್ಲಿದ್ದ ತುಳಸಿ ಗಿಡದಿಂದ ಕುಡಿಯೊಂದನ್ನು ತಂದು, ಹುಣಸೇಹಣ್ಣಿನಿಂದ ಚೆನ್ನಾಗಿ ತಿಕ್ಕಿ ಥಳಥಳ ಹೊಳೆಯುವಂತೆ ಪರಿಶುದ್ಧಗೊಳಿಸಿದ ತೀರ್ಥದ ಗಿಂಡಿಯಲ್ಲಿ ಹಾಕಿಕೊಂಡು ಹಣೆಗೆ ನಾಮ ಹಚ್ಚಿಕೊಳ್ಳುವುದು ಪದ್ಧತಿ. ಅದಕ್ಕೊಂದು ಮರದ ನಾಮದ ಪೆಟ್ಟಿಗೆ. ಒಳಜಗುಲಿಯ ನಾಗಂದಿಗೆ ಮೇಲೆ ಇರಿಸುತ್ತಿದ್ದ ನಾಮದ ಪೆಟ್ಟಿಗೆಯನ್ನು ಎತ್ತಿಕೊಂಡು ತಮಗೆ ಬಾಲ್ಯದಿಂದ ಪಾಠವಾಗಿದ್ದ ದೇವರ ನಾಮಗಳನ್ನು ಗುನುಗುತ್ತಾ ನಾಮ ಹಚ್ಚಿಕೊಳ್ಳಲು ಕುಳಿತುಕೊಳ್ಳುತ್ತಿದ್ದ. ಕೆಂಪು ನಾಮವನ್ನು ಎಡ ಅಂಗೈಮೇಲೆ ಉದುರಿಸಿ ತೀರ್ಥದ ಬಟ್ಟಲಿನಿಂದ ಸ್ವಲ್ಪ ನೀರನ್ನು ಹಾಕಿ ನಯವಾಗಿ ಕಲೆಸಿ ಅದಕ್ಕೆಂದೇ ಇರಿಸಿದ್ದ ಬಿದಿರಿನ ನಾಮದ ಕಡ್ಡಿಯನ್ನು ಬಲಗೈಯಲ್ಲಿ ಹಿಡಿದು ನಾಮದಲ್ಲಿ ಅದ್ದಿ ಭ್ರೂಮಧ್ಯದಿಂದ ನೆತ್ತಿಯ ಕಡೆಗೆ ಒಂದು ಗೆರೆಯನ್ನು ಎಳೆದುಕೊಂಡರೆ ಹಣೆಯ ಅಲಂಕಾರ ಮುಗಿದಂತೆ. ಉಳಿದ ನಾಮವನ್ನು ಎದೆಯ ಎರಡೂ ಭಾಗಕ್ಕೆ ಮೂರು ಮೂರು ಗೆರೆಯಂತೆ ಎಳೆದುಕೊಳ್ಳುತ್ತಿದ್ದ. ಉದರ ಭಾಗದಲ್ಲಿ ಹೊಕ್ಕುಳಿನ ಆಜುಬಾಜು ಇನ್ನೂ ಮೂರು ಗೆರೆಗಳು. ಅಂಗೈಯಲ್ಲಿ ಉಳಿದಿರುವ ನಾಮದ ಉಳಿಕೆಯನ್ನು ತೀರ್ಥದ ಗಿಂಡಿಯಿಂದ ಇನ್ನಷ್ಟು ನೀರನ್ನು ಚಿಮುಕಿಸಿ ಎರಡೂ ಅಂಗೈಗಳಲ್ಲಿ ಲೇಪಿಸಿ ಎರಡೂ ಭುಜಗಳಿಗೆ ಒತ್ತಿ ನಾಮ ಲೇಪನವನ್ನು ಪರಿಸಮಾಪ್ತಿಗೊಳಿಸುತ್ತಿದ್ದ. ತುಳಸಿ ಕುಡಿಯನ್ನು ಅಂಗೈಯಲ್ಲಿ ಇಟ್ಟು ಅದಕ್ಕೆ ಗಿಂಡಿಯಿಂದ ಸ್ವಲ್ಪ ನೀರನ್ನು ಹಾಕಿ ಅದನ್ನು ತೀರ್ಥದಂತೆ ಕುಡಿಯುತ್ತಿದ್ದ. ತುಳಸಿಯ ಕುಡಿಯನ್ನು ಪರಮ ಶ್ರದ್ಧೆಯಿಂದ ಬಲ ಕಿವಿಗೆ ಸಿಕ್ಕಿಸಿಕೊಳ್ಳುತ್ತಿದ್ದ.

ಬೇಸಾಯದ ಕೆಲಸ ಇಲ್ಲದ ದಿನಗಳಲ್ಲಿ ಬೆಳಗಿನ ಹೊತ್ತು ಊಟ ಮಾಡುವಾಗ ನಾಮ ಹಚ್ಚಿಕೊಳ್ಳುವ ನೇಮ ಇರಿಸಿಕೊಂಡಿದ್ದ ಕಾರಣ ಈ ವಿಧಿಗಳೆಲ್ಲ ಯಾಂತ್ರಿಕವಾಗಿ ನಡೆಯುತ್ತಿದ್ದವು. ಬಾಯಲ್ಲಿ `ರಾಮಚಂದ್ರ, ವೆಂಕಟೇಶ, ಮಂಜುನಾಥ.. ಅಖಿಲಾಂಡಕೋಟಿ.. ಬ್ರಹ್ಮಾಂಡ ನಾಯಕ..' ಇತ್ಯಾದಿ ನೆನಪಿಗೆ ಬಂದ ಸ್ತುತಿ ಪದ್ಯಗಳು. ನಾಮ ಹಚ್ಚಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮರಿಗಳನ್ನು ಕಟ್ಟಿಕೊಂಡು ಜಗುಲಿ ಹತ್ತಿ ಬಂದು ಕ್ಲಕ್ ಕ್ಲಕ್ ಸದ್ದಿನೊಂದಿಗೆ ಕಾಳು ಅರಸುತ್ತಿದ್ದ ಹೇಂಟೆಯನ್ನು ವಿಶಿಷ್ಟ ಸ್ವರ ಎಬ್ಬಿಸಿ ಓಡಿಸುವುದಕ್ಕೆ ಅವನಿಗೆ ಅಡ್ಡಿಯಾಗುತ್ತಿರಲಿಲ್ಲ. ಕೊಟ್ಟಿಗೆಯಿಂದ ಹೊರಬಿದ್ದ ಹಸುಗಳು ಮನೆ ಅಂಗಳಕ್ಕೆ ನುಗ್ಗಿದರೂ ಅವನ್ನು ಕೂಗಿಯೇ ಓಡಿಸುವುದಕ್ಕೂ ನಾಮ ಹಚ್ಚಿಕೊಳ್ಳುವಾಗಿನ ಸಂದರ್ಭ ಅಡ್ಡಿ ಬರುತ್ತಿರಲಿಲ್ಲ.

ಶ್ರಾವಣ ಮಾಸದಲ್ಲಿ ರಾಮಾಯಣ ಪಾರಾಯಣ ನಮ್ಮ ಬಾಲ್ಯದ ಓದಿನ ಕಾಲದಲ್ಲಿ ಜಾರಿಯಲ್ಲಿತ್ತು. ಅಪ್ಪ ತನ್ನ ತಿರುಗಾಟದ ಸಂದರ್ಭದಲ್ಲಿ ಕೊಂಡು ತಂದಿದ್ದ ಮಹಾಭಾರತ, ಸಚಿತ್ರ ರಾಮಾಯಣ ಕೃತಿಗಳು ಜಗುಲಿಯ ಅಟ್ಟಕ್ಕೆ ಬಟ್ಟೆಯೊಂದರ ರಕ್ಷಣೆಯಲ್ಲಿ ನೇತಾಡುತ್ತಿದ್ದವು. ಅವನ್ನು ಶ್ರಾವಣ ಮಾಸದ ಕಾಲದಲ್ಲಿ ಹೊರಕ್ಕೆ ತೆಗೆದು ದೂಳು ಹೊಡೆದು ಓದಿಗೆ ಅಣಿಗೊಳಿಸುವುದು ನಮ್ಮ ಕೆಲಸವಾಗಿತ್ತು. ಶ್ರಾವಣಮಾಸದ ಆರಂಭದಿಂದ ಅದು ಮುಗಿಯುವವರೆಗೆ ಪ್ರತಿ ರಾತ್ರಿ ಒಂದು ಒಂದೂವರೆ ಗಂಟೆ ರಾಮಾಯಣವನ್ನು ಓದಲಾಗುತ್ತಿತ್ತು. ಶಾಲೆ ಬಿಟ್ಟು ಮನೆ ಕೆಲಸಕ್ಕೆ ಬಂದಿದ್ದ ಮೂರನೇ ಅಣ್ಣ ಅದನ್ನು ಶ್ರದ್ಧಾಭಕ್ತಿಯಿಂದ ಆರಂಭಿಸುತ್ತಿದ್ದ. ಜಗುಲಿಯಲ್ಲಿ ಒಂದು ಕಾಲುಮಣೆಯನ್ನು ಇರಿಸಿ ಅದರ ಮೇಲೆ ಹಣತೆ ಇಟ್ಟು ಸೀತಾ, ರಾಮ, ಲಕ್ಷ್ಮಣ, ಹನುಮಂತ ಇರುವ ಫೋಟೋ ಇಟ್ಟುಕೊಂಡು ಹಣತೆಯ ಬೆಳಕಲ್ಲಿ ರಾಮಾಯಣ ಓದುವುದು ಪದ್ಧತಿ. ಅಣ್ಣ ಸ್ವಲ್ಪ ಹೊತ್ತು ಓದಿ ನನಗೆ ಬಿಟ್ಟು ಕೊಡುತ್ತಿದ್ದ. ಅಷ್ಟರವೇಳೆಗೆ ಗದ್ದೆ ಕೆಲಸ ಮುಗಿಸಿ ಬಚ್ಚಲಿನಲ್ಲಿ ಸ್ನಾನ ಮುಗಿಸಿ ಬಂದಿರುತ್ತಿದ್ದ ಅಣ್ಣಂದಿರು ಅಪ್ಪನ ಜೊತೆ ಜಗುಲಿಯಲ್ಲಿ ಕುಳಿತು ನನ್ನ ರಾಮಾಯಣದ ಓದನ್ನು ಗಮನಿಸುತ್ತಿದ್ದರು. ಕಥೆಯ ಮೇಲೆ ಅವರ ಗಮನ ಇರುತ್ತಿದ್ದರಿಂದ ಓದಿನ ತಪ್ಪನ್ನು ಅಲ್ಲಿಯೇ ತಿದ್ದಲು ಹೋಗುತ್ತಿರಲಿಲ್ಲ. ಆದ್ದರಿಂದ ರಾಮಾಯಣದ ಪಾರಾಯಣದ ಸಂದರ್ಭದಲ್ಲಿ ಅಡಿಕೆ ಸಿಪ್ಪೆಯ ಏಟಿನಿಂದ ತಪ್ಪನ್ನು ತಿದ್ದಿಕೊಳ್ಳ್ಳುವ ಅವಕಾಶ ನನಗೆ ಬರುತ್ತಿರಲಿಲ್ಲ.

ಮಾಧ್ಯಮಿಕ ಶಾಲೆಗೆ ರಿಪ್ಪನ್ಪೇಟೆಗೆ ಹೋಗುವವರೆಗಿನ ನಾಲ್ಕು ವರ್ಷ ಅಪ್ಪ ಅಣ್ಣಂದಿರ ನೇರ ಉಸ್ತುವಾರಿಯಲ್ಲಿ ಕನ್ನಡ ಓದನ್ನು ಅಭ್ಯಾಸ ಮಾಡಿದ ನನಗೆ ಮುಂದೆ ಅವರ ಮಾರ್ಗದರ್ಶನ ಇಲ್ಲದೆ ಹೋಯಿತು. ಸೋದರ ಮಾವನ ಮನೆಯಲ್ಲಿದ್ದು ಹೈಸ್ಕೂಲು ಶಿಕ್ಷಣವನ್ನು ಪೂರೈಸಿದ ನನಗೆ ವಾರ, ಎರಡು ವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದ ಕಾರಣ ಅಪ್ಪನ ಶಿಕ್ಷಾ ವಲಯದಿಂದ ದೂರವೇ ಉಳಿದಿದ್ದೆ. ಪ್ರತಿ ವರ್ಷವೂ ಪಾಸಾಗುತ್ತಲೇ ಇದ್ದ ಕಾರಣ ಅಪ್ಪನಿಂದ ಓದಿನ ವಿಷಯದಲ್ಲಿ ಬೈಗುಳವನ್ನಾಗಲೀ ಏಟನ್ನಾಗಲೀ ಪಡೆಯುವ ಅವಕಾಶದಿಂದ ವಂಚಿತನಾಗಿದ್ದೆ. ಆದರೆ, `ಬೈದು ಹೇಳುವವ ಬದುಕಲು ಹೇಳಿದ', `ಒಳ್ಳೆಯವರೊಡನಾಡಿ ಕಳ್ಳನೊಳ್ಳಿದನಕ್ಕು, ಒಳ್ಳೆಯವ ಕಳ್ಳನೊಡನಾಡೆ ಅವ ಶುದ್ಧ ಕಳ್ಳನೇ ಅಕ್ಕು..' ಎಂಬಂಥ ಮಾತುಗಳನ್ನು ಆಯಾ ಸಂದರ್ಭದಲ್ಲಿ ಹೇಳುತ್ತ ನನ್ನಲ್ಲಿ ನೈತಿಕ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಿದ್ದ ಅಪ್ಪ ನನ್ನ ಸ್ವತಂತ್ರ ನಿಧರ್ಾರಗಳನ್ನು ಯಾವತ್ತೂ ನಿರ್ಲಕ್ಷಿಸಲಿಲ್ಲ. ಮುಂದೆ ಶಿಕ್ಷಣದ ನಿಮಿತ್ತ ಉಚಿತ ವಿದ್ಯಾಥರ್ಿನಿಲಯದ ಸೌಲಭ್ಯ ಅರಸಿಕೊಂಡು ನಾನು ಬೆಂಗಳೂರಿಗೆ ಬಂದಾಗ, ನನಗೆ ಇಷ್ಟವೆಂದು ಕನ್ನಡ ಆನಸರ್್, ಎಂ ಎ ಕೋಸರ್ುಗಳಿಗೆ ಸೇರಿಕೊಂಡಾಗ ಅಪ್ಪ ಅವುಗಳ ಬಗ್ಗೆ ಅಭಿಪ್ರಾಯ ಕೊಡುವಂತಿರಲಿಲ್ಲ. `ಏನಾದರೂ ಓದು, ಆದರೆ ಇನ್ನೊಬ್ಬರಿಗೆ ಹೊರೆಯಾಗಬೇಡ. ಓದಿ ನೌಕರಿ ಹಿಡಿದು ನಿನ್ನ ಕಾಲ ಮೇಲೆ ನಿಲ್ಲು' ಎಂದಷ್ಟೆ ಹೇಳುತ್ತಿದ್ದ. ಎಂ ಎ ಪದವಿ ಗಳಿಸಿದ ಮೇಲೆ ಅಲ್ಪ ವೇತನದ ಸಣ್ಣ ಕೆಲಸವೊಂದು ಸಿಕ್ಕಿದಾಗ `ಸದ್ಯ ಅಷ್ಟಾದರೂ ಸಿಕ್ಕಿದೆಯಲ್ಲ' ಎಂದು ಸಮಾಧಾನಪಡಿಸಿದ್ದ.

`ಗುಡಿ ಚಚರ್ು ಮಸಜೀದಿಗಳ ಬಿಟ್ಟು ಹೊರಬನ್ನಿ' ಎಂಬ ಕವಿವಾಣಿಯನ್ನು ಬಲವಾಗಿ ನಂಬಿಕೊಂಡು ಅದರಂತೆ `ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು' ಎಂದುಕೊಂಡವನಿಗೆ ಅಪ್ಪನಿಂದಲೂ ಆಕ್ಷೇಪ ಬರಲಿಲ್ಲ. ಮೂಲದಿಂದ ಗೇಣಿದಾರರಾಗಿ ಲಿಂಗಾಯತ ಒಡೆಯರ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ಪನಿಗೆ ನಾನು ಸರಿಯಾದ ನೌಕರಿಯೂ ಇಲ್ಲದಿದ್ದಾಗ ಲಿಂಗಾಯತ ಹುಡುಗಿಯನ್ನು ಪ್ರೀತಿಯ ಕಾರಣ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಹೊರಟಾಗ ನನ್ನ ಹುಂಬತನವನ್ನು ಸಂಪೂರ್ಣ ಕ್ಷಮಿಸಿದ್ದಲ್ಲದೆ, `ಹುಡುಗಿಯ ಕಡೆಯವರು ಪ್ರಾಣಕ್ಕೆ ಅಪಾಯ ತಂದುಬಿಟ್ಟಾರೋ ಮಾರಾಯ' ಎಂದು ಎಚ್ಚರಿಸಿದ್ದ. ಸಂಗಾತಿಯನ್ನು ಗೆಳೆಯರಾದ ಬರುವೆ ತಿಮ್ಮಪ್ಪ ಮತ್ತು ನಾರಾಯಣ ಮೊಯ್ಲಿ ಅವರ ನೆರವಿನಿಂದ ಮೈಸೂರಿನಲ್ಲಿ ಆರ್ಯ ಸಮಾಜ ಪದ್ಧತಿಯನ್ವಯ ಮದುವೆಯಾಗಿ ಮರುದಿನವೇ ಪತ್ನಿ ಸಹಿತ ಊರಲ್ಲಿ ಅಪ್ಪ ಅವ್ವನ ಸಮ್ಮುಖ ಹಾಜರಾದಾಗ ಗದ್ದೆಕೊಯ್ಲಿನ ಹಂಗಾಮಿನಲ್ಲೂ ಅಂದು ಸಂಜೆ ನೂತನ ವಧೂವರರಿಗೆ ಸರಳವಾದ ಆರತಕ್ಷತೆಯನ್ನು ಏರ್ಪಡಿಸಿ ಸಂತೋಷಪಟ್ಟವನು ಅಪ್ಪ.

ಮನೆ, ಗಂಡ, ಮಕ್ಕಳ ಹಿತಚಿಂತನೆಯನ್ನೇ ಉಸಿರಾಗಿಸಿಕೊಂಡ ಅವ್ವ ಓದಿನ ಪ್ರಪಂಚದಿಂದ ತುಂಬ ದೂರ. ವಿದ್ಯಾಭ್ಯಾಸ, ಉದ್ಯೋಗದ ನೆಪದಲ್ಲಿ ಅಣ್ಣ, ನಾನು, ನನ್ನ ತಮ್ಮ ಮೂವರು ಏಕಕಾಲದಲ್ಲಿ ಬೇರೆ ಬೇರೆ ಊರುಗಳಲ್ಲಿದ್ದು ರಜೆ ಇದ್ದಾಗ ಇಲ್ಲವೇ ಹಬ್ಬದ ಸಂದರ್ಭಗಳಲ್ಲಿ ಊರಲ್ಲಿ ಒಟ್ಟಿಗೆ ಸೇರಿದಾಗ ಪಡುತ್ತಿದ್ದ ಸಂಭ್ರಮ ಮಾತಿಗೆ ನಿಲುಕುವಂಥದ್ದಲ್ಲ. ಒಬ್ಬೊಬ್ಬ ಮಗನೂ ಹೆಂಡತಿ ಮಕ್ಕಳೊಂದಿಗೆ ಊರಿನಿಂದ ನಿರ್ಗಮಿಸುವಾಗ ಮನೆಯಿಂದ ಸ್ವಲ್ಪ ದೂರದವರೆಗೆ ಬಂದು ಹನಿಗಣ್ಣಾಗಿ ಬೀಳ್ಕೊಡುತ್ತಿದ್ದ ದೃಶ್ಯ ನನ್ನನ್ನು ಬಹುಕಾಲ ಕಾಡಿಸುತ್ತಿತ್ತು. ಕಿರಿಯ ಮೂವರೂ ಮಕ್ಕಳು ನೌಕರಿ ಹಿಡಿದು ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಸಂಸಾರಗಳನ್ನು ನಿರ್ವಹಿಸುತ್ತಿದ್ದಾಗ ಅಪ್ಪ ಅವ್ವ ಇಬ್ಬರೂ ಬಂದು ಕೆಲವು ದಿನ ಇದ್ದು ಬದಲಾದ ಸನ್ನಿವೇಶಗಳಲ್ಲಿ ಹೆಚ್ಚು ಕಾಲ ಇರಲಾದರೆ ಊರಿಗೆ ವಾಪಸಾಗಿ ಬಿಡುತ್ತಿದ್ದರು. ಅಪ್ಪನ ಕೊನೆಯ ದಿನಗಳಲ್ಲಿ ಅವ್ವ ಅವನಿಗೆ ಮಾಡಿದ ಸೇವೆ, ಅಪ್ಪನ ನೇರ ನಿಷ್ಠುರ ನಡವಳಿಕೆ ನನ್ನ ಬರವಣಿಗೆಗೆ ಹೇಗೆಯೋ ಬದುಕಿಗೂ ಭದ್ರ ಅಡಿಪಾಯ ಹಾಕಿಕೊಟ್ಟಿರಬಹುದೇನೋ ಎಂಬ ಗುಮಾನಿ ನನ್ನದು.

ನಾನು ಎಂ ಎ ಮುಗಿಸಿ ಮೂರು ವರ್ಷ ವನವಾಸ- ಉಪವಾಸದ ನಂತರ ಬೆಂಗಳೂರಿನಲ್ಲಿ ಒಂದು ಕೆಲಸ ಹಿಡಿದು ನೆಲೆಗೊಂಡ ಹತ್ತು ವರ್ಷಗಳ ನಂತರ ಊರಲ್ಲಿದ್ದ ಅಪ್ಪನಿಗೆ ಪಾಶ್ರ್ವವಾಯು ಹಿಡಿದ ಸುದ್ದಿ ಬಂದಿತು. ಅದು ತಗುಲಿದ ಮೂರು ತಿಂಗಳ ಅವಧಿಯಲ್ಲಿ ಮಾತ್ರ ಅಪ್ಪನಿಗೆ ಬಂದು ಹೋಗುವವರ ಗುರುತು ಸಿಗುತ್ತಿತ್ತು. ನಂತರ ನೆನಪಿನ ಶಕ್ತಿ ಕುಂದಿತು. ಅವ್ವನ ನೆರವಿನಲ್ಲಿ ನಿಧಾನವಾಗಿ ಎದ್ದು ಓಡಾಡುತ್ತಿದ್ದವನು ಒಂದು ಬೆಳಿಗ್ಗೆ ಏಳಲೇ ಇಲ್ಲ. ಅಸಹಾಯಕತೆಯಿಂದ ಕಣ್ಣು ಬಿಡುತ್ತಿದ್ದ. ಆದರೆ ನಿತ್ಯಕರ್ಮಗಳು ಜರುಗುತ್ತಿದ್ದವು. ಗೊತ್ತಿಲ್ಲದಂತೆಯೇ ಹಾಸಿಗೆ ಒದ್ದೆಯಾಗುತ್ತಿತ್ತು. ಎಲ್ಲವೂ ಅಲ್ಲಿಯೇ ಆಗುತ್ತಿತ್ತು. ಬಾಯಿಗೆ ಅನ್ನ ಕಲೆಸಿ ಇಟ್ಟರೆ ಜಗಿದು ನುಂಗುತ್ತಿದ್ದ. ಆದ್ದರಿಂದ ಅವ್ವ ಹೊತ್ತಿಂದ ಹೊತ್ತಿಗೆ ಅನ್ನ ಸಾರು, ಮಜ್ಜಿಗೆ ಅನ್ನ ಇತ್ಯಾದಿ ಕಲೆಸಿ ಬಾಯಿಗಿಡುತ್ತಿದ್ದರು. ಅದನ್ನು ಬೇಕಾಗುವಷ್ಟು ತಿನ್ನುತ್ತಿದ್ದ. ಬೇಡವೆನ್ನಿಸಿದಾಗ ನಿಲ್ಲಿಸುತ್ತಿದ್ದ. ಹೊರಗಿನ ಪ್ರಜ್ಞೆ ಮರೆಯಾಗಿ ಹೋಗಿತ್ತು. ಹಾಸಿಗೆಯನ್ನು ನಿತ್ಯವೂ ಬದಲಿಸಬೇಕಿತ್ತು. ವಯಸ್ಕರ ಮೂತ್ರದ ವಾಸನೆ ಕಟು, ಸ್ವಲ್ಪ ಹೊತ್ತು ಬಿಟ್ಟರೆ ಇಡೀ ಜಗುಲಿ ವ್ಯಾಪಿಸುತ್ತಿತ್ತು. ಅದನ್ನು ತಕ್ಷಣವೇ ಸ್ವಚ್ಛಗೊಳಿಸಬೇಕಿತ್ತು. ಎಲ್ಲವನ್ನೂ ಅಪ್ಪನಿಗಿಂತ ನಾಲ್ಕೈದು ವರ್ಷವಷ್ಟೆ ವಯಸ್ಸಿನಲ್ಲಿ ಕಿರಿಯಳಾಗಿದ್ದ ಅವ್ವ ಯಾರೊಬ್ಬರ ನೆರವೂ ಇಲ್ಲದೆ ನಿರ್ವಹಿಸುತ್ತಿದ್ದರು. ಸ್ನಾನಕ್ಕೆ ಕರೆದೊಯ್ಯುವಾಗ ಮಾತ್ರ ಅಣ್ಣನ ಇಲ್ಲವೇ ಅಣ್ಣನ ಮಕ್ಕಳ ನೆರವನ್ನು ಪಡೆಯುತ್ತಿದ್ದರು.

ಸ್ವಲ್ಪ ಕಾಲದಲ್ಲಿ ಅಪ್ಪನಿಗೆ ಮಾತು ನಿಂತು ಹೋಯಿತು. ಯಾವ ಚಿಕಿತ್ಸೆಗೂ ಸ್ಪಂದಿಸುವಂತಿರಲಿಲ್ಲ. ಮಲಗಿದ ಭಂಗಿಯಲ್ಲಿಯೇ ಸ್ನಾನಕ್ಕೆ ಹೊತ್ತೊಯ್ಯುವುದು ಅನಿವಾರ್ಯವಾಗಿತ್ತು. ಅಲ್ಲಿ ಕುಚರ್ಿಯ ಮೇಲೆ ಪ್ರಯಾಸದಿಂದ ಕೂಡಿಸಿ ಹದವಾದ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಿದ್ದರು ಅವ್ವ. ಸ್ನಾನದ ನಂತರ ಹಾಗೆಯೇ ಹೊತ್ತುಕೊಂಡು ಬರುವುದು, ಸಿದ್ಧಪಡಿಸಿದ ಹಾಸಿಗೆ ಮೇಲೆ ಮಲಗಿಸುವುದು. ಸದಾ ಮಲಗಿದ್ದರೆ ಬೆನ್ನು ತರಚಿ ಗಾಯವಾದರೆ ಮಾಯುವುದು ಕಷ್ಟ ಎಂದು ಅವ್ವ ಎಚ್ಚರಿಕೆಯಿಂದ ಅಪ್ಪನ ಮಗ್ಗಲು ಬದಲಿಸುತ್ತಾ ಬೆನ್ನಲ್ಲಿ ಹುಣ್ಣು ಆಗದಂತೆ ನೋಡಿಕೊಂಡಿದ್ದರು. ಸ್ನಾನ ಮಾಡಿಸಿದ ನಂತರ ಮೈ ಸಂದುಗಳಿಗೆಲ್ಲ ಪೌಡರು ಬಳಿಯುತ್ತಿದ್ದರೆ ಹಸುಗೂಸನ್ನು ನೋಡಿಕೊಳ್ಳುತ್ತಿದ್ದ ದಿನಗಳು ನೆನಪಿಗೆ ಬರುತ್ತಿದ್ದವು.
ಹೀಗೆ ನಾಲ್ಕು ವರ್ಷಗಳ ಕಾಲ ಅಪ್ಪ ಶರಶಯ್ಯೆಯಲ್ಲಿದ್ದ ಭೀಷ್ಮನಂತೆ ಮಲಗಿದ್ದ. ಅವನನ್ನು ಉಳಿಸಿಕೊಳ್ಳಲು ಅವ್ವ ಪಡುತ್ತಿದ್ದ ಪಾಡು ಯಾವ ಸಾಧ್ವಿ ಸಾವಿತ್ರಿಗೂ ಕಡಿಮೆ ಇದ್ದಂತೆ ತೋರಲಿಲ್ಲ. ಅಪ್ಪ ಚೇತರಿಸಿಕೊಂಡು ಎಲ್ಲರಂತೆ ಬದುಕುತ್ತಾನೆ ಎಂಬ ಭ್ರಮೆಯೇನೂ ಅವ್ವನಿಗೆ ಇರಲಿಲ್ಲ. ಆದರೆ ರುಗ್ಣಶಯ್ಯೆಯಲ್ಲಿದ್ದ ಗಂಡನ ಸೇವೆಯನ್ನು ಮಾಡಲೇಬೇಕೆಂಬ ಹೆಂಡತಿಯ ಧರ್ಮವನ್ನು ಅವ್ವ ಪಾಲಿಸುತ್ತಿದ್ದರು. ಒಂದು ಮಧ್ಯರಾತ್ರಿ ಅಪ್ಪನ ಕಡೆಯಿಂದ ಗೊರ ಗೊರ ಸದ್ದು ಕೇಳಿಬಂದು ಹಾಗೆಯೇ ಕ್ಷೀಣವಾಗಿ ಹೋದಾಗ ಅವ್ವ ಗಾಬರಿಯಾಗಿ ಎದ್ದು ದೀಪ ಹಾಕಿ ನಿರೀಕ್ಷಿತವಾಗಿದ್ದರೂ ಅಪ್ಪನ ಕೊನೆಯ ಕ್ಷಣಗಳನ್ನು ಅನಿರೀಕ್ಷಿತವೆಂಬಂತೆ ಎದುರಿಸಿ ಹಾಲನ್ನು ಗಂಟಲಿಗೆ ಗುಟುಕು ಗುಟುಕಾಗಿ ಬಿಟ್ಟರಂತೆ..

ಅಪ್ಪನನ್ನು ಏಕಾಂಗಿಯಾಗಿ ಕೊನೆಯ ಕ್ಷಣದವರೆಗೆ ನೋಡಿಕೊಂಡವರು ಅವ್ವ. ಅಪ್ಪ ಗತಿಸಿದಾಗ ಅವ್ವನಿಗೆ 80 ವರ್ಷ. ಬಹುಕಾಲದ ಸಂಗಾತಿಯನ್ನು ಕಳೆದುಕೊಂಡ ಶೋಕದಲ್ಲಿ ತಿಂಗಳ ಕಾಲ ಬಳೆಗಳನ್ನು ಹಾಕಿಕೊಳ್ಳಲು ಆಸಕ್ತಿ ತೋರಲಿಲ್ಲ. ಆದರೆ, ನಾವು ಮಕ್ಕಳು, ಒತ್ತಾಯ ಹಾಕಿದ ಮೇಲೆ ಬಳೆಯನ್ನೂ ಹೂವುಗಳನ್ನು ಮುಡಿದುಕೊಳ್ಳಲು ಉತ್ಸಾಹ ತೋರಿದರು. ಹಸುರು ಬಳೆಗಳೆಂದರೆ ಅವ್ವನಿಗೆ ತುಂಬ ಇಷ್ಟ. ಅವುಗಳನ್ನು ನಾವು ತಂದು ತೊಡಿಸಿದಾಗ ಅವರ ಕಣ್ಣಲ್ಲಿ ಮಿಂಚಿನಂತೆ ಹನಿಗಳು ಉದುರುತ್ತಿದ್ದುದನ್ನು ನೋಡಿ ನಮಗೂ ಕಣ್ಣೀರು ತಡೆದುಕೊಳ್ಳಲಾಗುತ್ತಿರಲಿಲ್ಲ. ಅಪ್ಪ ಗತಿಸಿದ 15 ವರ್ಷಗಳ ನಂತರವೂ ಅಪರಿಮಿತ ಜೀವನೋತ್ಸಾಹ ಪ್ರದಶರ್ಿಸುತ್ತಿದ್ದ ಅವ್ವ ನಮ್ಮ ಬಂಧುಗಳ ಯಾವೊಂದು ಸಮಾರಂಭಕ್ಕೂ ಶೋಭೆ ತಂದು ಕೊಡುತ್ತಿದ್ದರು. ವೈಯಕ್ತಿಕ ಸ್ವಚ್ಛತೆಗೆ ತುಂಬ ಗಮನ ಕೊಡುತ್ತಿದ್ದ ಅವ್ವ 98ರ ವಯಸ್ಸಿನಲ್ಲಿಯೂ ತಮ್ಮ ಬಾಲ್ಯಕಾಲದ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮಕ್ಕಳು ಮೊಮ್ಮಕ್ಕಳು ಕೇಳುವ ಉತ್ಸಾಹ ತೋರಿದಾಗ ತಮ್ಮದೇ ಧಾಟಿಯಲ್ಲಿ ನಿರೂಪಿಸುತ್ತಿದ್ದರು. ಅವರ ಸುದೀರ್ಘ ಬದುಕು ಮತ್ತು ಜೀವನೋತ್ಸಾಹ ನನ್ನ ಬದುಕನ್ನು ಮಾತ್ರವಲ್ಲದೆ ಬರವಣಿಗೆಗೂ ಪ್ರೇರಕವಾಗಿದೆ.      (ಮುಂದುವರಿಯಲಿದೆ... )